Film News

ನಯನತಾರಾ ಜೊತೆಗೆ ಎಚ್ಚರಿಕೆಯಿಂದ ಇರು ಎಂದು ವಿಘ್ನೇಶ್ ಗೆ ಸಲಹೆ ಕೊಟ್ಟರಂತೆ ಆ ಸ್ಟಾರ್ ಹಿರೋ, ಆತ ಯಾರು ಗೊತ್ತಾ?

ಇತ್ತೀಚಿಗೆ ಸಿನಿರಂಗದಲ್ಲಿ ಸದಾ ಸುದ್ದಿಯಲ್ಲೇ ಇದ್ದಂತಹ ಜೋಡಿ ಎಂದರೇ ಅದು ನಯನತಾರಾ ಹಾಗೂ ವಿಘ್ನೇಶ್ ಶಿವನ್ ಜೋಡಿ. ಕಳೆದ ಜೂನ್ 9 ರಂದು ಚೆನ್ನೈನಲ್ಲಿ ನಯನ್ ಅಂಡ್ ವಿಕ್ಕಿ ಮದುವೆ ಅದ್ದೂರಿಯಾಗಿಯೇ ನಡೆಯಿತು. ಇನ್ನೂ ಇತ್ತೀಚಿಗಷ್ಟೆ ಈ ಜೋಡಿ ಸೆರಗೋಸಿ ಪದ್ದತಿಯ ಮೂಲಕ ಅವಳಿ ಗಂಡು ಮಕ್ಕಳನ್ನು ಪಡೆದುಕೊಂಡಿದ್ದು, ಈ ವಿಚಾರ ಹೊರ ಬರುತ್ತಿದ್ದಂತೆ ಅನೇಕ ವಿವಾದಗಳೂ ಸಹ ಹುಟ್ಟಿಕೊಂಡವು. ಎಲ್ಲ ವಿವಾದಗಳಿಂದ ಈ ಜೋಡಿ ಇದೀಗ ಹೊರಬಂದು ಜೀವನ ಎಂಜಾಯ್ ಮಾಡುತ್ತಿದ್ದಾರೆ. ಇದೀಗ ನಯನತಾರಾ ಪತಿ ವಿಘ್ನೇಶ್ ಗೆ ಸ್ಟಾರ್‍ ನಟನೋರ್ವ ಆಕೆಯೊಂದಿಗೆ ಎಚ್ಚರಿಕೆಯಿಂದ ಇರು ಎಂದು ಹೇಳಿದ್ದಾರಂತೆ. ಅಷ್ಟಕ್ಕೂ ಆ ನಟ ಯಾರು ಎಂಬ ವಿಚಾರಕ್ಕೆ ಬಂದರೇ,

ಸೌತ್ ಸಿನಿರಂಗದಲ್ಲಿ ನಯನತಾರಾ ಲೇಡಿ ಸೂಪರ್‍ ಸ್ಟಾರ್‍ ಆಗಿ ಫೇಂ ಸಂಪಾದಿಸಕೊಂಡು ಮದುವೆಯಾದರೂ ಸಹ ಭಾರಿ ಬಜೆಟ್ ಸಿನೆಮಾಗಳಲ್ಲಿ ನಟಿಸುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಇನ್ನೂ ಕಳೆದ ವರ್ಷ ಜೂನ್ ಮಾಹೆಯಲ್ಲಿ ನಯನತಾರ ಹಾಗೂ ವಿಘ್ನೇಶ್ ಮದುವೆಯಾದರು. ಮದುವೆಯ ಬಳಿಕವೂ ನಯನತಾರಾ ಭಾರಿ ಪ್ರಾಜೆಕ್ಟ್ ಗಳಲ್ಲಿ ನಟಿಸುತ್ತಿದ್ದಾರೆ. ಶೀಘ್ರದಲ್ಲೇ ಆಕೆ ಜವಾನ್ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಈ ಸಿನೆಮಾದಲ್ಲಿ ನಯನತಾರಾ ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಜೊತೆಗೆ ನಟಿಸಿದ್ದಾರೆ. ಈ ಸಿನೆಮಾಗಾಗಿ ಆಕೆ ಭಾರಿ ಸಂಭಾವನೆಯನ್ನು ಸಹ ಪಡೆದುಕೊಳ್ಳಲಿದ್ದಾರಂತೆ. ಕೆಲವು ದಿನಗಳ ಹಿಂದೆಯಷ್ಟೆ ಈ ಸಿನೆಮಾದ ಟ್ರೈಲರ್‍ ಸಹ ಬಿಡುಗಡೆಯಾಗಿದ್ದು, ಸಿನೆಮಾದ ಮೇಲಿನ ನಿರೀಕ್ಷೆಯನ್ನು ಮತಷ್ಟು ಏರಿಸಿದೆ.

ಇದೀಗ ನಟಿ ನಯನತಾರಾ ವಿಚಾರದಲ್ಲಿ ಎಚ್ಚರಿಕೆಯಿಂದ ಇರುವಂತೆ ವಿಘ್ನೇಶ್ ಗೆ ಸ್ಟಾರ್‍ ನಟ ಶಾರುಖ್ ಖಾನ್ ತಿಳಿಸಿದ್ದಾರಂತೆ. ಸದ್ಯ ಈ ವಿಚಾರ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ವಿಘ್ನೇಶ್ ಗೆ ಶಾರುಖ್ ನಯನತಾರಾ ಜೊತೆ ಎಚ್ಚರಿಕೆಯಿಂದ ಇರು, ಆಕೆ ಹೊಡೆಯುವುದರಲ್ಲಿ ಹೊಸ ಟೆಕ್ನಿಕ್ ಕಲಿತಿದ್ದಾರೆ ಎಂದು ಶಾರುಖ್ ಟ್ವೀಟ್ ಮಾಡಿದ್ದಾರೆ. ಇನ್ನೂ ಈ ಟ್ವೀಟ್ ಜವಾನ್ ಸಿನೆಮಾವನ್ನು ಉದ್ದೇಶಿಸಿ ಟ್ವೀಟ್ ಮಾಡಿದ್ದಾರಯೇ ಎಂಬ ಆಸಕ್ತಿ ಎಲ್ಲರಲ್ಲೂ ಮೂಡಿದೆ. ಇನ್ನೂ ಜವಾನ್ ಟ್ರೈಲರ್‍ ಬಗ್ಗೆ ವಿಘ್ನೇಶ್ ತನ್ನ ಇನ್ಸ್ಟಾ ಖಾತೆಯಲ್ಲಿ ಪೋಸ್ಟ್ ಒಂದನ್ನು ಮಾಡಿದ್ದರು. ಟ್ರೈಲರ್‍ ತುಂಬಾ ಚೆನ್ನಾಗಿದೆ. ಅಂತಹ್ ಬಿಗೆಸ್ಟ್ ಸಿನೆಮಾ ಮೂಲಕ ಅಟ್ಲಿ ಬಾಲಿವುಡ್ ರಂಗಕ್ಕೆ ಎಂಟ್ರಿ ಕೊಡುತ್ತಿರುವುದು ಗರ್ವ ಪಡುವಂತಹ ವಿಚಾರ. ಇನ್ನೂ ಜವಾನ್ ಟ್ರೈಲರ್‍ ಇಂಟರ್‍ ನ್ಯಾಷನಲ್ ರೇಂಜ್ ನಲ್ಲಿದೆ. ಇನ್ನೂ ಶಾರುಖ್ ಸಿನೆಮಾದ ಮೂಲಕ ನಯನತಾರಾ ಬಹುದಿನಗಳ ಕನಸು ಸಹ ಈಡೇರಿದೆ ಎಂದು ಜವಾನ್ ತಂಡಕ್ಕೆ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಇನ್ನೂ ಈ ಬಗ್ಗೆ ಶಾರುಖ್ ಸಹ ರಿಯಾಕ್ಟ್ ಆಗಿದ್ದಾರೆ. ವಿಘ್ನೇಶ್ ನೀವು ನಮ್ಮ ಸಿನೆಮಾದ ಮೇಲೆ ತೋರಿಸುತ್ತಿರುವ ಪ್ರೀತಿ ಅಭಿಮಾನಕ್ಕೆ ನನ್ನ ಧನ್ಯವಾದಗಳು. ನಯನ್ ತುಮಬಾ ಅದ್ಬುತವಾದ ವ್ಯಕ್ತಿ. ನಿಮಗೆ ಈ ವಿಚಾರ ಈಗಾಗಲೇ ತಿಳಿದಿದೆ. ಆದರೆ ಪತಿಯಾಗಿ ನೀನು ಎಚ್ಚರಿಕೆಯಿಂದ ಇರಬೇಕು. ಏಕೆಂದರೇ ಆಕೆ ಕೆಲವೊಂದು ಮೇಜರ್‍ ಕಿಕ್ಸ್, ಪಂಚಸ್ ಕಲಿತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಇನ್ನೂ ಈ ಟ್ವೀಟ್ ಗೆ ವಿಘ್ನೇಶ್ ಸಹ ರಿಯಾಕ್ಟ್ ಆಗಿದ್ದಾರೆ. ಹೌದು ಈ ಸಿನೆಮಾದಲ್ಲಿ ನಿಮ್ಮಿಬ್ಬರ ನಡುವೆ ಒಳ್ಳೆಯ ರೊಮ್ಯಾನ್ಸ್ ಇದೆ ಎಂದು ಕೇಳಿದ್ದೇನೆ. ಆಕೆ ರೊಮ್ಯಾನ್ಸ್ ರಾಜು ನಿಂದ ಕಲಿತಿದ್ದಾಳೆ. ನಿಮ್ಮ  ಸಿನೆಮಾದ ಮೂಲಕ ಆಕೆಯ ಬಾಲಿವುಡ್ ಕನಸು ಸಹ ನೆರವೇರಿದೆ. ಈ ಸಿನೆಮಾ ಗ್ಲೋಬಲ್ ಹಿಟ್ ಆಗಬೇಕೆಂದು ಕೋರಿದ್ದಾರೆ. ಇದೀಗ ಈ ಟ್ವೀಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

Most Popular

To Top