ಕಾಂತಾರ-2 ಸಿನೆಮಾದ ಕ್ರೇಜಿ ರೂಮರ್, ಕಾಂತಾರ ಪ್ರೀಕ್ವೆಲ್ ನಲ್ಲಿ ನಟಿಸಲಿದ್ದಾರಂತೆ ಜೂನಿಯರ್ ಎನ್.ಟಿ.ಆರ್?

Follow Us :

ಸ್ಯಾಂಡಲ್ ವುಡ್ ನಲ್ಲಿ ಕಡಿಮೆ ಬಜೆಟ್ ನಲ್ಲಿ ತಯಾರಾದ ಸಿನೆಮಾ ಕಾಂತಾರ ಭಾರಿ ಸಕ್ಸಸ್ ಕಂಡುಕೊಂಡಿತ್ತು. ಮೊದಲಿಗೆ ಕನ್ನಡದಲ್ಲಿ ತೆರೆಕಂಡ ಈ ಸಿನೆಮಾ ಬಳಿಕ ವಿವಿಧ ಭಾಷೆಗಳಲ್ಲೂ ಸಹ ತೆರೆಕಂಡು ಭಾರಿ ಸಕ್ಸಸ್ ಕಂಡುಕೊಂಡಿತ್ತು. ಇದೀಗ ಕಾಂತಾರಾ ಪ್ರೀಕ್ವೆಲ್ ಘೋಷಣೆಯಾಗಿದ್ದು, ಶೂಟಿಂಗ್ ಗೆ ತಯಾರಿ ಸಹ ನಡೆಯುತ್ತಿದೆ. ಇದೀಗ ಈ ಸಿನೆಮಾದಿಂದ ಕ್ರೇಜಿ ರೂಮರ್‍ ಒಂದು ಕೇಳಿಬರುತ್ತಿದೆ. ಗ್ಲೋಬಲ್ ಸ್ಟಾರ್‍ ಜೂನಿಯರ್‍ ಎನ್.ಟಿ.ಆರ್‍ ಕಾಂತಾರ-2 ಸಿನೆಮಾದಲ್ಲಿ ನಟಿಸಲಿದ್ದಾರೆ ಎಂಬ ರೂಮರ್‍ ಜೋರಾಗಿ ಹರಿದಾಡುತ್ತಿದ್ದು, ಸೌತ್ ಸಿನಿ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.

ಸ್ಯಾಂಡಲ್ ವುಡ್ ನಟ ಕಂ ನಿರ್ದೇಶಕ ರಿಷಭ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಸಿನೆಮಾ 20 ಕೋಟಿ ಬಜೆಟ್ ನಲ್ಲಿ ಬಿಡುಗಡೆಯಾಗಿ ಭಾರತೀಯ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ 400 ಕೋಟಿ ಬಾಚಿಕೊಂಡಿತ್ತು. ಸುಮಾರು ದಿನಗಳ ಹಿಂದೆಯಷ್ಟೆ ಕಾಂತಾರ ಪ್ರೀಕ್ವೆಲ್ ನಿರ್ಮಾಣ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿತ್ತು. ಈಗಾಗಲೇ ಸಿನೆಮಾದ ಕೆಲಸಗಳೂ ಸಹ ಶುರುವಾಗಿದ್ದು, ಕೆಲವು ದಿನಗಳ ಹಿಂದೆಯಷ್ಟೆ ಸಿನೆಮಾದ ಪೋಸ್ಟರ್‍ ಸಹ ಬಿಡುಗಡೆಯಾಗಿತ್ತು. ಈ ಪೋಸ್ಟರ್‍ ತುಂಬಾನೆ ಸದ್ದು ಮಾಡಿತ್ತು. ಇದೀಗ ಈ ಸಿನೆಮಾದ ಬಗ್ಗೆ ಭಾರಿ ನಿರೀಕ್ಷೆ ಹುಟ್ಟಿದೆ. ಈ ಸಿನೆಮಾದಲ್ಲಿ ಇದೀಗ ಜೂನಿಯರ್‍ ಎನ್.ಟಿ.ಆರ್‍ ರವರು ನಟಿಸಲಿದ್ದಾರೆ ಎಂಬ ಸುದ್ದಿಯೊಂದು ವೈರಲ್ ಆಗುತ್ತಿದ್ದು, ಸಿನಿವಲಯದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಕಾಂತಾರ ಪ್ರೀಕ್ವೆಲ್ ಸಿನೆಮಾವನ್ನು ಭಾರಿ ಪ್ಲಾನ್ ಸಿದ್ದಪಡಿಸಿ ಸೆಟ್ಟೇರಿಸಲಾಗಿದೆ. ಈಗಾಗಲೇ ಸಿನೆಮಾದ ಬಗ್ಗೆ ಪ್ರೇಕ್ಷಕರೂ ಸಹ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಚಿತ್ರತಂಡ ಸಹ ಭಾರಿ ಪ್ರಮಾಣದಲ್ಲಿ ಸಿನೆಮಾ ಚಿತ್ರೀಕರಣ ಮಾಡುತ್ತಿದ್ದಾರೆ. ಸಿನೆಮಾದಲ್ಲಿನ ಪಾತ್ರಗಳನ್ನು ಸಹ ಪಕ್ಕಾ ಪ್ಲಾನ್ ಮಾಡಿ ಆಯ್ಕೆ ಮಾಡಲಾಗುತ್ತಿದೆಯಂತೆ. ಇದೀಗ ಈ ಸಿನೆಮಾದಲ್ಲಿ ನಟಿಸಲು ಜೂನಿಯರ ಎನ್.ಟಿ.ಆರ್‍ ರವರನ್ನು ಪ್ರಮುಖ ಪಾತ್ರವೊಂದಕ್ಕೆ ಆಯ್ಕೆ ಮಾಡಿಕೊಳ್ಳಲಾಗುತ್ತಿದೆಯಂತೆ. ಈಗಾಗಲೇ ಎನ್.ಟಿ.ಆರ್‍ ರವರನ್ನು ಸಂಪರ್ಕ ಮಾಡಿದ್ದು, ಅವರೂ ಸಹ ನಟಿಸೋಕೆ ಒಪ್ಪಿಗೆ ನೀಡಿದ್ದಾರಂತೆ. ಜೊತೆಗೆ ರಿಷಭ್ ಶೆಟ್ಟಿಯವರು ಎನ್.ಟಿ.ಆರ್‍. ರವರ ಅಭಿಮಾನಿಯಾಗಿದ್ದು, ಅವರ ಜೊತೆಗೆ ಒಳ್ಳೆಯ ಗೆಳೆತನ ಸಹ ಬೆಳೆಸಿಕೊಂಡಿದ್ದಾರೆ ಎನ್ನಲಾಗಿದೆ. ಜೊತೆಗೆ ಕೆಲವು ದಿನಗಳ ಹಿಂದೆಯಷ್ಟೆ ಜೂ.ಎನ್.ಟಿ.ಆರ್‍ ರವರು ಬೆಂಗಳೂರಿಗೆ ಬಮದಾಗ ಪ್ರಶಾಂತ್ ನೀಲ್ ಹಾಗೂ ರಿಷಭ್ ರವರನ್ನು ಭೇಟಿಯಾಗಿದ್ದರಂತೆ. ಈ ವೇಳೆ ಕಾಂತಾರ ಪ್ರೀಕ್ವೆಲ್ ಬಗ್ಗೆ ಸಹ ಚರ್ಚೆ ನಡೆದಿದೆ ಎನ್ನಲಾಗಿದೆ.

ಇನ್ನೂ ಈ ಸುದ್ದಿಯ ಬಗ್ಗೆ ಯಾವುದೇ ಅಧಿಕೃತ ಅಪ್ಡೇಟ್ ಬಂದಿಲ್ಲ. ಆದರೆ ಸುದ್ದಿ ಮಾತ್ರ ಸೌತ್ ಸಿನಿರಂಗದಲ್ಲಿ ಭಾರಿ ಸದ್ದು ಮಾಡುತ್ತಿದೆ. ಸದ್ಯ ಜೂನಿಯರ್‍ ಎನ್.ಟಿ.ಆರ್‍ ರವರು ದೇವರ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ NTR31, ದೇವರ ಪಾರ್ಟ್-2, ವಾರ್‍-2 ಬಾಲಿವುಡ್ ಸಿನೆಮಾದಲ್ಲೂ ಜೂನಿಯರ್‍ ಎನ್.ಟಿ.ಆರ್‍ ಬ್ಯುಸಿಯಾಗಿದ್ದಾರೆ.