ಪ್ರಖ್ಯಾತ ಚಿಕ್ಕಬಳ್ಳಾಪುರದ ನಂದಿ ಬೆಟ್ಟಕ್ಕೆ ಆ ದಿನ ನೋ ಎಂಟ್ರಿ, ನಂದಿ ಬೆಟ್ಟ ಪ್ರವಾಸಿಗರಿಗೆ ಸೂಚನೆ….!

Follow Us :

ರಾಜ್ಯದಲ್ಲಿ ಭಾರಿ ಪ್ರಖ್ಯಾತಿ ಪಡೆದುಕೊಂಡಿರುವ ಪ್ರಖ್ಯಾತ ಪ್ರವಾಸಿ ತಾಣ ನಂದಿಗಿರಿಧಾಮಕ್ಕೆ ನೂತನ ವರ್ಷದ ಆಚರಣೆಯಂದು ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಹೊಸ ವರ್ಷದ ಆಚರಣೆಯ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮವಾಗಿ ನಿರ್ಬಧವನ್ನು ವಿಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಹೊಸ ವರ್ಷದ ಆಚರಣೆಯ ವೇಳೆ ಯಾವುದೇ ಅಹಿತಕರ ಘಟನೆಗಳ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಡಿ.31 ರ ಸಂಜೆ 6ರಿಂದ ಜನವರಿ 1, 2024 ರ ಬೆಳಿಗ್ಗೆ 6 ಗಂಟೆಯವರೆಗೆ ಪ್ರವಾಸಿಗರಿಗೆ ನಿರ್ಬಂಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ರವೀಂದ್ರ ರವರು ಆದೇಶ ಹೊರಡಿಸಿದ್ದಾರೆ. ತುಂಬಾನೆ ಫೇಮಸ್ ಆಗಿರುವ ನಂದಿ ಬೆಟ್ಟಕ್ಕೆ ವಾರಾಂತ್ಯದ ದಿನಗಳಂದು ಸಾವಿರಾರು ಸಂಖ್ಯೆಯ ಪ್ರವಾಸಿಗರು ವಿವಿಧ ಕಡೆಯಿಂದ ಆಗಮಿಸುತ್ತಿರುತ್ತಾರೆ. ಇದೀಗ ಹೊಸ ವರ್ಷವೂ ಸಹ ವಾರಾಂತ್ಯದ ಭಾನುವಾರ ಬಂದಿದ್ದು, ಅನೇಕರು ನಂದಿ ಬೆಟ್ಟದಲ್ಲಿ ಸಂಭ್ರಮಿಸುವ ಪ್ಲಾನ್ ಹಾಕಿಕೊಂಡಿರುತ್ತಾರೆ. ಆದರೆ ಅವರ ಪ್ಲಾನ್ ಗೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ.

ಪ್ರತಿ ವರ್ಷವೂ ಇದೇ ಮಾದರಿಯಲ್ಲಿ ನೂತನ ವರ್ಷದ ಆರಂಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪ್ರವಾಸಿಗರಿಗೆ ನಂದಿಗಿರಿಧಾಮ ಪ್ರವೇಶಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ನಿರ್ಬಂಧ ಹೇರಿದೆ. ಕಳೆದ ವರ್ಷವೂ ಸಹ ಇದೇ ರೀತಿಯ ಆದೇಶ ಹೊರಡಿಸಿದ್ದು, ನಂದಿ ಬೆಟ್ಟ ಹಾಗೂ ಸ್ಕಂದಗರಿ ಗೆ ಪ್ರವೇಶ ನಿಷೇಧ ಹೇರಲಾಗಿತ್ತು.