Film News

ತನ್ನಲ್ಲಿನ ಮಾನಸಿಕ ಸಮಸ್ಯೆಗಳ ಬಗ್ಗೆ ಮಾಹಿತಿ ಹೊರಹಾಕಿದ ಶ್ರುತಿ ಹಾಸನ್, ಆಕೆಗಿರುವ ಸಮಸ್ಯೆಗಳಾದರು ಏನು?

ಕಾಲಿವುಡ್ ಸ್ಟಾರ್‍ ನಟ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಸಿನಿರಂಗಕ್ಕೆ ಎಂಟ್ರಿ ಕೊಡಲು ಮಾತ್ರ ಸ್ಟಾರ್‍ ಕಿಡ್ ಅನ್ನು ಬಳಸಿಕೊಂಡರು. ಬಳಿಕ ಸ್ವಂತ ಪ್ರತಿಭೆಯ ಮೇಲೆ ಆಕೆ ಸ್ಟಾರ್‍ ಡಮ್ ಪಡೆದುಕೊಂಡರು. ಶ್ರುತಿ ಹಾಸನ್ ಸಿನೆಮಾಗಳಿಂದ ಸುದ್ದಿಯಾಗುವುದರ ಜೊತೆಗೆ ಆಗಾಗ ವೈಯುಕ್ತಿಕ ವಿಚಾರಗಳಿಂದಲೂ ಸಹ ಆಕೆ ಸುದ್ದಿಯಾಗುತ್ತಿರುತ್ತಾರೆ. ಇದೀಗ  ಆಕೆಯ ಆರೋಗ್ಯದ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. ನಟಿ ಶ್ರುತಿ ಹಾಸನ್ ಸುಮಾರು ದಿನಗಳಿಂದ ಕೆಲವು ಮಾನಸಿಕ ಸಮಸ್ಯೆಗಳಿಂದ ದುಃಖಪಡುತ್ತಿದ್ದಾರಂತೆ. ಇದಕ್ಕೆ ಸಂಬಂಧಿಸಿದ ಚಿಕಿತ್ಸೆಯನ್ನೂ ಸಹ ಪಡೆದುಕೊಳ್ಳುತ್ತಿದ್ದಾರಂತೆ.

ಸೌತ್ ಸಿನಿರಂಗದ ಸ್ಟಾರ್‍ ನಟಿ ಶ್ರುತಿ ಹಾಸನ್ ತೆಲುಗಿನ ಕ್ರಾಕ್ ಸಿನೆಮಾದ ಬಳಿಕ ಮತಷ್ಟು ಬ್ಯುಸಿಯಾದರು. ಸದ್ಯ ಆಕೆ ಬ್ಯಾಕ್ ಟು ಬ್ಯಾಕ್ ದೊಡ್ಡ ಬಜೆಟ್ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಈ ವರ್ಷ ಆಕೆ ಸಾಲು ಸಾಲು ಸಿನೆಮಾಗಳ ಮೂಲಕ ಸದ್ದು ಮಾಡಲಿದ್ದಾರೆ. ಇನ್ನೂ ಸಾಲು ಸಾಲು ಸಿನೆಮಾಗಳ ಶೂಟಿಂಗ್ ನಲ್ಲಿ ಭಾಗಿಯಾಗುತ್ತಿರುವ ಕಾರಣದಿಂದ ಆಕೆ ಇತ್ತಿಚಿಗೆ ಕೊಂಚ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರಂತೆ. ಇತ್ತಿಚಿಗೆ ಆಕೆ ತನ್ನ ಆರೋಗ್ಯದ ಬಗ್ಗೆ ಇನ್ಸ್ಟಾ ಖಾತೆಯಲ್ಲಿ ತಿಳಿಸಿದ್ದರು. ತಾನು ಅನಾರೋಗ್ಯದ ಕಾರಣದಿಂದ ವಾಲ್ತೇರು ವೀರಯ್ಯ ಸಿನೆಮಾದ ಪ್ರೀ ರಿಲೀಸ್ ಈವೆಂಟ್ ನಲ್ಲಿ ಭಾಗಿಯಾಗಲು ಸಾದ್ಯವಾಗುತ್ತಿಲ್ಲ ಎಂದು ತಿಳಿಸಿದ್ದರು. ಆಕೆ ವಾಲ್ತೇರು ವೀರಯ್ಯ ಪ್ರಿ ರಿಲೀಸ್ ಈವೆಂಟ್ ನಲ್ಲಿ ಭಾಗಿಯಾಗದೇ ಇದ್ದ ಕಾರಣದಿಂದ ಆಕೆಯ ವಿರುದ್ದ ಅನೇಕ ವಿಮರ್ಶೆಗಳು ಕೇಳಿಬಂದವು. ಬಳಿಕ ಆಕೆ ಆರೋಗ್ಯ ಸಮಸ್ಯೆಯಿಂದ ಕಾರ್ಯಕ್ರಮದಲ್ಲಿ ಭಾಗಿಯಾಗದೇ ಇರಲು ಕಾರಣ ಎಂದು ತಿಳಿಸಿದ ಬಳಿಕ ವಿಮರ್ಶೆಗಳು ನಿಂತವು.

ಇನ್ನೂ ಶ್ರುತಿ ಹಾಸನ್ ತಾನು ಅನಾರೋಗ್ಯದಿಂದ ಬಳಲುತ್ತಿರುವುದಾಗಿ ಇತ್ತಿಚಿಗೆ ನೀಡಿದ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಈ ಸಂದರ್ಶನದಲ್ಲಿ ತಾನು ಮಾನಸಿಕ ಸಮಸ್ಯೆಗಳ ಬಗ್ಗೆ ಇಂಟ್ರಸ್ಟಿಂಗ್ ವಿಚಾರಗಳನ್ನು ಹೊರಹಾಕಿದ್ದಾರೆ. ಕೆಲವು ದಿನಗಳಿಂದ ತಾನು ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಇದ್ದಕ್ಕಿಂದ್ದಂತೆ ಕೋಪಗೊಳ್ಳುವುದು, ಸಹನೆಯನ್ನು ಕಳೆದುಕೊಳ್ಳುವುದು, ಅದರಲ್ಲೂ ಕೆಲವೊಂದು ಸಮಯದಲ್ಲಂತೂ ತುಂಬಾನೆ ಆವೇಶಕ್ಕೆ ಗುರಿಯಾಗುತ್ತೇನೆ. ಮನೆಯಲ್ಲಾದರೂ ಸರಿ ಅಥವಾ ಶೂಟಿಂಗ್ ಸ್ಪಾಟ್ ನಲ್ಲಾದರೂ ಸರಿ ನಾನು ಅಂದುಕೊಂಡಿದ್ದು ನಡೆಯದೇ ಇದ್ದರೇ ತೀವ್ರ ಕೋಪ ಬರುತ್ತದೆ. ಇದರಿಂದ ನಾನು ಹೊರಬರಲು ಚಿಕಿತ್ಸೆಯನ್ನೂ ಸಹ ಪಡೆದುಕೊಳ್ಳುತ್ತಿದ್ದು, ಸದ್ಯ ಕೊಂಚ ಚೇತರಿಕೆಯಾಗಿದ್ದೇನೆ ಎಂದು ತಿಳಿಸಿದ್ದಾರೆ.

ಇನ್ನೂ ಶ್ರುತಿ ಹಾಸನ್ ನಂದಮೂರಿ ಬಾಲಕೃಷ್ಣ ಜೊತೆಗೆ ವೀರಸಿಂಹಾರೆಡ್ಡಿ ಸಿನೆಮಾದಲ್ಲಿ  ನಟಿಸಿದ್ದು, ಈ ಸಿನೆಮಾ ಜ.12 ರಂದು ಬಿಡುಗಡೆಯಾಗಿ ಭರ್ಜರಿಯಾಗಿ ಪ್ರದರ್ಶನಗೊಂಡಿದೆ. ಮೆಗಾಸ್ಟಾರ್‍ ಚಿರಂಜೀವಿ ಜೊತೆಗೂ ವಾಲ್ತೇರು ವೀರಯ್ಯ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾ ಜ.13 ರಂದು ಬಿಡುಗಡೆಯಾಗಿದೆ. ಜೊತೆಗೆ ಆಕೆ ಸಲಾರ್‍ ಎಂಬ ಪ್ಯಾನ್ ಇಂಡಿಯಾ ಸಿನೆಮಾದಲ್ಲಿ ಪ್ರಭಾಸ್ ಜೊತೆಗೆ ನಟಿಸುತ್ತಿದ್ದು, ಈ ಸಿನೆಮಾದ ಮೇಲೆ ಶ್ರುತಿ ತುಂಬಾನೆ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ.

Most Popular

To Top