Film News

ನೆಗೆಟೀವ್ ರೋಲ್ಸ್ ನಲ್ಲಿ ನಟಿಸಿದ ಮಾತ್ರಕ್ಕೆ ಕೆಟ್ಟವರಲ್ಲ, ಅನಸೂಯ ಪೋಸ್ಟ್ ವೈರಲ್….!

ತೆಲುಗು ಕಿರುತೆರೆಯ ಮೂಲಕ ಬಹುಬೇಡಿಕೆ ನಟಿಯಾದ ಅನಸೂಯ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿರುತ್ತಾರೆ. ಸದಾ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ಈಕೆ ಪೊಟೋಗಳು, ವಿಡಿಯೋಗಳು ಸಿನೆಮಾ ಅಪ್ಡೇಟ್ ಗಳನ್ನು ನೀಡುತ್ತಾ ಅಭಿಮಾನಿಗಳಿಗೆ ಟಚ್ ನಲ್ಲಿರುತ್ತಾರೆ. ಆಗಾಗ ಆಕೆಯನ್ನು ಟ್ರೋಲ್ ಸಹ ಮಾಡುತ್ತಿರುತ್ತಾರೆ. ಅಂತಹ ಅನೇಕ ಟ್ರೋಲರ್‍ ಗಳಿಗೆ ಆಕೆ ಸ್ಟ್ರಾಂಗ್ ಡೋಸ್ ಕೊಡುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ಹಂಚಿಕೊಂಡ ಲೇಟೆಸ್ಟ್ ಪೋಸ್ಟ್ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಕಿರುತೆರೆಯ ಜಬರ್ದಸ್ತ್ ಎಂಬ ಕಾಮಿಡಿ ಶೋ ಮೂಲಕ ಫೇಂ ಪಡೆದುಕೊಂಡ ಅನಸೂಯ ಇದೀಗ ಕಿರುತೆರೆಗೆ ದೂರವಾಗಿ ಸಿನೆಮಾಗಳಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ದೊಡ್ಡ ದೊಡ್ಡ ಸ್ಟಾರ್‍ ಗಳ ಸಿನೆಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಾ ಸಕ್ಸಸ್‌ ಪುಲ್ ಕೆರಿಯರ್‍ ಸಾಗಿಸುತ್ತಿದ್ದಾರೆ. ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದು, ಕಿರುತೆರೆಗೆ ದೂರವಾಗಿ ಸಾಲು ಸಾಲು ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಇನ್ನೂ ಆಕೆ ಕಥೆ ಡಿಮ್ಯಾಂಡ್ ಮಾಡಿದರೇ ನೆಗೆಟೀವ್ ಪಾತ್ರಗಳಲ್ಲೂ ಸಹ ನಟಿಸಲು ಸಿದ್ದವಾಗಿರುತ್ತಾರೆ. ಈಗಾಗಲೇ ಅನೇಕ ಸಿನೆಮಾಗಳಲ್ಲಿ ಅನಸೂಯ ನೆಗೆಟೀವ್ ರೋಲ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಬ್ಯುಸಿಯಾಗಿರುವ ಅನಸೂಯ ಆಗಾಗ ಇಂಟ್ರಸ್ಟಿಂಗ್ ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಾ ಸುದ್ದಿಯಾಗುತ್ತಿರುತ್ತಾರೆ. ಇದೀಗ ಆಕೆ ಹಂಚಿಕೊಂಡ ಪೋಸ್ಟ್ ಎಲ್ಲಾ ಕಡೆ ಸಖತ್ ವೈರಲ್ ಆಗುತ್ತಿದೆ.

ನಟಿ ಅನಸೂಯ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಶಾರುಖ್ ರವರಿಗೆ ಸಂಬಂಧಿಸಿದ ವಿಡಿಯೋ ಒಂದು ಆಕೆ ಶೇರ್‍ ಮಾಆಡಿದ್ದಾರೆ. ಈ ವಿಡಿಯೋದಲ್ಲಿ ಶಾರುಖ್ ನಾನು ಅನೇಕ ಸಿನೆಮಾಗಳಲ್ಲಿ ನೆಗೆಟೀವ್ ರೋಲ್ಸ್ ನಲ್ಲಿ ನಟಿಸಿದ್ದೇನೆ. ನನ್ನ ಜೊತೆಗೆ ಜಾನ್ ಅಬ್ರಾಹಂ ಸಹ ನಟಿಸಿದ್ದಾರೆ. ನೆಗೆಟೀವ್ ಪಾತ್ರಗಳಲ್ಲಿ ನಟಿಸಿದ ಮಾತ್ರಕ್ಕೆ ನಾವು ಕೆಟ್ಟವರಲ್ಲ. ಅದು ಕೇವಲ ನಿಮ್ಮ ರಂಜಿಸುವ ಸಲುವಾಗಿ ಮಾತ್ರ ಎಂದು ಶಾರುಕ್ ಹೇಳಿದ್ದಾರೆ. ಈ ವಿಡಿಯೋ ಅನ್ನೇ ಅನಸೂಯ ಶೇರ್‍ ಮಾಡಿ ನಾನು ಸುಮಾರು ದಿನಗಳಿಂದ ಇದನ್ನೆ ಹೇಳುತ್ತಿದ್ದೇನೆ. ನೆಗೆಟೀವ್ ಪಾತ್ರಗಳಲ್ಲಿ ನಟಿಸುತ್ತೇವೆ ವಿನಹಃ ಜೀವನದಲ್ಲಿ ನಾವೆಲ್ಲ ಅಂತಹವರಲ್ಲ ಎಂದು ಪೋಸ್ಟ್ ಮಾಡಿದ್ದಾರೆ. ಸದ್ಯ ಅನಸೂಯ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಇನ್ನೂ ನಟಿ ಅನಸೂಯ ಸದ್ಯ ದೊಡ್ಡ ದೊಡ್ಡ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪುಷ್ಪಾ-2 ಸಿನೆಮಾದಲ್ಲಿ ಆಕೆ ನೆಗೆಟೀವ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದು, ಪುಷ್ಪ ಮೊದಲ ಭಾಗಕ್ಕಿಂತ ಪುಷ್ಪಾ-2 ನಲ್ಲಿ ಆಕೆಯ ಪಾತ್ರ ಮತಷ್ಟು ಪವರ್‍ ಪುಲ್ ಆಗಿರಲಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಆಕೆಯನ್ನು ಸದಾ ಟ್ರೋಲ್ ಮಾಡುತ್ತಿರುತ್ತಾರೆ. ಆದರೆ ಆ ಟ್ರೋಲರ್‍ ಗಳಿಗೆ ತಕ್ಕ ಪಾಠವನ್ನು ಸಹ ಕಲಿಸುತ್ತಿರುತ್ತಾರೆ ನಟಿ ಅನಸೂಯ.

Most Popular

To Top