ರಾಶಿ ರಾಶಿ ನೋಟುಗಳ ಮಧ್ಯೆ ಬೆತ್ತಲೆಯಾಗಿ ಮಲಗಿದ ರಾಜಕೀಯ ಮುಖಂಡ, ವೈರಲ್ ಆದ ಪೊಟೋ….!

Follow Us :

ಸೋಷಿಯಲ್ ಮಿಡಿಯಾ ಪ್ರಭಾವದಿಂದ ವಿಶ್ವ ಮೂಲೆ ಮೂಲೆಯಲ್ಲಿ ಏನೇ ನಡೆದರೂ ನಮ್ಮ ಕೈ ತುದಿಯಲ್ಲೇ ತಿಳಿದುಬಿಡುತ್ತದೆ. ದೇಶದ ನಾನಾ ಕಡೆ ಇಡಿ ಧಾಳಿ ನಡೆಸಿದ್ದು, ಕೋಟ್ಯಂತರ ಹಣ ಪತ್ತೆಯಾಗುತ್ತಿದೆ. ಇಂತಹ ಸಮಯದಲ್ಲಿ ರಾಜಕೀಯ ಮುಖಂಡನೊಬ್ಬ ರಾಶಿ ರಾಶಿ ನೋಟುಗಳ ಮಧ್ಯೆ ಬೆತ್ತಲೆಯಾಗಿ ಮಲಗಿದ್ದಾನೆ. ಈ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಈ ಪೊಟೋದಲ್ಲಿರುವುದು ಅಸ್ಸಾಂನ ರಾಜಕಾರಣಿ ಎಂದು ಹೇಳಲಾಗಿದೆ.

ಅಸ್ಸಾಂನ ಉದಾಲಗಿರಿ ಜಿಲ್ಲೆಯ ಭೈರ ಗುರಿಯಲ್ಲಿ ಗ್ರಾಮ ಸಭೆಯ ಅಭಿವೃದ್ದಿ ಸಮಿತಿ ಅಧ್ಯಕ್ಷ ಬೆಂಜಮಿನ್ ಬಾಸುಮತರಿ ಎಂಬಾತನೆ ರಾಶಿ ರಾಶಿ ನೋಟುಗಳ ಮದ್ಯೆ ಬೆತ್ತಲಾಗಿ ಮಲಗಿದ್ದಾನೆ. ಈ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಈತನ ವಿರುದ್ದ ಭ್ರಷ್ಟಾಚಾರದ ಆರೋಪ ಸಹ ಇದೆ ಎನ್ನಲಾಗಿದೆ. ಪ್ರಧಾನಮಂತ್ರಿ ವಸತಿ ಯೋಜನೆ ಹಾಗೂ ಗ್ರಾಮೀಣ ಉದ್ಯೋಗ ಯೋಜನೆಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಈತ ಸಹ ಭಾಗಿಯಾಗಿದ್ದಾನೆ ಎನ್ನಲಾಗಿದೆ. ಸರ್ಕಾರಿ ಯೋಜನೆಗಳನ್ನು ಬಡ ಫಲಾನುಭವಿಗಳಿಂದ ಲಂಚ ಪಡೆದಿರುವ ಆರೋಪ ಎದುರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇನ್ನೂ ಈ ಪೊಟೋ ವೈರಲ್ ಆಗುತ್ತಿದ್ದಂತೆ ಬೋಡೋಲ್ಯಾಂಡ್ ಮೂಲದ ಯುಪಿಪಿಎಲ್ (ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್) ಬೆಂಜಮಿನ್ ರವರಿಂದ ಅಂತರ ಕಾಯ್ದುಕೊಂಡಿದೆ. ಅವರನ್ನು ಕಳೆದ ಜನವರಿ ಮಾಹೆಯಲ್ಲೇ ವಜಾಗೊಳಿಸಲಾಗಿದೆ. ಎಂದು ಯುಪಿಪಿಎಲ್ ಮುಖ್ಯಸ್ಥ ಪ್ರಮೋದ್ ಬೊರೋ ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ. ಸದ್ಯ ರಾಜಕಾರಣಿಯ ರಾಶಿ ರಾಶಿ ಹಣದ ನಡುವೆ ಮಲಗಿರುವ ಪೊಟೋ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ.