ರಶ್ಮಿಕಾ ಮಂದಣ್ಣ ಗೆ, ನಿನ್ನ ಪ್ರಿಯಕರನನ್ನು ಓಡಿಸಿದಂತೆ ನಿನ್ನನ್ನು ಓಡಿಸುತ್ತೇವೆ ಎಂದು ಹಿಂದಿ ನಿರ್ಮಾಪಕ ಟ್ವೀಟ್…!

Follow Us :

ಕನ್ನಡದ ಕಿರಿಕ್ ಪಾರ್ಟಿ ಸಿನೆಮಾದ ಮೂಲಕ ಸೌತ್ ಅಂಡ್ ನಾರ್ತ್ ನಲ್ಲೂ ಬೇಡಿಕೆ ಹೆಚ್ಚಿಸಿಕೊಂಡ ನಟಿಯರಲ್ಲಿ ರಶ್ಮಿಕಾ ಮಂದಣ್ಣ ಅಗ್ರಸ್ಥಾನದಲ್ಲಿರುತ್ತಾರೆ. ಸದ್ಯ ಸೌತ್ ಅಂಡ್ ನಾರ್ತ್‌ನಲ್ಲೂ ಬ್ಯುಸಿಯಾಗಿರುವ ಈಕೆ  ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಸದ್ದು ಮಾಡುತ್ತಿದ್ದಾರೆ. ಇದೀಗ ರಶ್ಮಿಕಾ ಮಂದಣ್ಣ ಬಗ್ಗೆ ಬಾಲಿವುಡ್ ನಿರ್ಮಾಪಕರೊಬ್ಬರು ಕಾಮೆಂಟ್ ಮಾಡಿದ್ದಾರೆ. ನಿನ್ನ ಪ್ರಿಯಕರನ್ನು ಓಡಿಸಿದಂತೆ ಬಾಲಿವುಡ್ ನಿಂದ ನಿನ್ನನ್ನು ಸಹ ಓಡಿಸುತ್ತೇವೆ ಎಂದು ಶಾಕಿಂಗ್ ಕಾಮೆಂಟ್ ಮಾಡಿದ್ದಾರೆ.

ವಿವಾದಾತ್ಮಕ ಫಿಲಂ ಕ್ರಿಟಿಕ್ ಕಮಲ್ ಆರ್‍ ಖಾನ್ ಸದಾ ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಯಲ್ಲಿರುತ್ತಾರೆ. ಬಾಲಿವುಡ್ ನಿರ್ಮಾಪಕ, ನಟ ಹಾಗೂ ಫಿಲಂ ಕ್ರಿಕಿಟ್ ಆದ ಕಮಲ್ ಆರ್‍ ಖಾನ್ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಬಾಲಿವುಡ್ ನ ಅನೇಕ ಸೂಪರ್‍ ಸ್ಟಾರ್‍ ಗಳ ಬಗ್ಗೆ ಸಹ ಶಾಕಿಂಗ್ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಅದರಲ್ಲೂ ಕರಣ್ ಜೋಹರ್‍, ಸಲ್ಮಾನ್ ಖಾನ್ ರಂತಹ ದೊಡ್ಡ ದೊಡ್ಡ ಸ್ಟಾರ್‍ ಗಳನ್ನು ಟಾರ್ಗೆಟ್ ಮಾಡಿಕೊಂಡು ಅವರ ವಿರುದ್ದ ಕಾಮೆಂಟ್ ಗಳನ್ನು ಮಾಡುತ್ತಿರುತ್ತಾರೆ. ಅದರಲ್ಲೂ ಆತನಿಗೆ ಸೌತ್ ಸಿನೆಮಾಗಳ ಮೇಲೆ ಕಿಂಚಿತ್ತು ಗೌರವ ತೋರುವುದಿಲ್ಲ. ಈ ಹಿಂದೆ ಬಾಹುಬಲಿ ಸಿನೆಮಾದ ಬಗ್ಗೆ ಸಹ ಈತ ಕಾಮೆಂಟ್ ಮಾಡಿದ್ದ. ಬಾಹುಬಲಿ ಸಿನೆಮಾ ಕಾರ್ಟೂನ್ ಸಿನೆಮಾ ಎಂದು ಹಿಯಾಳಿಸಿದ್ದರು. ಸದಾ ಸ್ಟಾರ್‍ ಗಳನ್ನು ಟಾರ್ಗೆಟ್ ಮಾಡುವ ಈತನ ಟ್ವಿಟರ್‍ ಅಕೌಟ್ ಅನ್ನು ಸಹ ಟ್ವಿಟರ್‍ ಸಸ್ಪೆಂಡ್ ಮಾಡಿತ್ತು.

ಈ ಹಾದಿಯಲ್ಲೇ ಇದೀಗ ರಶ್ಮಿಕಾ ಮಂದಣ್ಣ ಬಗ್ಗೆ ಕಮಲ್ ಆರ್‍ ಖಾನ್ ಶಾಕಿಂಗ್ ಕಾಮೆಂಟ್ ಮಾಡಿದ್ದಾರೆ. ಆಕೆಯನ್ನು ಹಿಯಾಳಿಸಿ ಕಾಮೆಂಟ್ ಮಾಡಿದ್ದಾರೆ. ಹೇ ರಶ್ಮಿಕಾ ಮೇಡಂ ನಿನ್ನ ಪ್ರಿಯಕರ ಅನಕೊಂಡನು ಲೈಗರ್‍ ಪ್ಲಾಪ್ ಮಾಡುವ ಮೂಲಕ ಹೇಗೆ ಹೊರಹಾಕಿದೆವೋ ಅದೇ ರೀತಿ ನಿನ್ನು ಸಹ ಓಡಿಸುತ್ತೇವೆ. ಆದರೆ ನೀನು ಭೋಜ್ ಪೂರಿ ಸಿನೆಮಾಗಳು ಮಾಡಿದರೇ ನಮಗೆ ಒಪ್ಪಿಗೆಯಿದೆ. ನಾವು ಸಹ ಖುಷಿಯಾಗುತ್ತೇವೆ ಎಂಬ ಅರ್ಥ ಬರುವಂತೆ ಟ್ವೀಟ್ ಮಾಡಿದ್ದಾರೆ. ರಶ್ಮಿಕಾ ರವರನ್ನು ನ್ಯಾಷನಲ್ ಕ್ರಷ್ ಎಂದು ಫೀಲ್ ಆಗುವಂತಹವರು ಅವರ ಕಣ್ಣುಗಳನ್ನು ಒಮ್ಮೆ ಪರೀಕ್ಷೆ ಮಾಡಿಸಿಕೊಳ್ಳಬೇಕು.  ಎಂದು ಕಮಲ್ ಆರ್‍ ಖಾನ್ ಹೇಳಿದ್ದು, ಆತನ ಹೇಳಿಕೆಗಳು ಇದೀಗ ಹಾಟ್ ಟಾಪಿಕ್ ಆಗಿದೆ.

ಇನ್ನೂ ರಶ್ಮಿಕಾ ಬೋಜ್ ಪುರಿ ಸಿನೆಮಾಗಳಲ್ಲಿ ನಟಿಸಲು ಮಾತ್ರ ಅರ್ಹತೆ ಹೊಂದಿದ್ದಾರೆ ಎಂದು ಹೇಳಿದ್ದಾರೆ. ರಶ್ಮಿಕಾ ಟ್ಯಾಲೆಂಟ್, ಗ್ಲಾಮರ್‍ ಹಾಗೂ ಆಕೆಯ ಕ್ರೇಜ್ ಬಗ್ಗೆ ಕಮಲ್ ಆರ್‍ ಖಾನ್ ರಶ್ಮಿಕಾಳನ್ನು ಹಿಯಾಳಿಸಿ ಮಾತನಾಡಿದ್ದಾರೆ. ಆದರೆ ಆತನನ್ನು ಯಾರು ಹೇಗೆ ಯಾವ ರೀತಿಯಲ್ಲಿ ಬೈದರೂ, ಟ್ವೀಟ್ ಮಾಡಿದರು ಆತ ಮಾತ್ರ ತಲೆಗೆ ಹಾಕಿಕೊಳ್ಳುವುದಿಲ್ಲ. ಜೊತೆಗೆ ಆತ ಕಾಮೆಂಟ್ ಮಾಡುವುದನ್ನೂ ಸಹ ಬಿಡುವುದಿಲ್ಲ. ಇದೀಗ ರಶ್ಮಿಕಾ ಅಥವಾ ವಿಜಯ್ ದೇವರಕೊಂಡ ಫ್ಯಾನ್ಸ್ ಆತನನ್ನು ಕೆಟ್ಟದಾಗಿ ಕಾಮೆಂಟ್ ಮೂಲಕ ಬೈದರೂ ಸಹ ಆತ ಕಿವಿಗೆ ಹಾಕಿಕೊಳ್ಳುವುದಿಲ್ಲ ಎನ್ನಲಾಗುತ್ತಿದೆ.