ಮತ್ತೊಮ್ಮೆ ದೊಡ್ಡ ಮನಸ್ಸು ಪ್ರದರ್ಶಿಸಿದ ಪವನ್ ಪತ್ನಿ, ಮಕ್ಕಳ ಸ್ಕೂಲ್ ಫೀಸ್ ಕಟ್ಟಿ, ಅನಾಥಾಶ್ರಮದಲ್ಲಿ ಹೊಸ ವರ್ಷ ಆಚರಿಸಿದ ಸ್ಟಾರ್ ಪತ್ನಿ….!

ತೆಲುಗು ಸಿನಿರಂಗದ ಸ್ಟಾರ್‍ ನಟ ಹಾಗೂ ರಾಜಕಾರಣಿ ಪವನ್ ಕಲ್ಯಾಣ್ ಸದ್ಯ ಸಿನೆಮಾಗಳಿಗೆ ಬ್ರೇಕ್ ಕೊಟ್ಟಿ ರಾಜಕೀಯದಲ್ಲಿ ಸಕ್ರೀಯರಾಗಿದ್ದಾರೆ. ಪವನ್ ಕಲ್ಯಾಣ್ ರವರ ಪತ್ನಿ ಅನಾ ಕೊಣಿದೆಲಾ ಸಹ ಕಳೆದ ಕ್ರಿಸ್ ಮಸ್ ಹಬ್ಬವನ್ನು ಅನಾಥಾಶ್ರಮದಲ್ಲಿ ಆಚರಿಸಿ, ಅಲ್ಲಿನ ಮಕ್ಕಳಿಗೆ ಬೇಕಾದ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಿ ಮಾನವೀಯತೆ ಮೆರೆದಿದ್ದರು. ಇದೀಗ ಮತ್ತೊಮ್ಮೆ ಅನಾ ಕೊಣಿದೆಲಾ ಸಮಾಜ ಸೇವೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ನಟ ಪವನ್ ಕಲ್ಯಾಣ್ ರವರು ಅನೇಕ ಆರ್ಥಿಯ ಸಹಾಯಗಳನ್ನು ಮಾಡಿ ಒಳ್ಳೆಯ ಕೆಲಸ ಮಾಡಿದ್ದರು. ಕೋವಿಡ್ ಸಮಯದಲ್ಲಂತೂ ಪವನ್ ಕಲ್ಯಾಣ್ ರವರು ತುಂಬಾನೆ ಸಹಾಯ ಮಾಡಿದ್ದರು. ಇದೀಗ ಜನಸೇನಾ ಎಂಬ ಪಾರ್ಟಿಯನ್ನು ಸ್ಥಾಪಿಸಿ ಆ ಮೂಲಕ ಸಹ ಅನೇಕರಿಗೆ ಸಹಾಯ ಮಾಡುತ್ತಿದ್ದಾರೆ. ಈ ಹಾದಿಯಲ್ಲೇ ಪವನ್ ಕಲ್ಯಾಣ್ ರವರ ಪತ್ನಿ ಅನಾ ಕೋಣಿದೆಲಾ ಸಹ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ. ಕಳೆದ ಕ್ರಿಸ್ ಮಸ್ ಹಬ್ಬದ ಸಮಯದಲ್ಲೂ ಆಕೆ ಅನಾಥಾಶ್ರಮಕ್ಕೆ ಭೇಟಿ ನೀಡಿ ಅಲ್ಲಿನ ಮಕ್ಕಳೊಂದಿಗೆ ಕ್ರಿಸ್ ಮಸ್ ಕೇಕ್ ಕತ್ತರಿಸಿ ಜೊತೆಗೆ ಅಲ್ಲಿನ ಮಕ್ಕಳಿಗೆ ಅವಶ್ಯಕವಾದ ವಸ್ತುಗಳನ್ನು ನೀಡಿದ್ದರು.

ಇದೀಗ ಅನಾ ಕೊಣಿದೆಲಾ ಮತ್ತೊಮ್ಮೆ ಹೊಸ ವರ್ಷವನ್ನು ಫ್ರೆಂಡ್ಸ್ ಫೌಂಡೇಷನ್ ಎಂಬ ಎನ್.ಜಿ.ಒ ಗೆ ಸೇರಿದ ಅನಾಥಾಶ್ರಮದಲ್ಲಿ ಆಚರಿಸಿದ್ದಾರೆ. ಅಲ್ಲಿನ ಚಿಕ್ಕಮಕ್ಕಳೊಂದಿಗೆ ಬೆರೆತು ಸಂತೋಷವಾಗಿ ಕೇಕ್ ಕತ್ತರಿಸಿ ಹೊಸ ವರ್ಷವನ್ನು ಆಚರಿಸಿದ್ದಾರೆ. ಈ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಹೊಸ ವರ್ಷದಂದೂ ಸಹ ಅನಾಥಾಶ್ರಮದ ಮಕ್ಕಳಿಗೆ ಬೇಕಾಗುವಂತಹ ಅತ್ಯವಶ್ಯಕ ಸರಕುಗಳನ್ನು ಪೂರೈಸಿದ್ದಾರೆ. ಆಕೆ ಮಾಡಿದ ಈ ಕಾರ್ಯಕ್ಕೆ ಅನೇಕರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಐದು ಮಂದಿ ಬಾಲಕೀಯರ ಶಾಲೆಯ ಫೀಜ್ ಸಹ ಕಟ್ಟಿದ್ದಾರೆ. ಪತಿಯಂತೆ ಪತ್ನಿ ಸಹ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.