Film News

ತಲೈವಾ ರಜನಿಕಾಂತ್ ರವರ ಜನ್ಮದಿನದ ಸಂಭ್ರಮ, ಹರಿದು ಬಂದ ಶುಭಾಷಯಗಳು, ಸ್ಪೇಷಲ್ ಆಗಿ ವಿಶ್ ಮಾಡಿದ ಧನುಷ್……!

ಸುಮಾರು ವರ್ಷಗಳಿಂದ ಯಂಗ್ ಹಿರೋಗಳಿಗೂ ಸಹ ಪೈಪೋಟಿ ನೀಡುವಂತೆ ಸ್ಟಾರ್‍ ನಟನಾಗಿ ಮುನ್ನುಗ್ಗುತ್ತಿದ್ದಾರೆ. ರಜನಿಕಾಂತ್ ರವರು ಬೆಂಗಳೂರಿನಲ್ಲಿ 1950 ಡಿಸೆಂಬರ್‍ 12 ರಂದು ಜನಿಸಿದರು. ಇಂದು (ಡಿ.12) ರಂದು ಅವರು 73ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಸಿನೆಮಾ ಸೆಲೆಬ್ರೆಟಿಗಳು, ರಾಜಕಾರಣಿಗಳೂ ಸೇರಿದಂತೆ ಅಭಿಮಾನಿಗಳೂ ಸಹ ಶುಭಾಷಯಗಳ ಸುರಿಮಳೆಗೈದಿದ್ದಾರೆ. ಸ್ಟಾರ್‍ ನಟ ಧನುಷ್ ಸಹ ಸ್ಪೇಷಲ್ ಆಗಿ ಶುಭಾಷಯಗಳನ್ನು ಕೋರಿದ್ದಾರೆ. ಹ್ಯಾಪಿ ಬರ್ತ್ ಡೇ ತಲೈವಾ ಎಂದು ಪೋಸ್ಟ್ ಮಾಡಿದ್ದಾರೆ. ಧನುಷ್ ಮಾಡಿರುವ ಪೋಸ್ಟ್ ಸೋಶಿಯಲ್  ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಕಾಲಿವುಡ್ ನಲ್ಲಿ ತಲೈವಾ ಎಂತಲೇ ಖ್ಯಾತಿ ಪಡೆದುಕೊಂಡ ಸೂಪರ್‍ ಸ್ಟಾರ್‍ ರಜನಿಕಾಂತ್ ರವರು ಸಿನೆಮಾಗಳಲ್ಲಿ ಆಕ್ಟಿವ್ ಆಗಿದ್ದಾರೆ. ತಮಿಳು ಸಿನೆಮಾಗಳಲ್ಲಿ ಮಾತ್ರವಲ್ಲದೇ ಕನ್ನಡ, ಹಿಂದಿ, ತೆಲುಗು ಭಾಷೆಗಳಲ್ಲೂ ಸಹ ರಜನಿಕಾಂತ್ ನಟಿಸಿ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಗಿಟ್ಟಿಸಿಕೊಂಡಿದ್ದಾರೆ. ಸೌತ್ ಸಿನಿರಂಗದ ಶ್ರೀಮಂತ ನಟ ಎಂಬ ಖ್ಯಾತಿಗೂ ಸಹ ಪಾತ್ರರಾಗಿದ್ದಾರೆ. ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್‍ ಆಗಿದ್ದ ರಜನಿಕಾಂತ್ ಸಿನೆಮಾಗಳ ಮೇಲಿನ ಆಸಕ್ತಿಯ ಕಾರಣದಿಂದ ಚೆನೈಗೆ ಹೋಗಿ, 1975 ರಲ್ಲಿ ರಿಲೀಸ್ ಆದ ಅಪೂರ್ವ ರಾಂಗಂಗಳ್ ಸಿನೆಮಾದಲ್ಲಿ ಮೊದಲ ಬಾರಿಗೆ ನಟಿಸಿದರು. ಕಥಾ ಸಂಗಮ ಎಂಬ ಕನ್ನಡ ಸಿನೆಮಾದಲ್ಲಿ ನಟಿಸಿದ್ದರು. ಬಳಿಕ ಅನೇಕ ಸಿನೆಮಾಗಳ ಮೂಲಕ ಅವರು ಸ್ಟಾರ್‍ ಡಂ ಗಿಟ್ಟಿಸಿಕೊಂಡರು.

ಕಾಲಿವುಡ್ ನಲ್ಲಿ ಸ್ಟಾರ್‍ ನಟನಾಗಿ ಫೇಂ ಪಡೆದುಕೊಂಡ ರಜನಿಕಾಂತ್ ದಕ್ಷಿಣ ಭಾರತದ ಅನೇಕ ಭಾಷೆಗಳಲ್ಲಿ ನಟಿಸಿದರು. ಹಂತ ಹಂತವಾಗಿ ಸೌತ್ ನಲ್ಲಿ ಸ್ಟಾರ್‍ ನಟನಾಗಿ ಅನೇಕ ಸಿನೆಮಾಗಳಲ್ಲಿ ನಟಿಸಿ ಅವಾರ್ಡಗಳು, ಪುರಸ್ಕಾರಗಳನ್ನೂ ಸಹ ಸ್ವಂತ ಮಾಡಿಕೊಂಡರು. ರಜನಿಕಾಂತ್ ರವರಿಗೆ ಕೇವಲ ಇಂಡಿಯಾದಲ್ಲಿ ಮಾತ್ರವಲ್ಲದೇ ಜಪಾನ್, ಮಲೇಶಿಯಾ, ಇಂಡೋನೇಷಿಯಾ ದೇಶಗಳಲ್ಲೂ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಕೆಲವೊಂದು ದೇಶಗಳಲ್ಲಿ ರಜನಿಕಾಂತ್ ರವರ ಸಿನೆಮಾ ಬಿಡುಗಡೆಯ ದಿನದಂದು ರಜೆಯನ್ನು ಸಹ ನೀಡಿದ ಉದಾಹರಣೆಗಳೂ ಸಹ ಇದೆ. ಜೊತೆಗೆ 2010 ರಲ್ಲಿ ಪೋರ್ಬ್ಸ್ ಪಟ್ಟಿಯಲ್ಲಿ ಭಾರತದ ಪ್ರಭಾವಿ ವ್ಯಕ್ತಿಗಳ ಸಾಲಿನಲ್ಲಿ ರಜನಿಕಾಂತ್ ರವರ ಹೆಸರು ಸಹ ಇತ್ತು.

ಇನ್ನೂ ರಜನಿಕಾಂತ್ ರವರ ಆಸ್ತಿಯ ವಿಚಾರಕ್ಕೆ ಬಂದರೇ ಅವರ ಬಳಿ ಬರೊಬ್ಬರಿ 430 ಕೋಟಿ ರೂಪಾಯಿ ಆಸ್ತಿಯಿದೆ ಎನ್ನಲಾಗಿದೆ. ಸಿನೆಮಾ ಒಂದಕ್ಕೆ ರಜನಿಕಾಂತ್ ರವರು ಕನಿಷ್ಟ ಎಂದರೂ 50 ಕೋಟಿ ಸಂಭಾವನೆ ಪಡೆದುಕೊಳ್ಳುತ್ತಾರೆ ಎನ್ನಲಾಗಿದೆ. ಒಂದು ವೇಳೆ ಸಿನೆಮಾ ಸೋತರೇ  ಆ ಹಣವನ್ನು ಮರಳಿ ನೀಡಿದಂತಹ ಉದಾಹರಣೆಗಳೂ ಇದೆ. ಕೊನೆಯದಾಗಿ ಅವರು ಜೈಲರ್‍ ಸಿನೆಮಾದ ಮೂಲಕ ಪ್ರೆಕ್ಷಕರ ಮುಂದೆ ಬಂದಿದ್ದರು. ಈ ಸಿನೆಮಾ ಸಹ ಭಾರಿ ಕಲೆಕ್ಷನ್ ಮಾಡಿದೆ. ಈ ಸಿನೆಮಾಗಾಗಿ ಅವರು ನೂರು ಕೋಟಿ ಸಂಭಾವನೆ ಪಡೆದಿದ್ದರು ಎನ್ನಲಾಗಿದೆ. ರಜನಿಕಾಂತ್ ರವರ ಬಳಿ ದುಬಾರಿ ಬೆಲೆ ಕಾರುಗಳೂ ಸಹ ಇದೆ. ಅವರ ಬಳಿ ಇನೋವಾ, ಹೋಂಡಾ ಸಿವಿಕ್, ಪ್ರೀಮಿಯರ್‍ ಪದ್ಮಿನಿ, ಅಂಬಾಸಿಡರ್‍, ಬಿಎಂಎಬ್ಲ್ಯೂ ಎಕ್ಸ್-5, ಮರ್ಸೀಡಿಸ್ ಬೆಂಜ್ ಜಿ ವ್ಯಾಗನ್. ಬೆಂಟ್ಲಿ, ಲಾಂಬೋರ್ಗಿನಿ ಉರುಸ್ ಮೊದಲಾದ ಕಾರುಗಳು ರಜನಿಕಾಂತ್ ರವರ ಬಳಿಯಿದೆ.

Most Popular

To Top