Film News

ಸೀರೆಲ್ಲಿ ಹುಡುಗಿಯ ನೋಡಲೇ ಬಾರದು ಹಾಡನ್ನು ನೆನಪಿಸಿದ ರಚ್ಚು, ಸೀರೆಯಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಕೊಟ್ಟ ರಚಿತಾ…..!

ಸ್ಯಾಂಡಲ್ ವುಡ್ ಸ್ಟಾರ್‍ ನಟಿ ರಚಿತಾ ರಾಂ ಅನೇಕ ಸೂಪರ್‍ ಹಿಟ್ ಸಿನೆಮಾಗಳಲ್ಲಿ ನಟಿಸಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಅನೇಕ ಯುವಕರ ಕ್ರಷ್ ಸಹ ಆಗಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಅಷ್ಟೊಂದು ಆಕ್ಟೀವ್ ಆಗಿರದ ರಚಿತಾ ಆಗಾಗ ಮಾತ್ರ ಕೆಲವೊಂದು ಪೊಟೋಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳನ್ನು ಸೆಳೆಯುತ್ತಿರುತ್ತಾರೆ. ಇದೀಗ ಆಕೆ ಬ್ಲಾಕ್ ಕಲರ್‍ ಸೀರೆಯಲ್ಲಿ ಮೈಂಡ್ ಬ್ಲಾಕ್ ಪೋಸ್ ಕೊಟ್ಟಿದ್ದು, ಕಿಚ್ಚ ಸುದೀಪ್ ಅಭಿನಯದ ರನ್ನ ಸಿನೆಮಾದಲ್ಲಿನ ಸೀರೆಲಿ ಹುಡುಗಿಯ ನೋಡಲೇ ಬಾರದು ಎಂಬ ಹಾಡನ್ನು ನೆನಪಿಸಿದ್ದಾರೆ ಎನ್ನಲಾಗಿದೆ.

ಕನ್ನಡ ಸಿನಿರಂಗದ ಡಿಂಪಲ್ ಕ್ವೀನ್ ರಚಿತಾ ರಾಮ್ ಸೋಷಿಯಲ್ ಮಿಡಿಯಾದಲ್ಲಿ ಹೆಚ್ಚಾಗಿ ಪೊಟೋಶೂಟ್ಸ್ ಹಂಚಿಕೊಳ್ಳುವುದಿಲ್ಲ. ಸಿನೆಮಾಗಳು, ಕಿರುತೆರೆ ಶೋಗಳಲ್ಲೆ ಬ್ಯುಸಿಯಾಗಿರುತ್ತಾರೆ. ಇದೀಗ ಸಂಪ್ರದಾಯಬದ್ದವಾಗಿ ಬ್ಲಾಕ್ ಕಲರ್‍ ಸೀರೆಯನ್ನು ಧರಿಸಿ ಕಾಣಿಸಿಕೊಂಡಿದ್ದಾರೆ. ವಿವಿಧ ಭಂಗಿಗಳಲ್ಲಿ ಆಕೆ ಪೋಸ್ ಕೊಟ್ಟಿದ್ದಾರೆ. ಈ ಪೊಟೋಗಳನ್ನು ರಚಿತಾ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನೂ ಆಕೆ ಈ ಪೊಟೋಗಳನ್ನು ಹಂಚಿಕೊಂಡ ಕಡಿಮೆ ಸಮಯದಲ್ಲೇ ಎಲ್ಲಾ ಕಡೆ ಸಖತ್ ವೈರಲ್ ಆಗಿದೆ. ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಆಕೆಯ ಮಾದಕ ನೋಟಕ್ಕೆ ಫಿದಾ ಆಗದೇ ಇರಲು ಸಾಧ್ಯವಿಲ್ಲ, ಸೂಪರ್‍ ಬ್ಯೂಟಿ, ಎಂಬೆಲ್ಲಾ ಕಾಮೆಂಟ್ ಗಳ ಮೂಲಕ ಪೊಟೋಗಳಿಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ನಟಿ ರಚಿತಾ ರಾಂ ಲೇಟೆಸ್ಟ್ ಪೊಟೋಗಳಿಗೆ ಫಿದಾ ಆದ ಓರ್ವ ನೆಟ್ಟಿಗ ಆಕೆಯ ನಗುವಿನ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಅವಳ ನಗುವನ್ನು ವರ್ಣನೆ ಮಾಡಲು ಕುಳಿತೆ ಆದ್ರೆ ವರ್ಣಿಸಲು ಪದಗಳೇ ಸಿಗದೇ ನಾ ಸೋತೆ, ನಗುವಿನಲ್ಲಿ ಆಕೆ ದೊಡ್ಡ ಶ್ರೀಮಂತೆ ಎಂದಿದ್ದಾನೆ. ನಿನ್ನ ಈ ಲುಕ್ಸ್ ನಲ್ಲಿ ನೋಡುತ್ತಿದ್ದರೇ ನಮ್ಮ ಟೆಂಪರೇಚರ್‍ ಏರುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಕಳೆದ 2013 ರಲ್ಲಿ ಬುಲ್ ಬುಲ್ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ರಚಿತಾ ಕಡಿಮೆ ಸಮಯದಲ್ಲೇ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡರು. ಸದ್ಯ ರಚಿತಾ ಸಂಜು ವೆಡ್ಸ್ ಗೀತಾ-2, ದುನಿಯಾ ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಸಿನೆಮಾದಲ್ಲಿ ನಟಿಸುತ್ತಿದ್ದಾರೆ.

Most Popular

To Top