ತೆಲುಗು ನಟ ಅಡವಿ ಶೇಷ್ ಹಾಗೂ ಆ ನಟಿಯ ಜೊತೆಗೆ ನಿಶ್ಚಿತಾರ್ಥವಂತೆ, ದಿನಾಂಕ ಸಹ ನಿಗಧಿಯಂತೆ, ವೈರಲ್ ಆದ ಸುದ್ದಿ….!

ಟಾಲಿವುಡ್ ನಲ್ಲಿ ವಿಭಿನ್ನ ಸಿನೆಮಾಗಳು, ವಿಭಿನ್ನ ಪಾತ್ರಗಳ ಮೂಲಕ ಕ್ರೇಜ್ ಪಡೆದುಕೊಂಡ ಅಡಿವಿಶೇಷ್ ಇತ್ತಿಚಿಗಷ್ಟೆ ಹಿಟ್-2 ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಅಡಿವಿಶೇಷ್ ಇತ್ತಿಚಿಗೆ ಅನೇಕ ಹಿಟ್ ಸಿನೆಮಾಗಳ ಮೂಲಕ ಸಕ್ಸಸ್ ಪುಲ್ ಕೆರಿಯರ್‍ ಸಾಗಿಸುತ್ತಿದ್ದಾರೆ. ಇದೀಗ ಅಡವಿ ಶೇಷ್ ಮದುವೆಯಾಗಲಿದ್ದಾರಂತೆ. ಆತ ತೆಲುಗು ಸಿನಿರಂಗದ ದೊಡ್ಡ ಕುಟುಂಬದ ಅಳಿಯನಾಯಗಲಿದ್ದಾನಂತೆ. ಜೊತೆಗೆ ನಿಶ್ಚಿತಾರ್ಥದ ದಿನಾಂಕ ಸಹ ನಿಗಧಿಯಾಗಿದೆ ಎಂಬ ರೂಮರ್‍ ಜೋರಾಗಿ ಹರಿದಾಡುತ್ತಿದೆ.

ಇತ್ತೀಚಿಗೆ ಸಿನಿರಂಗದಲ್ಲಿ ಸಾಲು ಸಾಲು ಸೆಲೆಬ್ರೆಟಿಗಳ ಮದುವೆಗಳು ನಡೆಯುತ್ತಿದೆ. ಅನೇಕ ಸ್ಟಾರ್‍ ಗಳು ಮದುವೆಯಾಗಿ ಗೃಹಸ್ಥಾಶ್ರಮಕ್ಕೆ ಕಾಲಿಡುತ್ತಿದ್ದಾರೆ. ಇದೀಗ ಈ ಸಾಲಿಗೆ ನಟ ಅಡವಿಶೇಷ್ ಸಹ ಮದುವೆಯಾಗಲಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ. ಸುಮಾರು ದಿನಗಳಿಂದ ಅಕ್ಕಿನೇನಿ ಕುಟುಂಬದ ನಟಿ ಕಂ ನಿರ್ಮಾಪಕಿ ಸುಪ್ರಿಯಾ ಜತೆಗೆ ಪ್ರೇಮಪಯಣ ಸಾಗಿಸುತ್ತಿದ್ದಾರೆ ಎಂಬ ಸುದ್ದಿ ತುಂಭಾನೆ ಸದ್ದು ಮಾಡುತ್ತಿದೆ. ಆಕೆಯನ್ನೇ ಅಡವಿ ಶೇಷ್ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಈಗಾಗಲೇ ಅವರಿಬ್ಬರ ಮದುವೆ ರೂಮರ್‍ ಜೋರಾಗಿಯೇ ಹರಿದಾಡುತ್ತಿದೆ. ಅದಕ್ಕೆ ಕಾರಣಗಳೂ ಸಹ ಇದೆ. ಈ  ಹಿಂದೆ ಅನೇಕ ಕಾರ್ಯಕ್ರಮಗಳಲ್ಲಿ ಅವರಿಬ್ಬರು ಜೋಡಿಯಾಗಿ ಕಾಣಿಸಿಕೊಂಡಿದ್ದರು. ಅಕ್ಕಿನೇನಿ ಕುಟುಂಬದ ಕೆಲವೊಂದು ಕಾರ್ಯಕ್ರಮಗಳಲ್ಲೂ ಸಹ ಅಡವಿ ಶೇಷ್ ಕಾಣಿಸಿಕೊಂಡಿದ್ದು, ಈ ರೂಮರ್‍ ಹರಿದಾಡಲು ಕಾರಣವಾಗಿತ್ತು.

ಇನ್ನೂ ಈ ರೂಮರ್‍ ಬಗ್ಗೆ ಎರಡೂ ಕುಟುಂಬಗಳೂ ಯಾವುದೇ ರೀತಿಯಲ್ಲಿ ರಿಯಾಕ್ಟ್ ಆಗಿರಲಿಲ್ಲ. ಇದೀಗ ಅವರಿಬ್ಬರ ಎಂಗೇಜ್ ಮೆಂಟ್ ನಡೆಯಲಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಇಲ್ಲಿಯವರೆಗೂ ಅವರಿಬ್ಬರ ಮದುವೆಗೆ ಅಕ್ಕಿನೇನಿ ಫ್ಯಾಮಿಲಿ ತಮ್ಮ ನಿರ್ಧಾರವನ್ನು ಹೋಲ್ಡ್ ನಲ್ಲಿಟ್ಟಿದ್ದರಂತೆ. ಇದೀಗ ಅಕ್ಕಿನೇನಿ ಕುಟುಂಬ ಅವರ ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟಿದೆಯಂತೆ. ಈಗಾಗಲೇ ಸುಪ್ರಿಯಾಗೆ ಮದುವೆಯಾಗಿದ್ದು, ಪತಿಯಿಂದ ಬೇರೆಯಾಗಿದ್ದಾರೆ. ಸುಪ್ರಿಯಾ ಸಹ ಎರಡನೇ ಮದುವೆಯಾಗಲು ಒಪ್ಪಿಗೆ ನೀಡಿದ್ದಾರಂತೆ.  ಜೊತೆಗೆ ಅಡವಿಶೇಷ್ ಸಹ ಒಳ್ಳೆಯ ವ್ಯಕ್ತಿತ್ವ ಇರುವಂತಹ ವ್ಯಕ್ತಿಯಾದ ಹಿನ್ನೆಲೆಯಲ್ಲಿ ಆತನೊಂದಿಗೆ ಸುಪ್ರೀಯಾ ಮದುವೆ ಮಾಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

ಇನ್ನೂ ಎಂಗೇಜ್ ಮೆಂಟ್ ದಿನಾಂಕ ಸಹ ಘೋಷಣೆಯಾಗಿದೆಯಂತೆ. ಡಿ.22 ರಂದು ಅವರ ನಿಶ್ಚತಾರ್ಥ ನಡೆಯಲಿದೆಯಂತೆ. ಈ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಆದರೆ ಈ ಬಗ್ಗೆ ಇಲ್ಲಿಯವರೆಗೂ ಎರಡೂ ಕುಟುಂಬಗಳು ರಿಯಾಕ್ಟ್ ಆಗಿಲ್ಲ. ಈಗಾಗಲೇ ಅನೇಕ ಸೆಲೆಬ್ರೆಟಿಗಳ ಮದುವೆಗಳು ಇದೇ ರೀತಿಯಲ್ಲಿ ಸಸ್ಪೆನ್ಸ್ ಆಗಿ ಘೋಷಣೆಯಾಗಿತ್ತು. ಇದೀಗ ಈ ಜೋಡಿಯ ಮದುವೆ ಸಹ ಅದೇ ರೀತಿಯಲ್ಲಿ ನಡೆಯಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.