Film News

ನಂದಮೂರಿ ಬಾಲಕೃಷ್ಣ ರವರ ಜೊತೆಗೆ ನಟಿಸಲು ನೋ ಎಂದಿದ್ರಂತೆಆ ನಟಿ, ಆಕೆ ಯಾರು ಗೊತ್ತಾ?

ಟಾಲಿವುಡ್ ಸಿನಿರಂಗದ ಸ್ಟಾರ್‍ ನಟ ನಂದಮೂರಿ ಬಾಲಕೃಷ್ಣ ಸದ್ಯ ಸಕ್ಸಸ್ ಹಾದಿಯಲ್ಲಿ ಮುನ್ನುಗ್ಗುತ್ತಿದ್ದಾರೆ. ಅಖಂಡ ಸಿನೆಮಾದ ಮೂಲಕ ಬ್ಲಾಕ್ ಬ್ಲಸ್ಟರ್‍ ಹಿಟ್ ಪಡೆದುಕೊಂಡರ ಅವರು ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಸಿನೆಮಾಗಳ ಜೊತೆಗೆ ಕಿರುತೆರೆಯಲ್ಲಿ ಅನ್ ಸ್ಟಾಪುಬಲ್ ಎಂಬ ಟಾಕ್ ಶೋ ಹೋಸ್ಟ್ ಮಾಡುತ್ತಾ ಮತಷ್ಟು ಫೇಮಸ್ ಆಗುತ್ತಿದ್ದಾರೆ. ಈ ಹಿಂದೆ ಬಾಲಯ್ಯನ ಜೊತೆಗೆ ನಟಿಸಿದ್ದ ನಟಿ, ಇದೀಗ ಅವರೊಂದಿಗೆ ನಟಿಸಲು ನೋ ಎಂದು ಹೇಳಿದ್ದಾರೆ ಎಂಬ ಸುದ್ದಿಯೊಂದು ಕೇಳಿಬರುತ್ತಿದೆ. ಆ ನಟಿ ಯಾರು ಎಂಬ ವಿಚಾರಕ್ಕೆ ಬಂದರೇ,

ನಟಸಿಂಹ ನಂದಮೂರಿ ಬಾಲಕೃಷ್ಣ ರವರ ಸಿನೆಮಾ ಕೆರಿಯರ್‍ ನಲ್ಲೇ ಹೈಯೆಸ್ಟ್ ಗ್ರಾಸ್ ಗಳಿಸಿದ ಸಿನೆಮಾ ಅಖಂಡ ಎಂದೇ ಹೇಳಬಹುದು. ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಭಾರಿ ಕಲೆಕ್ಷನ್ ಮಾಡಿದೆ. ಈ ಸಿನೆಮಾದ ಬಳಿಕ ವೀರಸಿಂಹಾರೆಡ್ಡಿ, ಭಗವಂತ್ ಕೇಸರಿ ಸಿನೆಮಾಗಳ ಮೂಲಕ ಹ್ಯಾಟ್ರಿಕ್ ಪಡೆದುಕೊಂಡರು. ಯಂಗ್ ನಟರಿಗೂ ಪೈಪೋಟಿ ಕೊಡುವಂತಹ ಆಕ್ಷನ್ ದೃಶ್ಯಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ಟಾಲಿವುಡ್ ಖ್ಯಾತ ನಿರ್ದೇಶಕ ಬಾಬಿ ಜೊತೆಗೆ NBK109 ಟೈಟಲ್ ನಡಿಯಲ್ಲಿ ಸಿನೆಮಾ ಮಾಡುತ್ತಿದ್ದಾರೆ. ಬಾಲಕೃಷ್ಣ ರವರ ವೀರಸಿಂಹಾರೆಡ್ಡಿ ಸಿನೆಮಾದಲ್ಲಿ ನಟಿಸಲು ಓರ್ವ ನಟಿಯನ್ನು ಸಂಪರ್ಕ ಮಾಡಿದಾಗ ಆಕೆ ಆಗೊಲ್ಲ ಎಂದು ಹೇಳಿದ್ದಾರಂತೆ. ಆಕೆ ಬೇರೆ ಯಾರೂ ಅಲ್ಲ ಮೀರಾ ಜಾಸ್ಮಿನ್. ಹೌದು ಬಾಲಕೃಷ್ಣ ಜೊತೆಗೆ ನಟಿಸಲು ಮೀರಾ ಜಾಸ್ಮೀನ್ ನೋ ಎಂದು ಹೇಳಿದ್ದಾರೆ ಎಂಬ ಸುದ್ದಿಯೊಂದು ವೈರಲ್ ಆಗುತ್ತಿದೆ.

ಸೌತ್ ಸಿನಿರಂಗದಲ್ಲಿ ಹೋಮ್ಲಿ ಬ್ಯೂಟಿ ಎಂದೇ ಫೇಂ ಪಡೆದುಕೊಂಡಿದ್ದ ಮೀರಾ ಜಾಸ್ಮೀನ್ ಸದ್ಯ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಸುಮಾರು ವರ್ಷಗಳ ಕಾಲ ಸಿನೆಮಾಗಳಿಂದ ಬ್ರೇಕ್ ಪಡೆದುಕೊಂಡ ನಟಿ ಇದೀಗ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ಆಕೆ ರವಿತೇಜ, ಪವನ್ ಕಲ್ಯಾಣ್ ಸೇರಿದಂತೆ ಬಾಲಕೃಷ್ಣ ಜೊತೆಗೆ ಸಹ ನಟಿಸಿದ್ದರು. ಇದೀಗ ಅವಕಾಶಗಳಿಗಾಗಿ ಆಕೆ ಓವರ್‍ ಆಗಿಯೇ ಗ್ಲಾಮರ್‍ ಶೋ ಮಾಡುತ್ತಿದ್ದಾರೆ. ಈ ಹಿಂದೆ ವಿಕ್ಟರಿ ವೆಂಕಟೇಶ್ ಜೊತೆಗೆ ನಾರೆಪ್ಪ ಸಿನೆಮಾದಲ್ಲಿ ನಟಿಸುವ ಅವಕಾಶ ಬಂದರೂ ನೋ ಎಂದು ಹೇಳಿದ್ರಂತೆ. ಅದೇ ರೀತಿ ಬಾಲಕೃಷ್ಣ ಜೊತೆಗೆ ವೀರಸಿಂಹಾರೆಡ್ಡಿ ಸಿನೆಮಾದಲ್ಲಿ ನಟಿಸೋಕೂ ನೋ ಎಂದು ಹೇಳಿದ್ರಂತೆ. ಅಷ್ಟಕ್ಕೂ ಮೀರಾ ಜಾಸ್ಮೀನ್ ಏತಕ್ಕಾಗಿ ಈ ಆಫರ್‍ ರಿಜೆಕ್ಟ್ ಮಾಡಿದರೂ ಎಂಬ ಚರ್ಚೆ ಸೋಷಿಯಲ್ ಮಿಡಿಯಾದಲ್ಲಿ ಜೋರಾಗಿಯೇ ನಡೆಯುತ್ತಿದೆ.

Most Popular

To Top