ಅವಕಾಶಕ್ಕಾಗಿ ಮಲಗಲೇ ಬೇಕು, ಅದು ನನಗೆ ಕೆಟ್ಟ ಅನುಭವ ಎಂದ ಫೈರಿಂಗ್ ಸ್ಟಾರ್ ಕಸ್ತೂರಿ…..!

Follow Us :

ಒಂದು ಕಾಲದಲ್ಲಿ ಸ್ಟಾರ್‍ ನಟಿಯಾಗಿ ಸದ್ದು ಮಾಡಿದ ನಟಿ ಕಸ್ತೂರಿ ಗೃಹಲಕ್ಷ್ಮಿ ಎಂಬ ತೆಲುಗು ಸೀರಿಯಲ್ ಮೂಲಕ ದೊಡ್ಡ ಅಭಿಮಾನಿ ಬಳಗ ಸಾಧಿಸಿಕೊಂಡಿದ್ದಾರೆ. ಆಕೆಯನ್ನು ಕಸ್ತೂರಿ ಇಂಡಸ್ಟ್ರಿಯಲ್ಲಿ ಫೈರ್‍ ಬ್ರಾಂಡ್ ಎಂದು ಹೇಳಲಾಗುತ್ತದೆ. ಯಾವುದೇ ವಿಚಾರವಿದ್ದರೂ ಸಹ ಆಕೆ ನೇರವಾಗಿಯೇ ತಮ್ಮ ಅಭಿಪ್ರಾಯವನ್ನು ಹೇಳಿಬಿಡುತ್ತಾರೆ. ಇದೀಗ ಸಿನಿರಂಗದಲ್ಲಿನ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ತನಗೆ ಎದುರಾದ ಕೆಟ್ಟ ಅನುಭವದ ಬಗ್ಗೆ ಶಾಕಿಂಗ್ ವಿಚಾರವನ್ನು ಹಂಚಿಕೊಂಡಿದ್ದು, ಆಕೆಯ ಕಾಮೆಂಟ್ ಗಳು ವೈರಲ್ ಆಗುತ್ತಿವೆ.

ಸೌತ್ ನ ಫೈರಿಂಗ್ ಸ್ಟಾರ್‍ ಎಂದೇ ಕರೆಯಲಾಗುವ ನಟಿ ಕಸ್ತೂರಿ ಕೆರಿಯರ್‍ ನಲ್ಲಿ ಬ್ಯುಸಿಯಾಗಿದ್ದರೂ ಸಹ ಬಿಡುವು ಸಿಕ್ಕಾಗ ಸೋಷಿಯಲ್ ಮಿಡಿಯಾದಲ್ಲಿ ಒಂದಲ್ಲ ಒಂದು ಪೋಸ್ಟ್ ಮಾಡುವ ಮೂಲಕ ಸುದ್ದಿಯಲ್ಲಿರುತ್ತಾರೆ. ಇದೀಗ ಸಿನಿರಂಗದಲ್ಲಿ ಕೇಳಿಬರುವಂತಹ ಕಾಸ್ಟಿಂಗ್ ಕೌಚ್ ಬಗ್ಗೆ ಒಪೆನ್ ಆಗಿ ಕಾಮೆಂಟ್ ಮಾಡಿದ್ದಾರೆ. ಸದಾ ಫೈರಿಂಗ್ ಕಾಮೆಂಟ್ಸ್ ಮೂಲಕ ಸದ್ದು ಮಾಡುತ್ತಿರುವ ಕಸ್ತೂರಿ ತನಗಾದ ಕೆಟ್ಟ ಅನುಭವದ ಬಗ್ಗೆ ಫೈರ್‍ ಆಗಿದ್ದಾರೆ. ಸ್ಟಾರ್ ಡಂ ನೊಂದಿಗೆ ಸಂಬಂಧವಿಲ್ಲದೇ ಪ್ರತಿ ಮಹಿಳೆ ಯಾವುದೋ ಒಂದು ಸಮಯದಲ್ಲಿ ಲೈಂಗಿಕ ಕಿರುಕುಳಕ್ಕೆ ಗುರಿಯಾಗಿರುತ್ತಾರೆ. ಆದರೆ ಅನೇಕರು ಈ ಕುರಿತು ಒಪ್ಪಿಕೊಳ್ಳುವುದಿಲ್ಲ. ಅದೃಷ್ಟವಶಾತ್ ಅಂತಹ ಅನುಭವ ನಮಗೆ ಎದುರಾಗಿಲ್ಲ. ಯಾವುದೇ ಬ್ಯಾಕ್ ಗ್ರೌಂಡ್ ಇಲ್ಲದಂತಹ ಮಹಿಳೆ ಪ್ರಾರಂಭದಲ್ಲಿ ಕಾಸ್ಟಿಂಗ್ ಕೌಚ್ ಫೇಸ್ ಮಾಡಿರುತ್ತಾರೆ ಎಂದಿದ್ದಾರೆ.

ಇತ್ತೀಚಿಗೆ ಸಂದರ್ಶನವೊಂದರಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಒಪೆನ್ ಆಗಿ ಕಾಮೆಂಟ್ಸ್ ಮಾಡಿದ್ದಾರೆ. ಕಾಸ್ಟಿಂಗ್ ಕೌಚ್ ಅನುಭವಗಳು ನನಗೆ ತುಂಬಾನೆ ಆಗಿದೆ. ಈ ಹಿಂದೆ ಸಹ ನಾನು ಮಾತನಾಡಿದೆ. ಕಮಿಟ್ ಮೆಂಟ್ ಗೆ ಒಪ್ಪಿಕೊಳ್ಳಲಿಲ್ಲ ಎಂಬ ಕಾರಣದಿಂದ ಸಿನೆಮಾಗಳಿಂದ ನನ್ನ ತೆಗೆದು ಹಾಕಿದರು. ಎಪಿಸೋಡ್ ಗಳು ಕಟ್ ಮಾಡಿದ್ದರು. ತೆಲುಗಿನಲ್ಲಿ ಅಂತಹ ಅನುಭವ ಇಲ್ಲ. ತಮಿಳಿನಲ್ಲಿ ನೋಡಿದ್ದೇನೆ, ಮಲಯಾಳಂ ನಲ್ಲಿ ವರಸ್ಟ್ ಅನುಭವ. ಆಗಲೇ ನನಗೆ ಮದುವೆಯಾಗಿತ್ತು. ಹೇಗೋ ಹೊರಬಂದೆ. ಮಲಯಾಳಂ ನಲ್ಲಿ ಅದು ನನ್ನ ಕಮ್ ಬ್ಯಾಕ್ ಸಿನೆಮಾ, ದೊಡ್ಡ ಪ್ರಾಜೆಕ್ಟ್ ಆಗಿತ್ತು. ಒಪ್ಪಿಕೊಂಡಿಲ್ಲ ಎಂದು ಆ ಸಿನೆಮಾದಿಂದ ನನ್ನನ್ನು ತೆಗೆದುಹಾಕಿದರು. ಆದರೆ ಈಗ ಮಲಯಾಳಂ ಸಿನಿರಂಗ ಚೆನ್ನಾಗಿದೆ. ಎಲ್ಲಾ ರಂಗಗಳಲ್ಲೂ ಅಂತಹ ಅನುಭವಗಳು ಹುಡುಗಿಯರಿಗೆ ಎದುರಾಗಿರುತ್ತದೆ. ಅಷ್ಟೇ ಯಾಕೆ ಒಂದು ಕಟ್ಟಡ ನಿರ್ಮಾಣ ಮಾಡುವಾಗ ಮೇಸ್ತ್ರಿ ಹಾಗೂ ಕೂಲಿಯ ನಡುವೆ ಅಫೈರ್‍ ಇರುತ್ತದೆ. ಪ್ರತಿಯೊಂದು ಕಡೆ ಲೈಂಗಿಕ ಕಿರುಕುಳ ಇರುತ್ತದೆ ಎಂದಿದ್ದಾರೆ.

ಆದರೆ ಎಲ್ಲರೂ ಅಂತಹವರೇ ಅಲ್ಲ, ಲಂಚ ತೆಗೆದುಕೊಳ್ಳುವಂತಹವರೂ ಸಹ ಇರುತ್ತಾರೆ. ಸಿನಿರಂಗದಲ್ಲಿ ಎರಡು ರೀತಿಯ ಮನುಷ್ಯರು ಇರುತ್ತಾರೆ. ನನಗೆ ಲೈಂಗಿಕ ಕಿರುಕುಳ ಆಯ್ತು ಎಂದು ಸಿನಿರಂಗ ಬಿಟ್ಟು ಹೋಗಲಿಲ್ಲ. 80 ಸಿನೆಮಾಗಳನ್ನು ಮಾಡಿದ್ದೇನೆ. ಎಲ್ಲರೂ ಕೆಟ್ಟವರು ಆದರೆ ನಾನು ಅಷ್ಟು ಸಿನೆಮಾಗಳಲ್ಲಿ ನಟಿಸೋಕೆ ಆಗ್ತಾ ಇತ್ತಾ. ಈಗಲೂ ನನಗೆ ಅವಕಾಶಗಳು ಬರ್ತಾ ಇದೆ. ಎಲ್ಲಾ ಕಡೆ ಕೆಟ್ಟದ್ದು-ಒಳ್ಳೆದು ಎರಡು ಇದೆ ಎಂದು ಹೇಳಿದ್ದು, ಆಕೆಯ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.