ಸೌತ್ ಸಿನಿರಂಗದಲ್ಲಿ ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ಸಾಲಿನಲ್ಲಿ ಎಸ್.ಎಸ್.ಥಮನ್ ಸಹ ಒಬ್ಬರಾಗಿದ್ದಾರೆ. ಅನೇಕ ಸ್ಟಾರ್ ಗಳ ಸಿನೆಮಾಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿ ಸ್ಟಾರ್ ನಿರ್ದೇಶಕರಾಗಿದ್ದಾರೆ. ಅಖಂಡ ಸಿನೆಮಾಗೂ ಸಹ ಥಮನ್ ರವರೇ ಮ್ಯೂಸಿಕ್ ಕಂಪೋಸ್ ಮಾಡಿದ್ದರು. ಇತ್ತೀಚಿಗಷ್ಟೆ ಬಿಡುಗಡೆಯಾದ ತಮಿಳು ನಟ ವಿಜಯ್ ಅಭಿನಯದ ವಾರಿಸು ಸಿನೆಮಾಗೂ ಥಮನ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಇನ್ನೂ ಈ ಸಿನೆಮಾ ನೋಡುತ್ತಾ ಥಮನ್ ಎಮೋಷನಲ್ ಆಗಿದ್ದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ಕಾಲಿವುಡ್ ಸ್ಟಾರ್ ನಟ ವಿಜಯ್ ಧಳಪತಿ ಹಾಗೂ ಖ್ಯಾತ ನಿರ್ದೇಶಕ ವಂಶಿ ಪೈಡಿಪಲ್ಲಿ ಕಾಂಬಿನೇಷನ್ ನಲ್ಲಿ ಮೂಡಿಬಂದ ಸಿನೆಮಾ ವಾರಿಸು ತಮಿಳಿನಲ್ಲಿ ಮಾತ್ರ ಜ.11 ರಂದು ಬಿಡುಗಡೆಯಾಗಿದ್ದು, ಭರ್ಜರಿಯಾಗಿ ಪ್ರದರ್ಶನಗೊಳ್ಳುತ್ತಿದೆ. ತೆಲುಗಿನಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ನಂದಮೂರಿ ಬಾಲಕೃಷ್ಣ ಅಭಿನಯದ ವೀರಸಿಂಹಾರೆಡ್ಡಿ ಹಾಗೂ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ವಾಲ್ತೇರು ವೀರಯ್ಯ ಸಿನೆಮಾದ ರಿಲೀಸ್ ಆಗುತ್ತಿರುವ ಹಿನ್ನೆಲೆಯಲ್ಲಿ ತೆಲುಗಿನಲ್ಲಿ ವಾರಿಸು ಸಿನೆಮಾ ಜ.14 ರಂದು ತೆರೆಕಾಣಲಿದೆ. ವಾರಿಸು ಸಿನೆಮಾ ತೆಲುಗು ಅವತರಣಿಕೆಯಲ್ಲಿ ವಾರಸುಡು ಎಂಬ ಟೈಟಲ್ ನಲ್ಲಿ ಬಿಡುಗಡೆಯಾಗಲಿದೆ. ಇನ್ನೂ ತೆಲುಗಿನಲ್ಲಿ ನಟ ವಿಜಯ್ ಗೂ ಒಳ್ಳೆಯ ಕ್ರೇಜ್ ಇದ್ದು, ತೆಲುಗಿನಲ್ಲೂ ಸಹ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಳ್ಳಬಹುದು ಎಂದು ಅಂದಾಜಿಸಲಾಗಿದೆ.
ಇನ್ನೂ ವಾರಿಸು ಸಿನೆಮಾವನ್ನು ಚೆನೈನ ಒಂದು ಖ್ಯಾತ ಥಿಯೇಟರ್ ನಲ್ಲಿ ನಿರ್ದೇಶಕ ವಂಶಿ ಪೈಡಿಪಲ್ಲಿ, ನಿರ್ಮಾಪಕ ದಿಲ್ ರಾಜು, ಸಂಗೀತ ನಿರ್ದೇಶಕ ಥಮನ್ ವೀಕ್ಷಣೆ ಮಾಡಿದ್ದಾರೆ. ಈ ಸಿನೆಮಾದಲ್ಲಿ ವಿಜಯ್ ತುಂಬಾ ಅದ್ಬುತವಾಗಿ ನಟಿಸಿದ್ದಾರೆ. ಅದರಲ್ಲೂ ಎಮೋಷನಲ್ ದೃಶ್ಯಗಳು ಪ್ರೇಕ್ಷಕರನ್ನು ತುಂಬಾನೆ ಸೆಳೆಯುವಂತಿದೆ ಎನ್ನಲಾಗಿದೆ. ಸಿನೆಮಾ ನೋಡಿದ ಥಮನ್ ಸಹ ಕೆಲವೊಂದು ದೃಶ್ಯಗಳನ್ನು ಕಂಡು ಎಮೋಷನಲ್ ಆಗಿದ್ದಾರೆ. ತನ್ನ ಸಂಗೀತಕ್ಕೆ ಹಾಗೂ ಸಿನೆಮಾಗೆ ಪ್ರೇಕ್ಷಕರು ನೀಡುತ್ತಿರುವ ಪ್ರೀತಿಗೆ ಕಣ್ಣೀರಾಕಿದ್ದಾರೆ. ಇನ್ನೂ ತಮನ್ ಅಳುತ್ತಿರುವ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಇನ್ನೂ ಈ ಬಗ್ಗೆ ಥಮನ್ ಸಹ ಟ್ವೀಟ್ ಮಾಡಿದ್ದಾರೆ.
ಇನ್ನೂ ಥಮನ್ ಬ್ಲಾಕ್ ಬ್ಲಸ್ಟರ್ ಹಿಟ್ ಹೊಡೆದ ಅಖಂಡ ಸಿನೆಮಾಗೂ ಸಹ ಮ್ಯೂಸಿಕ್ ಕಂಪೋಸ್ ಮಾಡಿದ್ದರು. ಇದೀಗ ವೀರಸಿಂಹಾರೆಡ್ಡಿ ಸಿನೆಮಾಗೂ ಸಹ ಥಮನ್ ರವರೇ ಮ್ಯೂಸಿಕ್ ನೀಡಿದ್ದಾರೆ. ಈ ಸಿನೆಮಾ ಜ.12 ರಂದು ಬಿಡುಗಡೆಯಾಗಿದ್ದು, ಭರ್ಜರಿಯಾಗಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಜೊತೆಗೆ ರಾಮ್ ಚರಣ್ ರವರ RC15 ಸಿನೆಮಾಗೂ ಸಹ ಥಮನ್ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ.