Film News

ಶಾರ್ಟ್ ಡ್ರೆಸ್ ನಲ್ಲಿ ಸ್ಟನ್ನಿಂಗ್ ಪೋಸ್ ಕೊಟ್ಟ ಆಂಕರ್ ಶ್ರೀಮುಖಿ, ಬಾಲಿವುಡ್ ನಟಿಯರಿಗಿಂತ ಕಡಿಮೆಯಿಲ್ಲ ಎಂಬಂತೆ ಪೋಸ್…!

ತೆಲುಗು ಕಿರುತರೆಯ ಸ್ಟಾರ್‍ ಅಂಕರ್‍ ಗಳಲ್ಲಿ ಶ್ರೀಮುಖಿ ಇತ್ತಿಚಿಗೆ ಸೋಷಿಯಲ್ ಮಿಡಿಯಾದಲ್ಲಿ ಸೌಂದರ್ಯದ ಸುನಾಮಿಯನ್ನು ಸೃಷ್ಟಿ ಮಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಕ್ರೇಜಿ, ಹಾಟ್ ಪೊಟೋಶೂಟ್ಸ್ ಮೂಲಕ ಹಾಟ್ ಟ್ರೀಟ್ ನೀಡುತ್ತಿದ್ದಾರೆ. ತೆಲುಗು ಆಂಕರ್‍ ಗಳಲ್ಲಿ ತನ್ನದೇ ಆದ ಕ್ರೇಜ್ ಸೃಷ್ಟಿಸಿಕೊಂಡು ಕಿರುತೆರೆಯಲ್ಲಿ ಮುನ್ನುಗ್ಗುತ್ತಿದ್ದಾರೆ. ಆಂಕರ್‍ ಶ್ರೀಮುಖಿ ಕಿರುತೆರೆಯಲ್ಲಿ ಅನೇಕ ಶೋಗಳನ್ನು ಮಾಡುವ ಮೂಲಕ ಸ್ಟಾರ್‍ ನಟಿಯರಂತೆ ಫ್ಯಾನ್ ಫಾಲೋಯಿಂಗ್ ಸಹ ಬೆಳೆಸಿಕೊಂಡಿದ್ದಾರೆ.

ಆಂಕರ್‍ ಶ್ರೀಮುಖಿ ಇತ್ತೀಚಿಗೆ ಗ್ಲಾಮರ್‍ ಶೋ ಹೆಚ್ಚಿಸಿದ್ದಾರೆ. ಬೋಲ್ಡ್ ಆಂಕರ್‍ ಆಗಿ ಫೇಮ್ ಪಡೆದುಕೊಳ್ಳುತ್ತಿದ್ದಾರೆ. ದೇಹದ ಮೈಮಾಟ ಪ್ರದರ್ಶನದಲ್ಲಿ ಬಾಲಿವುಡ್ ನಟಿಯರನ್ನೂ ಸಹ ಮೀರಿಸುವಂತೆ ಪೋಸ್ ಕೊಡುತ್ತಿದ್ದಾರೆ. ಇದೀಗ ಆಕೆ  ಮಿಸ್ಟರ್‍ ಅಂಡ್ ಮಿಸೆಸ್ ಶೋ ಗಾಗಿ ಹಾಟ್ ಪೊಟೋಶೂಟ್ಸ್ ಮಾಡಿಸಿದ್ದು, ಅವನ್ನು ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಪೊಟೋಗಳಲ್ಲಿ ಆಕೆ ತುಂಬಾನೆ ಶಾರ್ಟ್ ಆದ ಡ್ರೆಸ್ ಧರಿಸಿದ್ದಾರೆ. ಆಕೆಯ ಗ್ಲಾಮರಸ್ ಶೋ ಗೆ ಇಂಟರ್‍ ನೆಟ್ ನಲ್ಲಿ ಹಲ್ ಚಲ್ ಸೃಷ್ಟಿಯಾಗಿದೆ. ಥಂಡರ್‍ ಥೈಸ್ ಶೋ ಮಾಡುತ್ತಾ ಆಕೆ ಪಡ್ಡೆ ಹುಡುಗರ ನಿದ್ದೆ ಗೆಡಿಸಿದ್ದಾರೆ. ಇನ್ನೂ ಆಕೆಯ ಪೊಟೋಗಳಿಗೆ ಅಭಿಮಾನಿಗಳು ಸೇರಿದಂತೆ ಅನೇಕ ನೆಟ್ಟಿಗರು ಹಾಟ್ ಕಾಮೆಂಟ್ ಗಳು ಹಾಗೂ ಲೈಕ್ ಗಳನ್ನು ಮಾಡುವ ಮೂಲಕ ಪೊಟೋಗಳನ್ನು ವೈರಲ್ ಮಾಡುತ್ತಿದ್ದಾರೆ.

ಇನ್ನೂ ಶ್ರೀಮುಖಿ ಕೆರಿಯರ್‍ ಚೆನ್ನಾಗಿಯೇ ನಡೆಯುತ್ತಿದ್ದು, ಕೈ ತುಂಬಾ ಸಂಪಾದನೆ ಮಾಡುತ್ತಿದ್ದಾರೆ. ಇತ್ತಿಚಿಗಷ್ಟೆ ಆಕೆ ಹೊಸ ಮನೆಯನ್ನು ಸಹ ನಿರ್ಮಾಣ ಮಾಡಿದ್ದಾರೆ. ಕೋಟ್ಯಂತರ ರೂಪಾಯಿ ಬೆಲೆಬಾಳುವಂತಹ ಮನೆ ಇದಾಗಿದೆ. ಇತ್ತೀಚಿಗಷ್ಟೆ ಈ ಮನೆಯ ಗೃಹ ಪ್ರವೇಶ ಸಹ ಅದ್ದೂರಿಯಾಗಿ ನೆರವೇರಿದೆ. ಇನ್ನೂ  ಆಂಕರ್‍ ಆಗಿ ಆಕೆ ಸದ್ಯ ಟಾಪ್ ಸ್ಥಾನದಲ್ಲಿದ್ದಾರೆ. ಜೊತೆಗೆ ಸಿನೆಮಾಗಳಲ್ಲೂ ಸಹ ಸಕ್ಸಸ್ ಸಾಧಿಸಲು ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಆಕೆ ಕ್ಯಾರೆಕ್ಟರ್‍ ರೋಲ್ಸ್ ನಲ್ಲೂ ಸಹ ನಟಿಸುತ್ತಿದ್ದಾರೆ. ಕ್ರೇಜಿ ಅಂಕುಲ್ಸ್ ಸಿನೆಮಾದಲ್ಲಿ ಆಕೆ ನಟಿಯಾಗಿ ಕಾಣಿಸಿಕೊಂಡಿದ್ದರು. ಇನ್ನೂ ಆಕೆಗೆ ಕೆಲವೊಂದು ಸಿನೆಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳ ಅವಕಾಶಗಳು ಬರುತ್ತಿದ್ದರೂ ಸಹ ಆಕೆ ಬಿಗ್ ಬ್ರೇಕ್ ನೀಡುವಂತಹ ಸಿನೆಮಾಗಾಗಿ ಕಾಯುತ್ತಿದ್ದಾರೆ.

ಸದ್ಯ ಶ್ರೀಮುಖಿ ಜಾತಿರತ್ನಾಲು, ಸ್ಟಾರ್‍ ಮಾ ಪರಿವಾರ್‍, ಮಿಸ್ಟರ್‍ ಅಂಡ್ ಮಿಸೆಸ್ ಸೇರಿದಂತೆ ಅನೇಕ ಶೋಗಳನ್ನು ಹೋಸ್ಟ್ ಮಾಡುತ್ತಿದ್ದಾರೆ. ಇನ್ನೂ ಕೆಲವು ದಿನಗಳಿಂದ ಶ್ರೀಮುಖಿ ಮದುವೆಗೆ ಸಂಬಂಧಿಸಿದ ರೂಮರ್‍ ಗಳು ಹರಿದಾಡುತ್ತಿವೆ. ಹೈದರಾಬಾದ್ ನ ಉದ್ಯಮಿಯೊಬ್ಬರೊಂದಿಗೆ ಶ್ರೀಮುಖಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇನ್ನೂ ಈ ಬಗ್ಗೆ ಶ್ರೀಮುಖಿ ಸಹ ರಿಯಾಕ್ಟ್ ಆಗಿದ್ದು, ಅದೆಲ್ಲಾ ಕೇವಲ ರೂಮರ್‍ ಗಳು ಮಾತ್ರ. ಮದುವೆ ಸಮಯ ಬಂದಾಗ ಎಲ್ಲರಿಗೂ ಹೇಳಿ ಮದುವೆಯಾಗುತ್ತೇನೆ ಎಂದಿದ್ದರು.

Most Popular

To Top