ಕಾಂತಾರ ಚಾಪ್ಟರ್-1 ಸಿನೆಮಾದಲ್ಲಿ ನಟಿಸೋಕೆ ನಿಮಗೆ ಆಸೆ ಇದೆಯೇ, ಇನ್ಯಾಕೆ ತಡ ನೀವು ಪ್ರಯತ್ನಿಸಿ…..!

Follow Us :

ಇಡೀ ದೇಶದಾದ್ಯಂತ ಭಾರಿ ಸಂಚಲನ ಸೃಷ್ಟಿಸಿದ ಕಾಂತಾರ ಸಿನೆಮಾ ಅನೇಕ ಅವಾರ್ಡ್‌ಗಳನ್ನು ಪಡೆದುಕೊಂಡಿದೆ. ಕಡಿಮೆ ಬಜೆಟ್ ನಲ್ಲಿ ನಿರ್ಮಾಣವಾದ ಈ ಸಿನೆಮಾ ಪ್ಯಾನ್ ಇಂಡಿಯಾ ಸಿನೆಮಾ ಆಗಿ ಭಾರಿ ಕಲೆಕ್ಷನ್ ಸಹ ಮಾಡಿದೆ. ಕೆಲವು ದಿನಗಳ ಹಿಂದೆಯಷ್ಟೆ ಕಾಂತಾರ-ಚಾಪ್ಟರ್‍-1 ಸಿನೆಮಾದ ಅಪ್ಡೇಟ್ ಹೊರಬಂದಿತ್ತು. ಕಾಂತಾರ-1 ಸಿನೆಮಾದ ಟೈಟಲ್ ಪೋಸ್ಟರ್‍ ಹಾಗೂ ಟೀಸರ್‍ ರಿಲೀಸ್ ಆದ ಕಡಿಮೆ ಸಮಯದಲ್ಲೇ ಭಾರಿ ಕ್ರೇಜ್ ಪಡೆದುಕೊಂಡಿತ್ತು. ನಟ ರಿಷಭ್ ಶೆಟ್ಟಿಯ ಅವತಾರ ಕಂಡು ಅಭಿಮಾನಿಗಳು ಸಿನೆಮಾದ ಮೇಲೆ ಮತಷ್ಟು ನಿರೀಕ್ಷೆ ಬೆಳೆಸಿಕೊಂಡಿದ್ದಾರೆ.

ಕಾಂತಾರ ಸಿನೆಮಾವನ್ನು ನಟ ಕಂ ನಿರ್ದೇಶಕ ರಿಷಭ್ ಶೆಟ್ಟಿ ರವರೇ ನಿರ್ದೇಶಿಸಿ ನಟಿಸಿದ್ದಾರೆ. ಈ ಸಿನೆಮಾಗೆ ಹೊಂಬಾಳೆ ಫಿಲಂಸ್ ಬಂಡವಾಳ ಹೂಡಿತ್ತು. ಇದೀಗ ಕಾಂತಾರ ಚಾಪ್ಟರ್‍-1 ಸಿನೆಮಾ ಘೋಷಣೆಯಾಗಿದ್ದು, ಶೂಟಿಂಗ್ ಸಹ ಶೀಘ್ರ ಆರಂಭವಾಗಲಿದೆ. ಈ ಸಿನೆಮಾದಲ್ಲಿನ ಪಾತ್ರಗಳಿಗಾಗಿ ಕಲಾವಿದರ ಆಯ್ಕೆ ನಡೆಯಲಿದೆ. ಸಿನೆಮಾದ ಪಾತ್ರಗಳ ಆಯ್ಕೆಗಾಗಿ ಹೊಂಬಾಳೆ ಫಿಲಂಸ್ ಜಾಹಿರಾತೊಂದನ್ನು ಹಂಚಿಕೊಂಡಿದೆ. ಕಲಾವಿದರು ಬೇಕಾಗಿದ್ದಾರೆ ಎಂದು ಹೋಂಬಾಳೆ ಫಿಲಂಸ್ ಪೋಸ್ಟರ್‍ ಹಂಚಿಕೊಂಡಿದೆ. ಈ ಪೋಸ್ಟರ್‍ ನಲ್ಲಿ ಪುರುಷರ ವಯಸ್ಸು 30 ರಿಂದ 60 ವರ್ಷ ಹಾಗೂ ಮಹಿಳೆಯರ ವಯಸ್ಸು 18 ರಿಂದ 60 ವರ್ಷದ ಅಂತರದಲ್ಲಿರಬೇಕು ಎಂದು ಪೋಸ್ಟರ್‍ ನಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.

ಇನ್ನೂ ಆಸಕ್ತರು ನೊಂದಣಿ ಮಾಡಲು www.kantara.film ಅಂತರ್ಜಾಲ ತಾಣಕ್ಕೆ ಭೇಟಿ ನೀಡಬೇಕು. ಡಿ.14 ರೊಳಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಇದರ ಜೊತೆಗೆ ಮತ್ತೊಂದು ವಿಶೇಷ ಸೂಚನೆಯನ್ನು ನೀಡಿದೆ. ರೀಲ್ಸ್ ಹಾಗೂ ರೀಲ್ಸ್ ಮಾದರಿಯ ವಿಡಿಯೋಳಿದ್ದರೇ ಅದನ್ನು ಸ್ವೀಕರಿಸುವುದಿಲ್ಲ ಎಂದು ಹೊಂಬಾಳೆ ಫಿಲಂಸ್ ನಿಯಮ ಮಾಡಿದೆ. ಕಾಂತಾರ ಚಾಪ್ಟರ್‍-1 ಸಿನೆಮಾವನ್ನು ರಿಷಭ್ ಶೆಟ್ಟಿಯವರೇ ನಿರ್ದೇಶನ ಮಾಡುತ್ತಿದ್ದು, ಹೊಂಬಾಳೆ ಫಿಲಂಸ್ ಬಂಡವಾಳ ಹೂಡುತ್ತಿದೆ. ಕಾಂತಾರ ಸಿನೆಮಾದ ಕಥೆ ನಡೆಯುವುದಕ್ಕೂ ಮುಂಚೆ ಏನಾಗಿತ್ತು ಎಂಬುದನ್ನು ಕಾಂತಾರ ಚಾಪ್ಟರ್‍-1 ರಲ್ಲಿ ತೋರಿಸಲಾಗುತ್ತದೆ ಎಂದು ಹೇಳಲಾಗಿದೆ. ಇನ್ನೂ ಕೆಲವು ದಿನಗಳ ಹಿಂದೆಯಷ್ಟೆ ಸಿನೆಮಾದ ಪೋಸ್ಟರ್‍ ರಿಲೀಸ್ ಆಗಿದ್ದು ಭಾರಿ ಸದ್ದು ಮಾಡಿದೆ. ಈ ಸಿನೆಮಾ ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ, ಬೆಂಗಾಲಿ ಸೇರಿದಂತೆ ಇಂಗ್ಲೀಷ್ ಭಾಷೆಯಲ್ಲಿ ಸಿನೆಮಾ ತೆರೆಕಾಣಲಿದೆ.