Film News

ಅಲ್ಲು ಅರ್ಜುನ್ ರವರ ಬಗ್ಗೆ ಸಂಚಲನಾತ್ಮಕ ಕಾಮೆಂಟ್ಸ್ ಮಾಡಿದ ಅನಸೂಯ, ವೈರಲ್ ಆದ ಹಳೇಯ ವಿಡಿಯೋ……!

ಕಿರುತೆರೆಯ ಮೂಲಕ ಫೇಂ ಪಡೆದುಕೊಂಡ ನಟಿಯರಲ್ಲಿ ನಟಿ ಅನಸೂಯ ಭಾರದ್ವಾಜ್ ಮೊದಲ ಸ್ಥಾನದಲ್ಲಿರುತ್ತಾರೆ. ಸಿನೆಮಾಗಳಲ್ಲಿ ಆಕೆ ಪುಲ್ ಬ್ಯುಸಿಯಾಗಿದ್ದಾರೆ. ಜೊತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿರುತ್ತಾರೆ. ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸಹ ಎಲ್ಲರನ್ನೂ ರಂಜಿಸುತ್ತಿರುತ್ತಾರೆ. ಅದರ ಜೊತೆಗೆ ಆಕೆ ವಿವಾದಗಳಿಗೆ ಕೇರಾಫ್ ಅಡ್ರೆಸ್ ಎಂದೂ ಸಹ ಹೇಳಬಹುದಾಗಿದೆ. ಇದೀಗ ಅಲ್ಲು ಅರ್ಜುನ್ ರವರ ಬಗ್ಗೆ ಆಕೆ ಕೆಲವೊಂದು ಕಾಮೆಂಟ್ಸ್ ಮಾಡಿದ್ದು, ಅವು ಸಖತ್ ವೈರಲ್ ಆಗುತ್ತಿವೆ. ಈ ಸಂಬಂಧ ಹಳೆಯ ವಿಡಿಯೋ ಒಂದು ಸಖತ್ ವೈರಲ್ ಆಗುತ್ತಿದೆ.

ನಟಿ ಅನಸೂಯ ಕಿರುತೆರೆಯ ಖ್ಯಾತ ಕಾಮಿಡಿ ಶೋ ಜಬರ್ದಸ್ತ್‌ ಶೋ ಮೂಲಕ ಭಾರಿ ಕ್ರೇಜ್ ಪಡೆದುಕೊಂಡರು. ಆದರೆ ಕಿರುತೆರೆಯಲ್ಲಿ ಬರುವಂತಹ ವಿಮರ್ಶೆಗಳು, ಟ್ರೋಲ್ಸ್ ಗಳ ಕಾರಣದಿಂದ ಆಕೆ ಕಿರುತೆರೆಗೆ ದೂರವಾದರೂ ಎಂಬ ಮಾತುಗಳೂ ಸಹ ಇದೆ.  ಸದ್ಯ ಆಕೆ ಸಿನೆಮಾಗಳಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಇನ್ನೂ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಪುಲ್ ಆಕ್ಟೀವ್ ಆಗಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲೂ ತುಂಬಾ ಪಾಪ್ಯುಲಾರಿಟಿಯನ್ನು ಹೊಂದಿರುವ ಅನಸೂಯ ಅದೇ ರೀತಿ ಟ್ರೋಲ್ ಗಳಿಗೂ ಸಹ ಗುರಿಯಾಗುತ್ತಿರುತ್ತಾರೆ. ಇದೀಗ ಮೆಗಾ ಕುಟುಂಬದ ಬಗ್ಗೆ ಆಕೆ ಮಾತನಾಡಿದಂತಹ ಹಳೆಯ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಅನಸೂಯ ಮಾತನಾಡಿರುವ ಮಾತುಗಳು ಇದೀಗ ಇಂಟರ್‍ ನೆಟ್ ನಲ್ಲಿ ಬಿರುಗಾಳಿಯನ್ನು ಸೃಷ್ಟಿಸಿದೆ.

ಇದೀಗ ಹರಿದಾಡುತ್ತಿರುವ ಅನಸೂಯರವರ ಹಳೇಯ ವಿಡಿಯೋ ದಲ್ಲಿ ಅಲ್ಲು ಅರ್ಜುನ್ ರವರ ಬಗ್ಗೆ ಕೆಲವೊಂದು ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಅಲ್ಲು ಅರ್ಜುನ್ ಹಿರೋ ನಾ ? ಮೆಗಾ ಕುಟುಂಬದಿಂದ ಬಂದರೇ ಹಿರೋ ಆಗೋಗ್ತಾರಾ ಎಂದು ಅನಸೂಯ ಮಾತುಗಳನ್ನು ಶುರು ಮಾಡಿದ್ದಾರೆ. ಗಂಗೋತ್ರಿ ಸಿನೆಮಾ ನೋಡಿ ನಮ್ಮವರಿಗೆ ಏನಾಗಿದೆ ಎಂದು ಆಶ್ವರ್ಯಪಟ್ಟೆ. ಆ ಹಾಡಿನಲ್ಲಿ ಮಾತ್ರ ನೋಡಲು ಸಾಧ್ಯವಾಗುತ್ತಿಲ್ಲ. ಬನ್ನಿ ಹಿರೋನಾ ಎಂದು ಅನಸೂಯ ಆಶ್ವರ್ಯವನ್ನು ಹೊರಹಾಕಿದರು. ಗಂಗೋತ್ರಿ ಸಿನೆಮಾದ ಹಾಡೊಂದರಲ್ಲಿ ಅಲ್ಲು ಅರ್ಜುನ್ ಲೇಡಿ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ ಅದನ್ನು ನನಗೆ ನೋಡಲು ಆಗಲಿಲ್ಲ ಎಂದು ಹೇಳಿದ್ದರು. ಆದರೆ ಈ ವಿಡಿಯೋ ಸುಮಾರು ವರ್ಷಗಳ ಹಳೆಯ ವಿಡಿಯೋ ಆಗಿದೆ. ಆದರೆ ಇದೀಗ ಈ ವಿಡಿಯೋ ಮತ್ತೆ ವೈರಲ್ ಆಗುತ್ತಿದೆ. ಇನ್ನೂ ಅಲ್ಲು ಫ್ಯಾನ್ಸ್ ಸಹ ಅನಸೂಯರವರನ್ನು ಸರಿಯಾಗಿಯೇ ಟ್ರೋಲ್ ಮಾಡುತ್ತಿದ್ದಾರೆ.

ಎಂಟು ವರ್ಷಗಳ ಹಳೆಯ ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಆದರೆ ಆ ಸಮಯದಲ್ಲಿ ಸೋಷಿಯಲ್ ಮಿಡಿಯಾ ಇರಲಿಲ್ಲ. ಇದೀಗ ಸೋಷಿಯಲ್ ಮಿಡಿಯಾ ತುಂಭಾ ಪ್ರಚಲಿತದಲ್ಲಿದ್ದು, ವಿಡಿಯೋ ವೈರಲ್ ಆಗುತ್ತಿದೆ. ಇನ್ನೂ ಈ ವಿಡಿಯೋ ಬಗ್ಗೆ ಅನಸೂಯ ಯಾವ ರೀತಿಯಲ್ಲಿ ರಿಯಾಕ್ಟ್ ಆಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಸದ್ಯ ಅನಸೂಯ ಪುಷ್ಪಾ-2 ಸಿನೆಮಾದಲ್ಲಿ ಬ್ಯುಸಿಯಾಗಿದ್ದಾರೆ. ಕೊನೆಯದಾಗಿ ಆಕೆ ವಿಮಾನಂ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು.

Most Popular

To Top