ಅಳಿಲಿಗೆ ಬಾಟಲಿ ಮೂಲಕ ನೀರು ಕುಡಿಸಿದ ವ್ಯಕ್ತಿ, ವೈರಲ್ ಆದ ಹೃದಯ ಸ್ಪರ್ಶಿ ವಿಡಿಯೋ….!

Follow Us :

ಇಂದಿನ ಕಾಲವನ್ನು ತಂತ್ರಜ್ಞಾನ ಯುಗವೆಂದು, ಸೋಷಿಯಲ್ ಮಿಡಿಯಾ ಜಗತ್ತು ಎಂದೇ ಕರೆಯಬಹುದಾಗಿದೆ. ಅನೇಕ ವಿಚಾರಗಳು ಸೋಷಿಯಲ್ ಮಿಡಿಯಾ ಮೂಲಕವೇ ತಿಳಿಯುತ್ತಿರುತ್ತದೆ. ಜಗತ್ತಿನ ಯಾವುದೇ ಮೂಲೆಯಲ್ಲಿ ಏನೇ ನಡೆದರೂ ತಮ್ಮ ಮೊಬೈಲ್ ಗಳಲ್ಲಿ ಚಿತ್ರೀಕರಿಸಿ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಈ ಹಾದಿಯಲ್ಲೇ ಪುಟ್ಟ ಅಳಿಲಿಗೆ ವ್ಯಕ್ತಿಯೊಬ್ಬ ನೀರುಣಿಸುವ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇಡೀ ವಿಶ್ವದಾದ್ಯಂತ ನಡೆಯುವಂತಹ ಕೆಲವೊಂದು ಇಂಟ್ರಸ್ಟಿಂಗ್ ಘಟನೆಗಳನ್ನು, ಚಿತ್ರ, ವಿಚಿತ್ರ, ಭಯಾನಕ, ಮನಸೋರೆಗೊಳಿಸುವಂತ ವಿಡಿಯೋಗಳನ್ನು ಸೋಷಿಯಲ್ ಮಿಡಿಯಾ ಮೂಲಕವೇ ಹಂಚಿಕೊಳ್ಳುತ್ತಿರುತ್ತಾರೆ. ಕೆಲವೊಂದು ವಿಡಿಯೋಗಳು ಕಡಿಮೆ ಸಮಯದಲ್ಲೇ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿರುತ್ತದೆ. ಈ ಹಾದಿಯಲ್ಲೇ ಇದೀಗ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಅಳಿಲು ಒಂದಕ್ಕೆ ನೀರಿನ ಬಾಟಲಿ ಮೂಲಕ ನೀರು ಕುಡಿಸುತ್ತಿರುವ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ವೈರಲ್ ಆದ ವಿಡಿಯೋದಲ್ಲಿರುವಂತೆ ವ್ಯಕ್ತಿಯೊಬ್ಬ ಕೈಯಲ್ಲಿ ನೀರಿನ ಬಾಟಲಿ ಹಿಡಿದು ರಸ್ತೆಯಲ್ಲಿ ಹೋಗುತ್ತಿರುತ್ತಾನೆ. ಆತನ ಬಳಿಗೆ ಅಳಿಲು ಬಂದು ನೀರು ಬೇಕು ಎಂಬುದನ್ನು ತುಂಬಾ ಮುದ್ದಾಗಿ ಕೇಳುವಂತಿದೆ. ಇದನ್ನು ಗಮನಿಸಿದಂತಹ ವ್ಯಕ್ತಿ ನೀರಿನ ಬಾಟಲಿಯ ಮುಚ್ಚಳ ತೆಗೆದು ನೀರು ಕುಡಿಸಿದ್ದಾನೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ಭಾರಿ ವೈರಲ್ ಆಗುತ್ತಿದೆ. ಕಡಿಮೆ ಸಮಯದಲ್ಲೇ ಈ ವಿಡಿಯೋ ಭಾರಿ ವೀಕ್ಷಣೆ ಪಡೆದುಕೊಂಡಿದೆ. ಈ ಹೃದಯಸ್ಪರ್ಶಿ ವಿಡಿಯೋಗೆ ಲೈಕ್ ಗಳು, ಕಾಮೆಂಟ್ ಗಳು ಹರಿದುಬರುತ್ತಿವೆ ಎನ್ನಲಾಗಿದೆ.