Film News

IMDb ರೇಟಿಂಗ್ಸ್ ನಂತೆ ಪಾಪ್ಯುಲರ್ ಇಂಡಿಯನ್ ಸೆಲೆಬ್ರೆಟಿಯಾಗಿ ಮೂರನೇ ಸ್ಥಾನ ಪಡೆದುಕೊಂಡ ಸ್ಟಾರ್ ನಟಿ ರಶ್ಮಿಕಾ….!

ಅತೀ ಕಡಿಮೆ ಸಮಯದಲ್ಲೇ ಭಾರಿ ಕ್ರೇಜ್ ಪಡೆದುಕೊಂಡ ನಟಿಯರ ಸಾಲಿಗೆ ಸ್ಯಾಂಡಲ್ ವುಡ್ ಮೂಲದ ನಟಿ ರಶ್ಮಿಕಾ ಮಂದಣ್ಣ ಸೇರುತ್ತಾರೆ. ದಿನೇ ದಿನೇ ಆಕೆಯ ಕ್ರೇಜ್ ಏರುತ್ತಲೇ ಇದೆ. ಸೌತ್ ಅಂಡ್ ನಾರ್ತ್ ನಲ್ಲಿ ಸ್ಟಾರ್‍ ಗಳ ಜೊತೆಗೆ ಸಿನೆಮಾಗಳನ್ನು ಮಾಡುತ್ತಾ ಸಕ್ಸಸ್ ಪುಲ್ ಆಗಿ ಕೆರಿಯರ್‍ ಸಾಗಿಸುತ್ತಿದ್ದಾರೆ.ಇದೀಗ ಆಕೆ ಮತಷ್ಟು ಖ್ಯಾತಿಯನ್ನು ಪಡೆದುಕೊಂಡಿದ್ದಾರೆ. IMDb ಸಂಸ್ಥೆಯ ರೇಟಿಂಗ್ಸ್ ನಂತೆ ಪಾಪ್ಯುಲರ್‍ ಇಂಡಿಯನ್ ಸೆಲೆಬ್ರೆಟಿಯಾಗಿ ರಶ್ಮಿಕಾ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಕನ್ನಡದ ಕಿರಿಕ್ ಪಾರ್ಟಿ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಮೊದಲನೇ ಸಿನೆಮಾದ ಮೂಲಕ ಒಳ್ಳೆಯ ಮಾಕ್ಸ್ ಪಡೆದುಕೊಂಡ ಈಕೆ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ನಟಿಸುವ ಅವಕಾಶಗಳನ್ನು ಪಡೆದುಕೊಂಡರು. ಬಳಿಕ ಟಾಲಿವುಡ್ ಗೆ ಹಾರಿದರೂ ಅಲ್ಲೂ ಸಹ ಒಳ್ಳೆಯ ಸಿನೆಮಾಗಳನ್ನು ಮಾಡಿದ ಈಕೆ ಪುಷ್ಪಾ ಸಿನೆಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್‍ ಆದರು. ಜೊತೆಗೆ ನ್ಯಾಷನಲ್ ಕ್ರಷ್ ಎಂಬ ಖ್ಯಾತಿ ಸಹ ಪಡೆದುಕೊಂಡರು. ಬಳಿಕ ತಮಿಳು, ಹಿಂದಿ ಸಿನೆಮಾಗಳಲ್ಲೂ ಸಹ ನಟಿಸುವ ಮೂಲಕ ಸೌತ್ ಅಂಡ್ ನಾರ್ತ್ ನಲ್ಲೂ ಬಹುಬೇಡಿಕೆ ನಟಿಯಾದರು. ಇದೀಗ IMDb ಸಂಸ್ಥೆಯ ರೇಟಿಂಗ್ಸ್ ನಂತೆ ಇಂಡಿಯನ್ ಪಾಪ್ಯುಲರ್‍ ಸೆಲೆಬ್ರೆಟಿಯಾಗಿ ರಶ್ಮಿಕಾ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.

ಭಾರತದಲ್ಲಿ ಅತ್ಯಂತ ಪಾಪ್ಯುಲರ್‍ ಸೆಲೆಬ್ರೆಟಿಗಳಲ್ಲಿ ರಶ್ಮಿಕಾ ಮೂರನೇ ಸ್ಥಾನ ಪಡೆದುಕೊಂಡಿದ್ದು, ಆಕೆಯ ಅಭಿಮಾನಿಗಳು ಪುಲ್ ಖುಷಿಯಾಗಿದ್ದಾರೆ. ಆಕೆಗೆ ಶುಭಾಷಯಗಳನ್ನು ಸಹ ಹರಿಸುತ್ತಿದ್ದಾರೆ. ಇನ್ನೂ ನಟಿ ರಶ್ಮಿಕಾ ಮಂದಣ್ಣ ಕಳೆದ ವಾರ ಐಪಿಎಲ್ ಪ್ರಾರಂಭ ಕಾರ್ಯಕ್ರಮಗಳಲ್ಲೂ ಸಹ ಭಾಗಿಯಾಗಿದ್ದರು. ಈ ಕಾರಣದಿಂದ ರಶ್ಮಿಕಾ ಹೆಸರು ಮತಷ್ಟು ಹೆಚ್ಚಾಯಿತು. ಜೊತೆಗೆ ಬ್ಯಾಕ್ ಟು ಬ್ಯಾಕ್ ಭಾರಿ ಪ್ರಾಜೆಕ್ಟ್ ಗಳಲ್ಲೂ ಸಹ ಆಕೆ ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದ ವಾರವಷ್ಟೆ ಆಕೆಯ ಹುಟ್ಟುಹಬ್ಬ ಆಚರಿಸಿಕೊಂಡಿದ್ದು. ಆಕೆಯ ಹುಟ್ಟುಹಬ್ಬದ ಅಂಗವಾಗಿ ಪುಷ್ಪಾ-2 ಚಿತ್ರತಂಡ ಆಕೆಯ ಫಸ್ಟ್ ಲುಕ್ ಪೋಸ್ಟರ್‍ ಸಹ ಬಿಡುಗಡೆ ಮಾಡಲಾಗಿತ್ತು. ಇನ್ನೂ ಈ ಪೋಸ್ಟರ್‍ ಟ್ರೆಂಡಿಂಗ್ ನಲ್ಲಿತ್ತು. ಈ ಹಾದಿಯಲ್ಲೇ ಆಕೆ ಮೋಸ್ಟ್ ಪಾಪ್ಯುಲರ್‍ ಸೆಲೆಬ್ರೆಟಿಯಾಗಿದ್ದಾರೆ. ಇನ್ನೂ ಇದಕ್ಕೆ ರಶ್ಮಿಕಾ ಸಹ ಪುಲ್ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

ಇನ್ನೂ ರಶ್ಮಿಕಾ ಟಾಲಿವುಡ್ ನ ಪ್ಯಾನ್ ಇಂಡಿಯಾ ಮೂವಿ ಪುಷ್ಪಾ-2 ನಲ್ಲಿ ಹಾಗೂ ಬಾಲಿವುಡ್ ನಲ್ಲಿ ಯಾನಿಮಲ್ ಎಂಬ ಭಾರಿ ಪ್ರಾಜೆಕ್ಟ್ ನಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ನಿತಿನ್ ಜೊತೆಗೆ ಒಂದು ಸಿನೆಮಾ ಹಾಗೂ ಲೇಡಿ ಓರಿಯೆಂಟೆಂಡ್ ಸಿನೆಮಾ ರೈನ್ ಬೋ ದಲ್ಲೂ ಸಹ ಆಕೆ ನಟಿಸಲಿದ್ದಾರೆ.

Most Popular

To Top