ಸಾಯಿಧರಮ್ ತೇಜ್ ರನ್ನು ಹಸ್ಬೆಂಡ್ ಮೆಟೀರಿಯಲ್ ಎಂದ ಕೇತಿಕಾ, ಸಾಯಿಧರಮ್ ಜೊತೆಗೆ ಪ್ರೀತಿಗೆ ಬಿದ್ರಾ ಕೇತಿಕಾಶರ್ಮಾ….!

Follow Us :

ಮೆಗಾ ಕುಟುಂಬದ ಸುಪ್ರೀಂ ಹಿರೋ ಸಾಯಿ ಧರಮ್ ತೇಜ್ ಅನೇಕ ಸಿನೆಮಾಗಳ ಮೂಲಕ ಭಾರಿ ಫೇಂ ಪಡೆದುಕೊಂಡಿದ್ದರು. ಸಿನಿರಂಗದಲ್ಲಿ ಅನೇಕ ಹ್ಯಾಂಡ್ಸಮ್ ಹಿರೋಗಳು ಇದ್ದರೂ ಸಹ ಅನೇಕ ಹಿರೋಯಿನ್ ಗಳ ಮನಸ್ಸನ್ನು ಕದ್ದಿದ್ದಾರೆ ಎನ್ನಬಹುದಾಗಿದೆ. ಕೆಲ ಹಿರೋಯಿನ್ ಗಳಲ್ಲಿ ಸಾಯಿ ಧರಮ್ ತೇಜ್ ಅಂದರೇ ತುಂಬಾನೆ ಕ್ರೇಜ್ ಹೊಂದಿದ್ದಾರೆ. ಇದೀಗ ಟಾಲಿವುಡ್ ಯಂಗ್ ಅಂಡ್ ಹಾಟ್ ಬ್ಯೂಟಿ ಕೇತಿಕಾ ಶರ್ಮಾ ಸಾಯಿಧರಮ್ ತೇಜ್ ರನ್ನು ಹಸ್ಬೆಂಡ್ ಮೆಟೀರಿಯಲ್ ಎಂದು ಕಾಮೆಂಟ್ ಮಾಡಿದ್ದು, ಈ ಕಾರಣದಿಂದ ಸಾಯಿಧರಮ್ ಜೊತೆಗೆ ಕೇತಿಕಾ ಪ್ರೀತಿಗೆ ಬಿದ್ರಾ ಎಂಬ ಚರ್ಚೆ ಕೇಳಿಬರುತ್ತಿದೆ.

ನಟ ಸಾಯಿ ಧರಮ್ ತೇಜ್ ಸಿನಿರಂಗದಲ್ಲಿ ಒಳ್ಳೆಯ ಹೆಸರನ್ನು ಪಡೆದುಕೊಂಡಿದ್ದಾರೆ. ಅವರ ಒಳ್ಳೆಯ ಮನಸ್ಸಿನ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅವಶ್ಯಕತೆಯಿಲ್ಲ. ಮೆಗಾ ಹಿರೋ ಆದರೂ ಸಹ ಯಾವುದೇ ಗರ್ವವಿಲ್ಲದೇ ಎಲ್ಲರೊಂದಿಗೂ ಸರಳವಾಗಿಯೇ ಇರುತ್ತಾರೆ. ಈ ಕಾರಣದಿಂದಲೇ ಅನೇಕ ನಟಿಯರು ಸಾಯಿಧರಮ್ ತೇಜ್ ರವರನ್ನು ಹಸ್ಬೆಂಡ್ ಮೆಟೀರಿಯಲ್ ಎಂದು ಹೇಳುತ್ತಿರುತ್ತಾರೆ. ಇದೀಗ ಟಾಲಿವುಡ್ ಯಂಗ್ ಅಂಡ್ ಹಾಟ್ ಹಿರೋಯಿನ್ ಕೇತಿಕಾ ಶರ್ಮಾ ಸಹ ಸಾಯಿ ಧರಮ್ ತೇಜ್ ರವರನ್ನು ಹಸ್ಬೆಂಡ್ ಮೆಟೀರಿಯಲ್ ಎಂದು ಕಾಮೆಂಟ್ ಮಾಡಿದ್ದು, ಆಕೆಯ ಕಾಮೆಂಟ್ ಗಳು ಇದೀಗ ವೈರಲ್ ಆಗುತ್ತಿದೆ.

ಇನ್ನೂ ಈ ಹಿಂದೆ ವರುಣ್ ತೇಜ್ ರವರ ಬಗ್ಗೆ ಲಾವಣ್ಯ ತ್ರಿಪಾಠಿ ಸಹ ಹಸ್ಬೆಂಡ್ ಮೆಟೀರಿಯಲ್ ಎಂದು ಹೇಳಿದ್ದರು. ಮದುವೆಗೂ ಮುಂಚೆ ನಡೆದ ಸಂದರ್ಶನವೊಂದರಲ್ಲಿ ವರುಣ್ ತೇಜ್ ಹಸ್ಬೆಂಡ್ ಮೆಟೀರಿಯಲ್ ಎಂದು ಕಾಮೆಂಟ್ ಮಾಡಿದ್ದರು. ಇದೀಗ ತೆಲುಗು ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಹಾಟ್ ಬ್ಯೂಟಿ ಕೇತಿಕಾ ಶರ್ಮಾ ಸಹ ಸಾಯಿ ಧರಮ್ ತೇಜ್ ಬಗ್ಗೆ ಮಾತನಾಡಿದ್ದಾರೆ. ಕೇತಿಕಾ ಸಾಯಿಧರಮ್ ತೇಜ್ ಹಾಗೂ ವೈಷ್ಣವ್ ತೇಜ್ ಜೊತೆಗೆ ನಟಿಸಿದ್ದಾರೆ. ಈ ಸಂಬಂಧ ಕೇತಿಕಾ ಗೆ ಪ್ರಶ್ನೆಯೊಂದು ಎದುರಾಗಿತ್ತು. ಸಾಯಿಧರಮ್ ತೇಜ್ ಹಾಗೂ ವೈಷ್ಣವ್ ತೇಜ್ ಇಬ್ಬರೊಂದಿಗೆ ನೀವು ನಟಿಸಿದ್ದೀರಾ, ಅವರಿಬ್ಬರಲ್ಲಿ ಯಾರು ಹಸ್ಬೆಂಡ್ ಮೆಟೀರಿಯಲ್ ಎಂದು ಪ್ರಶ್ನೆ ಎದುರಾಗಿದೆ. ಈ ಪ್ರಶ್ನೆಗೆ ಕೇತಿಕಾ ಉತ್ತರ ನೀಡಿದ್ದು, ಆಕೆಯ ಕಾಮೆಂಟ್ ಗಳು ವೈರಲ್ ಆಗಿದೆ.

ಶೋ ನಲ್ಲಿ ಎದುರಾದಂತಹ ಪ್ರಶ್ನೆಗೆ ಕೇತಿಕಾ ಉತ್ತರ ನೀಡುತ್ತಾ, ಸಾಯಿಧರಮ್ ತೇಜ್ ಹಸ್ಬೆಂಡ್ ಮೆಟೀರಿಯಲ್ ಆದರೆ ಇಬ್ಬರೂ ತುಂಬಾ ಸ್ಟೀಟ್. ಅವರಿಬ್ಬರಿಗೂ ನಾನು ತುಂಬಾ ಕ್ಲೋಜ್. ವೈಷ್ಣವ್ ಹಾಗೂ ನಾನು ಚಿಕ್ಕಮಕ್ಕಳಂತೆ ಹೊಡೆದಾಡುಕೊಳ್ಳುತ್ತಿರುತ್ತೇವೆ. ತೇಜ್ ಜೊತೆಗೆ ತುಂಬಾ ಡೀಪ್ ವಿಚಾರಗಳನ್ನು ಸಹ ಮಾತನಾಡಿಕೊಳ್ಳುತ್ತಿರುತ್ತೇವೆ ಎಂದು ಹೇಳಿದ್ದಾರೆ. ಇದೀಗ ಕೇತಿಕಾ ನೀಡಿದ ಕಾಮೆಂಟ್ ಗಳು ವೈರಲ್ ಆಗುತ್ತಿದ್ದು, ಕೇತಿಕಾ ಮೆಗಾ ಹಿರೋ ಸಾಯಿ ಧರಮ್ ತೇಜ್ ಜೊತೆಗೆ ಪ್ರೀತಿಗೆ ಬಿದ್ರಾ ಎಂಬ ಸುದ್ದಿ ಕೇಳಿಬರುತ್ತಿದೆ.