Film News

ಸಮಯ ಬಂದಾಗ ಅದೇ ಆಗುತ್ತೆ, ಮದುವೆ ವಿಚಾರ ಈಗ ಏಕೆ ಎಂದ ಲಾವಣ್ಯ ತ್ರಿಪಾಠಿ, ವೈರಲ್ ಆದ ಕಾಮೆಂಟ್ಸ್….!

ಸಿನೆಮಾ ಸೆಲೆಬ್ರೆಟಿಗಳ ಬಗ್ಗೆ ಯಾವುದೇ ಸುದ್ದಿ ಕೇಳಿ ಬಂದರೇ ಕಡಿಮೆ ಸಮಯದಲ್ಲೇ ಸಿಕ್ಕಾಪಟ್ಟೆ ವೈರಲ್ ಆಗುತ್ತದೆ. ಅದು ಸುಳ್ಳಾಗಿರಲಿ, ನಿಜವಾಗಿರಲಿ ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತವೆ. ಸುಮಾರು ದಿನಗಳಿಂದ ಲಾವಣ್ಯ ತ್ರಿಪಾಠಿಯ ಮದುವೆಯ ರೂಮರ್‍ ಬಗ್ಗೆ ಕೆಲವೊಂದು ಸುದ್ದಿಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಸುದ್ದಿಯ ಬಗ್ಗೆ ಇದೀಗ ನಟಿ ಲಾವಣ್ಯ ತ್ರಿಪಾಠಿ ರಿಯಾಕ್ಟ್ ಆಗಿದ್ದಾರೆ. ಅದೆಲ್ಲಾ ಸುಳ್ಳು ಸುದ್ದಿ ಸಮಯ ಬಂದಾಗ ಮದುವೆ ಆಗುತ್ತೆ. ಸುಮ್ಮನೆ ಈ ಸುದ್ದಿಗಳನ್ನು ಹರಡಬೇಡಿ ಎಂದು ಲಾವಣ್ಯ ಹೇಳಿದ್ದಾರೆ.

ಯಂಗ್ ಬ್ಯೂಟಿ ಲಾವಣ್ಯ ತ್ರಿಪಾಠಿ ಸೌತ್ ನಲ್ಲಿ ಒಳ್ಳೆಯ ಕ್ರೇಜ್ ಪಡೆದುಕೊಂಡ ನಟಿಯಾಗಿದ್ದಾರೆ. ತೆಲುಗಿನಲ್ಲಿ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಒಳ್ಳೆಯ ಅಭಿಮಾನಿ ಬಳಗ ಪಡೆದುಕೊಂಡಿದ್ದಾರೆ. ಸದ್ಯ ಆಕೆ ಮೂರು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೂ ಸಿನೆಮಾಗಳ ಜೊತೆಗೆ ಆಕೆ ವೆಬ್ ಸಿರೀಸ್ ಗಳಲ್ಲೂ ಸಹ ನಟಿಸುತ್ತಿದ್ದಾರೆ. ಇತ್ತೀಚಿಗೆ ಆಕೆ ಪುಲಿ ಮೇಕ ಎಂಬ ವೆಬ್ ಸಿರೀಸ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಫೆ.24 ರಿಂದ ಈ ಸಿರೀಸ್ ಜಿ ತೆಲುಗು ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದ್ದು, ಒಳ್ಳೆಯ ರೆಸ್ಪಾನ್ಸ್ ಸಹ ಪಡೆದುಕೊಳ್ಳುತ್ತಿದೆ. ಈ ಸಿರೀಸ್ ನಲ್ಲಿ ಆಕೆ ಪೊಲೀಸ್ ಆಫೀಸರ್‍ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನೆಮಾದ ಪ್ರಚಾರ ಕಾರ್ಯಕ್ರಮ ಸಹ ಜೋರಾಗಿ ನಡೆಯುತ್ತಿದ್ದು, ಈ ವೇಳೆ ಲಾವಣ್ಯ ತಮ್ಮ ವೈಯುಕ್ತಿಕ ವಿಚಾರಗಳ ಬಗ್ಗೆ ಸಹ ಮಾತನಾಡಿದ್ದಾರೆ.

ಲಾವಣ್ಯ ತ್ರಿಪಾಠಿ ಮದುವೆಯ ಬಗ್ಗೆ ಅನೇಕ ಸುದ್ದಿಗಳು ಹರಿದಾಡುತ್ತಿದ್ದು, ಇದೀಗ ಆಕೆ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಈ ಬಗ್ಗೆ ರಿಯಾಕ್ಟ್ ಆಗಿದ್ದಾರೆ. ಎಲ್ಲರಿಗೂ ನನ್ನ ಮದುವೆಯ ಮೇಲೆ ಹೆಚ್ಚು ಆಸಕ್ತಿಯಿದೆ. ಈ ನನ್ನ ಮದುವೆಯ ಬಗ್ಗೆ ಏಕೆ ಚಿಂತೆ, ಟೈಂ ಬಂದಾಗ ಅದೇ ಆಗುತ್ತದೆ. ಮದುವೆ ವಿಚಾರದಲ್ಲಿ ನಮ್ಮ ಪೋಷಕರು ನನಗೆ ಯಾವುದೇ ರೀತಿಯ ಒತ್ತಡ ಆಗುತ್ತಿಲ್ಲ. ಅದರಿಂದ ನಾನು ತುಂಬಾ ಅದೃಷ್ಟವಂತೆ. ಇದೀಗ ನನಗೆ ಮದುವೆ ಬಗ್ಗೆ ಯೋಚನೆ ಇಲ್ಲ. ನನ್ನ ಕೆರಿಯರ್‍ ಮೇಲೆ ಪೋಕಸ್ ಇಟ್ಟಿದ್ದೇನೆ. ನನಗೆ ಮದುವೆಯ ಮೇಲೆ ನಂಬಿಕೆ ಇಲ್ಲ. ನಮ್ಮ ಜೀವನದಲ್ಲಿ ಸರಿಯಾದ ವ್ಯಕ್ತಿ ಬಂದಾಗ ಅದೇ ನಡೆಯುತ್ತದೆ. ಆಗ ಜೀವನ ಸಂತೋಷವಾಗಿರುತ್ತದೆ. ನನಗೆ ಸದ್ಯ ಮದುವೆ ಬಗ್ಗೆ ಯಾವುದೆ ಕನಸುಗಳು ಇಲ್ಲ ಎಂದು ತನ್ನ ಮೇಲಿನ ರೂಮರ್‍ ಗಳಿಗೆ ಚೆಕ್ ಇಟ್ಟಿದ್ದಾರೆ.

ನಟಿ ಲಾವಣ್ಯ ತ್ರಿಪಾಠಿ ಅಂದಾಲ ರಾಕ್ಷಸಿ ಎಂಬ ತೆಲುಗು ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಬಳಿಕ ಅನೇಕ ಆಫರ್‍ ಗಳನ್ನು ಪಡೆದುಕೊಂಡರು. ಕಳೆದ ವರ್ಷ ಹ್ಯಾಪಿ ಬರ್ತ್‌ಡೇ ಎಂಬ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈ ಸಿನೆಮಾ ಅಷ್ಟೊಂದು ಸಕ್ಸಸ್ ಕಾಣಲಿಲ್ಲ. ಬಳಿಕ ಆಕೆ ಪುಲಿ ಮೇಕ ಎಂಬ ವೆಬ್ ಸಿರೀಸ್ ನಲ್ಲಿ ಕಾಣಿಸಿಕೊಂಡರು. ಈ ಸಿರೀಸ್ ಒಳ್ಳೆಯ ಸಕ್ಸಸ್ ಕಂಡುಕೊಂಡಿದೆ.  ಸದ್ಯ ತಾನಲ್ ಎಂಬ ತಮಿಳು ಸಿನೆಮಾದಲ್ಲಿ ಲಾವಣ್ಯ ನಟಿಸುತ್ತಿದ್ದಾರೆ.

Most Popular

To Top