News

ಸಲಾರ್ ಸಿನೆಮಾದಲ್ಲಿ ಪ್ರಭಾಸ್ ನಟಿಸುತ್ತಾರೆ ಎಂಬ ಕಾರಣದಿಂದ ಪ್ರಮುಖ ಪಾತ್ರ ರಿಜೆಕ್ಟ್ ಮಾಡಿದ್ರಂತೆ ಆ ನಟಿ, ಯಾರು ಗೊತ್ತಾ?

ಸ್ಯಾಂಡಲ್ ವುಡ್ ಸ್ಟಾರ್‍ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಬಾಹುಬಲಿ ಪ್ರಭಾಸ್ ಕಾಂಬಿನೇಷನ್ ನಲ್ಲಿ ತೆರೆಕಂಡ ಸಲಾರ್‍ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಕಲೆಕ್ಷನ್ ಮಾಡುತ್ತಾ ಮುನ್ನುಗ್ಗುತ್ತಿದೆ. ಒಳ್ಳೆಯ ಟಾಕ್ ನೊಂದಿಗೆ ಬ್ಲಾಕ್ ಬ್ಲಸ್ಟರ್‍ ಹಿಟ್ ಆಗುತ್ತಿದೆ. ಈ ಸಿನೆಮಾ ಅನೌನ್ಸ್ ಆದಾಗಿನಿಂದಲೂ ಭಾರಿ ನಿರೀಕ್ಷೆಯನ್ನು ಮೂಡಿಸಿತ್ತು. ಕೆಜಿಎಫ್ ಸಿನೆಮಾದ ಬಳಿಕ ಪ್ರಶಾಂತ್ ನೀಲ್ ರವರ ಸಿನೆಮಾದ ಮೇಲೆ ತುಂಬಾನೆ ನಿರೀಕ್ಷೆಯನ್ನು ಇಟ್ಟುಕೊಂಡಿದ್ದ ಸಿನಿರಸಿಕರಿಗೆ ಒಳ್ಳೆಯ ಸಿನೆಮಾ ಕೊಟ್ಟಂತಾಗಿದೆ. ಭಾರಿ ಸಕ್ಸಸ್ ಕಂಡ ಈ ಸಿನೆಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಲು ಖ್ಯಾತ ನಟಿಯೊಬ್ಬರು ಒಪ್ಪಲಿಲ್ಲವಂತೆ. ಆಕೆ ಒಪ್ಪದೇ ಇರಲು ಕಾರಣ ಏನು, ಆಕೆ ಯಾರು ಎಂಬ ವಿಚಾರಕ್ಕೆ ಬಂದರೇ,

ಸಲಾರ್‍ ಸಿನೆಮಾ ಬಿಡುಗಡೆಯಾದ ದಿನದಿಂದ ಒಳ್ಳೆಯ ಕಲೆಕ್ಷನ್ ಮಾಡುತ್ತಾ ಯಶಸ್ವಿಯಾಗಿ ಪ್ರದರ್ಶನ ಆಗುತ್ತಿದೆ. ಈ ಸಿನೆಮಾದಲ್ಲಿ ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್ ಮಾತ್ರವಲ್ಲದೇ ಅನೇಕ ಕಲಾವಿದರ ಪಾತ್ರಗಳೂ ಸಹ ತುಂಬಾನೆ ಹೈಲೈಟ್ ಎಂದು ಹೇಳಬಹುದು. ಅದರಲ್ಲೂ ಯಂಗ್ ನಟಿ ಶ್ರೇಯಾ ರೆಡ್ಡಿ ಪಾತ್ರ ತುಂಬಾನೆ ಹೈಲೈಟ್ ಆಗಿದೆ ಎನ್ನಬಹುದು. ಈ ಸಿನೆಮಾದಲ್ಲಿ ಶ್ರೆಯಾ ರೆಡ್ಡಿ ರಾಧಾ ರಾಮ ಎಂಬ ಪಾತ್ರದಲ್ಲಿ ನಟಿಸಿದ್ದರು. ಇನ್ನೂ ಶ್ರೇಯಾ ರೆಡ್ಡಿ ಚೆನೈ ಮೂಲದವರಾಗಿದ್ದು, ಮೊದಲಿಗೆ ಟೆಲಿವಿಜನ್ ಪ್ರೆಜೆಂಟರ್‍, ವಿಡಿಯೋ ಜಾಕಿಯಾಗಿ ಕೆರಿಯರ್‍ ಆರಂಭಿಸಿದ್ದರು. ಅಪ್ಪುಡಪ್ಪುಡು, ಅಮ್ಮ ಚೆಂಪಿಂದಿ ಸಿನೆಮಾಗಳ ಮೂಲಕ ಫೇಂ ಪಡೆದುಕೊಂಡ ಈಕೆ ಇದೀಗ ಸಲಾರ್‍ ಎಂಬ ಪ್ಯಾನ್ ಇಂಡಿಯಾ ಸಿನೆಮಾದಲ್ಲಿ ಪ್ರಮುಖ ಪಾತ್ರ ಪೋಷಣೆ ಮಾಡಿ ಮತಷ್ಟು ಖ್ಯಾತಿ ಪಡೆದುಕೊಂಡರು.

ಈ ಪಾತ್ರಕ್ಕಾಗಿ ಮೊದಲು ಶ್ರೇಯಾ ರೆಡ್ಡಿಯವರನ್ನು ಅಂಧುಕೊಂಡಿರಲಿಲ್ಲವಂತೆ. ಪ್ರಶಾಂತ್ ನೀಲ್ ಈ ಪವರ್‍ ಪುಲ್ ಪಾತ್ರದಲ್ಲಿ ನಟಿಸುವಂತೆ ಲೇಡಿ ಸ್ಟಾರ್‍ ವಿಲನ್  ವರಲಕ್ಷ್ಮೀ ಶರತ್ ಕುಮಾರ್‍ ರವರನ್ನು ಆಯ್ಕೆ ಮಾಡಿಕೊಂಡಿದ್ದರಂತೆ. ಆದರೆ ಆಕೆ ಆ ಪಾತ್ರದಲ್ಲಿ ನಟಿಸೋಕೆ ಒಪ್ಪಲಿಲ್ಲವಂತೆ. ಅದಕ್ಕೆ ಆಕೆ ಕಾರಣ ಸಹ ಕೊಟ್ಟಿದ್ದಾರಂತೆ. ಪ್ರಭಾಸ್ ಗೆ ನೆಗೆಟೀವ್ ಆಗಿ ಮಾಡುವ ಪಾತ್ರಕ್ಕೆ ಸರಿಯಾದ ಗುರ್ತಿಸುವಿಕೆ ಇರೊಲ್ಲ ಎಂದು ಆಕೆ ಭಾವಿಸಿದ್ದರಂತೆ. ಪ್ರಭಾಸ್ ರವರಂತಹ ಸ್ಟಾರ್‍ ಡಂ ಇರುವಂತಹ ಪ್ಯಾನ್ ಇಂಡಿಯಾ ಸ್ಟಾರ್‍ ಸಿನೆಮಾದಲ್ಲಿ ನಟಿಸಿದರೇ ಆತನನ್ನು ಬಿಟ್ಟರೇ ಬೇರೆ ಎಲ್ಲಾ ಪಾತ್ರಗಳನ್ನು ಪ್ರೇಕ್ಷಕರು ಗುರ್ತಿಸುವುದಿಲ್ಲ ಎಂದು ಆಕೆಯ ಅಭಿಪ್ರಾಯವಾಗಿತ್ತಂತೆ. ಜೊತೆಗೆ ಈ ಸಿನೆಮಾದಲ್ಲಿ ಜಗಪತಿಬಾಬು, ಪೃಥ್ವಿರಾಜ್ ರವರಂತ ಸ್ಟಾರ್‍ ನಟರು ಸಹ ಇರುವ ಕಾರಣ ಆ ಪಾತ್ರ ಹೈಲೈಟ್ ಆಗುವುದಿಲ್ಲ ಎಂಬ ಕಾರಣದಿಂದ ಆಕೆ ಈ ಆಫರ್‍ ರಿಜೆಕ್ಟ್ ಮಾಡಿದ್ದರು ಎಂದು ಹೇಳಲಾಗುತ್ತಿದೆ.

ಆದರೆ ಸಲಾರ್‍ ಬಿಡುಗಡೆಯಾದ ಬಳಿಕ ಪ್ರಭಾಸ್ ಒಬ್ಬರಿಗೆ ಮಾತ್ರ ಕ್ರೇಜ್ ದೊರೆಯಲಿಲ್ಲ. ಈ ಸಿನೆಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ ಎಲ್ಲರಿಗೂ ಒಳ್ಳೆಯ ಹೆಸರು ಬಂದಿದೆ ಎನ್ನಬಹುದಾಗಿದೆ. ಜೊತೆಗೆ ಈ ಸಿನೆಮಾ ಬ್ಲಾಕ್ ಬ್ಲಸ್ಟರ್‍ ಹಿಟ್ ಆಗುತ್ತಿರುವ ಕಾರಣದಿಂದ ವರಲಕ್ಷ್ಮೀ ಈ ಆಫರ್‍ ಮಿಸ್ ಮಾಡಿಕೊಂಡಿದ್ದಕ್ಕೆ ನೋವು ಪಡುತ್ತಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಪವರ್‍ ಪುಲ್ ರೋಲ್ ನಲ್ಲಿ ಕಾಣಿಸಿಕೊಂಡ ಶ್ರೇಯಾ ರೆಡ್ಡಿಗೆ ಮಾತ್ರ ಒಳ್ಳೆಯ ಕ್ರೇಜ್ ದೊರೆತಿದೆ ಎಂದೇ ಹೇಳಬಹುದಾಗಿದೆ.

Most Popular

To Top