ಟೈಟ್ ಫಿಟ್ ಡ್ರೆಸ್ ನಲ್ಲಿ ಕಿಕ್ಕೇರಿಸುವ ಪೋಸ್ ಕೊಟ್ಟ ಜೂನಿಯರ್ ಸಮಂತಾ, ಆಕೆಯ ಬೆನ್ನು ಬೀಚ್ ಮಾದರಿಯಿದೆ ಎಂದ ಫ್ಯಾನ್ಸ್…..!

Follow Us :

ಸೋಷಿಯಲ್ ಮಿಡಿಯಾ ತುಂಬಾ ಪ್ರಚಲಿತಕ್ಕೆ ಬಂದ ಬಳಿಕ ಅನೇಕರು ಸ್ಟಾರ್‍ ಗಳಾಗಿದ್ದಾರೆ. ಜೊತೆಗೆ ಅನೇಕ ಅವಕಾಶಗಳನ್ನೂ ಸಹ ಗಿಟ್ಟಿಸಿಕೋಳ್ಳುತ್ತಿದ್ದಾರೆ. ಈ ಹಾದಿಯಲ್ಲೇ ಅಷುರೆಡ್ಡಿ ಗ್ಲಾಮರ್‍ ಶೋ ಮೂಲಕ ಇಂಟರ್‍ ನೆಟ್ ನಲ್ಲಿ ಸುನಾಮಿಯನ್ನು ಎಬ್ಬಿಸುತ್ತಿರುತ್ತಾರೆ. ಸಖತ್ ಹಾಟ್ ಆಗಿ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಇದೀಗ ಆಕೆ ಬೀಚ್ ಬಳಿ ಟೈಟ್ ಫಿಟ್ ಡ್ರೆಸ್ ನಲ್ಲಿ ಕಿಕ್ಕೇರಿಸುವಂತಹ  ಪೋಸ್ ಗಳನ್ನು ಕೊಟ್ಟಿದ್ದು, ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಡಬ್ ಸ್ಮಾಷ್ ಮೂಲಕ ಭಾರಿ ಕ್ರೇಜ್ ಪಡೆದುಕೊಂಡ ಅಷುರೆಡ್ಡಿ ಕಡಿಮೆ ಸಮಯದಲ್ಲೇ ಭಾರಿ ಕ್ರೇಜ್ ಪಡೆದುಕೊಂಡರು. ಆಕೆ ನೋಡಲು ಸಮಂತಾ ರವರಂತೆ ಕಾಣುವ ಕಾರಣದಿಂದ ಆಕೆಯನ್ನು ಜೂನಿಯರ್‍ ಸಮಂತಾ ಎಂದೇ ಕರೆಯುತ್ತಾರೆ. ಬಿಗ್ ಬಾಸ್ 3 ಮೂಲಕ ಮತಷ್ಟು ಕ್ರೇಜ್ ಪಡೆದುಕೊಂಡರು. ಇದೀಗ ಕಿರುತೆರೆ ಹಾಗೂ ಸಿನೆಮಾಗಳ ಮೂಲಕ ಕೆರಿಯರ್‍ ಸಾಗಿಸುತ್ತಿದ್ದಾರೆ. ಇದರ ಜೊತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಸದ್ದು ಮಾಡುತ್ತಿರುತ್ತಾರೆ. ನಟಿ ಅಷುರೆಡ್ಡಿ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆ‌ಕ್ಟೀವ್ ಆಗಿರುತ್ತಾರೆ. ಪೊಟೋಗಳು, ವಿಡಿಯೋಗಳ ಜೊತೆಗೆ ತನ್ನ ವೈಯುಕ್ತಿಕ ವಿಚಾರಗಳ ಬಗ್ಗೆ ಸಹ ಹಂಚಿಕೊಳ್ಳುತ್ತಿರುತ್ತಾರೆ.  ಅದರಲ್ಲೂ ಹಾಟ್ ಪೊಟೋಶೂಟ್ಸ್ ಮೂಲಕ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸುತ್ತಿರುತ್ತಾರೆ.

ಇನ್ನೂ ಅಷುರೆಡ್ಡಿ ಸಮಯ ಸಿಕ್ಕಾಗಲೆಲ್ಲಾ ವೆಕೇಷನ್ ಗಳಿಗೆ ಹಾರುತ್ತಾ ಎಂಜಾಯ್ ಮಾಡುತ್ತಿರುತ್ತಾರೆ. ಇದೀಗ ಬೀಚ್ ನಲ್ಲಿ ಆಕೆ ಎಂಜಾಯ್ ಮಾಡುತ್ತಾ ಅಲ್ಲಿನ ಕೆಲವೊಂದು ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಟೈಟ್ ಫಿಟ್ ಬ್ಲೂ ಕಲರ್‍ ಡ್ರೆಸ್ ನಲ್ಲಿ ಆಕೆ ಕಿಕ್ಕೇರಿಸುವಂತಹ ಪೋಸ್ ಗಳನ್ನು ಕೊಟ್ಟಿದ್ದಾರೆ. ಈ ಡ್ರೆಸ್ ನಲ್ಲಿ ಅಷುರೆಡ್ಡಿ ತನ್ನ ಬೆನ್ನನ್ನು ಸಂಪೂರ್ಣವಾಗಿ ಪ್ರದರ್ಶನ ಮಾಡಿದ್ದಾರೆ. ಈ ಪೊಟೋಗಳಲ್ಲಿ ಸಹ ಅಷುರೆಡ್ಡಿ ತುಂಬಾ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಆಕೆಯ ಈ ಪೊಟೋಗಳು ಇಂಟರ್‍ ನೆಟ್ ನಲ್ಲಿ ಇದೀಗ ಸಖತ್ ವೈರಲ್ ಆಗುತ್ತಿವೆ. ಅಭಿಮಾನಿಗಳು ಹಾಗೂ ನೆಟ್ಟಿಗರು ಕ್ರೇಜಿ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಆಕೆಯ ಬೆನ್ನು ಬೀಚ್ ಮಾದರಿಯಲ್ಲಿದೆ ಎಂಬ ಕ್ರೇಜಿ ಕಾಮೆಂಟ್ ಗಳ ಮೂಲಕ ಪೊಟೋಗಳನ್ನು ಮತಷ್ಟು ವೈರಲ್ ಮಾಡುತ್ತಿದ್ದಾರೆ.