ರಾಮಮಂದಿರದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಉದಯನಿಧಿ ಸ್ಟಾಲಿನ್, ದೇಶದಾದ್ಯಂತ ವ್ಯಕ್ತವಾದ ಆಕ್ರೋಷ…..!

Follow Us :

ಕೆಲವು ತಿಂಗಳುಗಳ ಹಿಂದೆ ತಮಿಳುನಾಡಿನ ನಟ ಕಂ ರಾಜಕಾರಣಿ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ದೇಶದ ಅಪಾರ ಸಂಖ್ಯೆಯ ಹಿಂದೂಗಳ ಆಕ್ರೋಷಕ್ಕೆ ಗುರಿಯಾಗಿದ್ದರು. ಇದೀಗ ಮತ್ತೊಮ್ಮೆ ಸ್ಟಾಲಿನ್ ಹಿಂದೂಗಳ ಆಕ್ರೋಷಕ್ಕೆ ಕಾರಣವಾಗಿದ್ದಾರೆ. ರಾಮಮಂದಿರ ನಿರ್ಮಾಣದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು, ಅವರ ವಿರುದ್ದ ದೇಶದಾದ್ಯಂತ ದೊಡ್ಡ ಮಟ್ಟದಲ್ಲೇ ಆಕ್ರೋಷ ವ್ಯಕ್ತವಾಗುತ್ತಿದೆ.

ಕೆಲವು ದಿನಗಳ ಹಿಂದೆ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ ಕಾಯಿಲೆಗಳು ಇದ್ದಂತೆ ಅದನ್ನು ನಾಶ ಮಾಡಬೇಕು ಎಂದು ಹೇಳಿಕೆ ನೀಡಿ ಭಾರಿ ವಿವಾದ ಹುಟ್ಟಿಹಾಕಿದ್ದರು. ಇದೀಗ ರಾಮಮಂದಿರದ ಬಗ್ಗೆ ಕಾಮೆಂಟ್ ಮಾಡಿ ಸುದ್ದಿಯಾಗಿದ್ದಾರೆ. ನಮ್ಮ ಅಜ್ಜ ಅಪ್ರತಿಮ ರಾಜಕಾರಣಿ, ತಮಿಳುನಾಡು ಮಾಜಿ ಸಿಎಂ ಎಂ.ಕೆ.ಕರುಣಾನಿಧಿ ಅವರು ಹಾಗೂ ನಮ್ಮ ಡಿಎಂಕೆ ಪಕ್ಷ ಯಾವುದೇ ಧರ್ಮ ಅಥವಾ ನಂಬಿಕೆಗೆ ವಿರೋಧಿಯಲ್ಲ. 1992ರ ಪ್ರಕರಣವನ್ನು ಉಲ್ಲೇಖಿಸಿ ಅಯೋಧ್ಯೆಯಲ್ಲಿ ದೇವಸ್ಥಾನ ಬರುವುದರಿಂದ ನಮಗೆ ಯಾವುದೇ ಸಮಸ್ಯೆಯಿಲ್ಲ. ಆದರೆ ಮಸೀದಿ ಕೆಡವಿದ ಬಳಿಕ ಮಂದಿರ ನಿರ್ಮಾಣಕ್ಕೆ ನಾವು ಒಪ್ಪೊಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಈ ಹಿಂದೆ ಸ್ಟಾಲಿನ್ ಸನಾತನ ಧರ್ಮವನ್ನು ಡೆಂಗ್ಯೂ ಹಾಗೂ ಮಲೇರಿಯಾ ರೋಗಕ್ಕೆ ಹೋಲಿಕೆ ಮಾಡಿ, ಸನಾತನ ಧರ್ಮವನ್ನು ಸರ್ವನಾಶ ಮಾಡಬೇಕಿದೆ. ಅದು ಡೆಂಗ್ಯೂ, ಮಲೇರಿಯಾ ರೋಗದಂತೆ. ಸನಾತನ ಧರ್ಮ ಸಮಾನತೆ ಹಾಗೂ ಸಾಮಾಜಿಕ ನ್ಯಾಯಕ್ಕೆ ವಿರುದ್ದವಾಗಿದೆ ಆದ್ದರಿಂದ ಸನಾತನ ಧರ್ಮವನ್ನು ಸಂಪೂರ್ಣವಾಗಿ ನಾಶ  ಮಾಡಬೇಕೆಂದು ಹೇಳಿದ್ದರು. ಈ ಹೇಳಿಕೆ ನೀಡಿದ ಬಳಿಕ ಉದಯನಿಧಿ ವಿರುದ್ದ ದೊಡ್ಡ ಮಟ್ಟದ ಆಕ್ರೋಷ ವ್ಯಕ್ತವಾಗಿತ್ತು. ಇದೀಗ ರಾಮಮಂದಿರದ ಬಗ್ಗೆ ಮಾತನಾಡಿ ಮತ್ತೊಮ್ಮೆ ವಿವಾದ ಹುಟ್ಟಿಹಾಕಿದ್ದಾರೆ. ಆತನ ವಿರುದ್ದ ದೇಶದಾದ್ಯಂತ ಭಾರಿ ಆಕ್ರೋಷ ವ್ಯಕ್ತವಾಗುತ್ತಿದೆ.