News

ಲಕ್ಷ ಲಕ್ಷ ದರೋಡೆ ಮಾಡಿದ ಕಳ್ಳರು, ಇನ್ಸ್ಟಾಗ್ರಾಂ ನಲ್ಲಿ ರೀಲ್ ಮಾಡಿ ಸಿಕ್ಕಿಬಿದ್ದರು…….!

ಕಳ್ಳರ ಗ್ಯಾಂಗ್ ಒಂದು ದೊಡ್ಡ ಪ್ಲಾನ್ ಮಾಡಿ ಜ್ಯೋತಿಷಿಯೊಬ್ಬರ ಮನೆಯಲ್ಲಿ ಲಕ್ಷ ಲಕ್ಷ ದೋಚಿದ್ದಾರೆ. ಮನೆಯಲ್ಲಿದ್ದ ನಗದು ಹಾಗೂ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ಜ್ಯೋತಿಷಿ ಸುಮಾರು ವರ್ಷಗಳಿಂದ ದುಡಿದಂತಹ ಹಣ ಕಳ್ಳರ ಪಾಲಾಯ್ತು ಎಂದು ಆ ಜ್ಯೋತಿಷಿ ಆಘಾತಕ್ಕೆ ಒಳಗಾಗಿದ್ದಾರೆ. ಈ ಸಂಬಂಧ ಪೊಲೀಸರಿಗೆ ದೂರು ಸಹ ನೀಡಿದ್ದಾರೆ. ಪೊಲೀಸರು ಸಹ ತುಂಬಾನೆ ತನಿಖೆ ನಡೆಸಿದ್ದರೂ ಸಹ ಕಳ್ಳರು ಸಿಕ್ಕಿರಲಿಲ್ಲ. ಆದರೆ ಕಳ್ಳರ ಗ್ಯಾಂಗ್ ಅನ್ನು ಪತ್ತೆ ಮಾಡಲು ಪೊಲೀಸರಿಗೆ ಇನ್ಸ್ಟಾಗ್ರಾಂ ರೀಲ್ ನೆರವಾಗಿದೆ.

ಉತ್ತರ ಪ್ರದೇಶದ ಕಾನ್ಪುರದಲ್ಲಿ ಈ ಘಟನೆ ನಡೆದಿದೆ. ತರುಣ್ ಶರ್ಮಾ ಎಂಬ ಜ್ಯೋತಿಷಿ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಆತ ನೀಡಿದ ದೂರಿನ ಮೇರೆಗೆ ಪೊಲೀಸರು ಸಾಕಷ್ಟು ತನಿಖೆ ನಡೆಸಿದರೂ ಸಹ ಯಾವುದೇ ಸಣ್ಣ ಸುಳಿವು ಸಹ ಸಿಕ್ಕಿಲ್ಲ. ಸಿಸಿಟಿವಿ ಸಹ ಇದ್ದರೂ ಇಬ್ಬರು ವ್ಯಕ್ತಿಗಳು ಕಳ್ಳತನ ಮಾಡಿರುವುದು ತಿಳಿದಿದೆ ವಿನಃ ಅವರು ಯಾರು ಎಂಬುದನ್ನು ಪತ್ತೆ ಮಾಡಲು ಪೊಲೀಸರು ಹರಸಾಹಸ ಪಟ್ಟಿದ್ದರು. ತಿಂಗಳು ಕಳೆದರೂ ಸಹ ಆ ಕಳ್ಳರು ಮಾತ್ರ ಪತ್ತೆಯಾಗಿರಲಿಲ್ಲ.  ತುಂಬಾ ಚಾಣಾಕ್ಷತೆಯಿಂದ ಕಳ್ಳತನ ಮಾಡಿದ ಕಳ್ಳರು ಇನ್ಸ್ಟಾದಲ್ಲಿ ರೀಲ್ ಮಾಡಿ ಸಿಕ್ಕಿಬಿದ್ದಿದ್ದಾರೆ.

ಜ್ಯೋತಿಷಿಯ ಮನೆಯಲ್ಲಿ ಕದ್ದಂತಹ ನೋಟುಗಳನ್ನು ಬಳಸಿ ರೀಲ್ಸ್ ಮಾಡಿದ್ದಾರೆ. ಅದನ್ನು ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕಳ್ಳರು ಜ್ಯೋತಿಷಿ ಮನೆಯಲ್ಲಿ ಕದ್ದಂತಹ ಹಣವನ್ನು ಹಾಸಿಗೆಯ ಮೇಲೆ ಹಾಕಿ ಇನ್ಸ್ಟಾಗ್ರಾಂನಲ್ಲಿ ಹಾಕಿದ್ದಾರೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ತಮ್ಮ ಕೈಯಲ್ಲಿ ಐನೂರು ನೋಟುಗಳ ಕಟ್ಟನ್ನು ಹಿಡಿದುಕೊಂಡು ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಆರೋಪಿಗಳಲ್ಲಿ ಒಬ್ಬನನ್ನು ಹಿಡಿದುಕೊಂಡಿದ್ದಾರೆ. ಪೊಲೀಸರು ಹಿಡಿದ ವ್ಯಕ್ತಿಯಿಂದ 2 ಲಕ್ಷ ರೂಪಾಯಿ ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಯಿಂದ ಮತಷ್ಟು ಮಾಹಿತಿ ಕಲೆಹಾಕುತ್ತಿದ್ದಾರೆ ಎನ್ನಲಾಗಿದೆ.

Most Popular

To Top