Film News

ದಳಪತಿ ವಿಜಯ್ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ, ಸಿನೆಮಾಗಳಿಂದ ಗ್ಯಾಪ್ ತೆಗೆದುಕೊಳ್ಳಲಿದ್ದಾರಂತೆ ವಿಜಯ್, ಕಾರಣವಾದ್ರೂ ಏನು?

ಕಾಲಿವುಡ್ ಸಿನಿರಂಗದ ಸ್ಟಾರ್‍ ನಟ ದಳಪತಿ ವಿಜಯ್  ಕಡಿಮೆ ಸಮಯದಲ್ಲೇ ಭಾರಿ ಕ್ರೇಜ್ ಪಡೆದುಕೊಂಡರು. ತಮಿಳು ಮಾತ್ರವಲ್ಲದೇ ತೆಲುಗಿನಲ್ಲೂ ಸಹ ಭಾರಿ ಫೇಂ ಪಡೆದುಕೊಂಡಿದ್ದಾರೆ. ಇನ್ನೂ ನಟ ವಿಜಯ್  ಸದ್ಯ ಸಿನೆಮಾಗಳಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಇದೀಗ ಅವರು ಸಿನೆಮಾಗಳಿಂದ ಬ್ರೇಕ್ ಪಡೆದುಕೊಳ್ಳಲಿದ್ದಾರಂತೆ. ಸದ್ಯ ಈ ಸುದ್ದಿ ಕೇಳಿದ ವಿಜಯ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟಕ್ಕೂ ವಿಜಯ್ ಸಿನೆಮಾಗಳಿಂದ ಬ್ರೇಕ್ ಪಡೆದುಕೊಳ್ಳಲು ಕಾರಣವಾದರೂ ಏನು ಎಂಬ ವಿಚಾರಕ್ಕೆ ಬಂದರೇ,

ಸ್ಟಾರ್‍ ನಟ ವಿಜಯ್  ಸದ್ಯ ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ಲಿಯೋ ಎಂಬ ಸಿನೆಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನೆಮಾದಲ್ಲಿ ವಿಜಯ್ ರಗಡ್ ಲುಕ್ಸ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನೆಮಾ ಅಕ್ಟೋಬರ್‍ 20 ರಂದು ದಸರಾ ಹಬ್ಬದ ಅಂಗವಾಗಿ ರಿಲೀಸ್ ಮಾಡಲಿದ್ದಾರೆ. ಇನ್ನೂ ಈ ಸಿನೆಮಾ ಪ್ಯಾನ್ ಇಂಡಿಯಾ ಸಿನೆಮಾ ಆಗಿದ್ದು, ತಮಿಳು ಸೇರಿದಂತೆ ವಿವಿಧ ಭಾಷೆಗಳಲ್ಲಿ ಈ ಸಿನೆಮಾ ಬಿಡುಗಡೆಯಾಗಲಿದೆ. ಈ ಸಿನೆಮಾದ ಮೇಲೆ ಭಾರಿ ನಿರೀಕ್ಷೆಯನ್ನು ಸಹ ಚಿತ್ರತಂಡ ಇಟ್ಟುಕೊಂಡಿದೆ. ಈ ಬಾರಿ ಸಾವಿರ ಕೋಟಿ ವಸೂಲಿ ಮಾಡುವ ಟಾರ್ಗೆಟ್ ಸಹ ಇಟ್ಟುಕೊಂಡಿದ್ದಾರೆ. ಚಿತ್ರತಂಡದ ಜೊತೆಗೆ ವಿಜಯ್ ಅಭಿಮಾನಿಗಳೂ ಸಹ ಈ ಸಿನೆಮಾದ ಮೇಲೆ ಭಾರಿ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಇನ್ನೂ ಈ ಸಿನೆಮಾದ ಬಳಿಕ ವಿಜಯ್ ವೆಂಕಟ್ ಪ್ರಭು ನಿರ್ದೇಶನದಲ್ಲಿ ಒಂದು ಸಿನೆಮಾ ಮಾಡಲಿದ್ದಾರೆ.

ಇನ್ನೂ ವಿಜಯ್ ಮುಂದಿನ ವರ್ಷ ಸಿನೆಮಾಗಳಿಂದ ಬ್ರೇಕ್ ಪಡೆದುಕೊಳ್ಳುವ ನಿರ್ಣಯ ಪಡೆದುಕೊಂಡಿದ್ದಾರಂತೆ. ನಿರ್ದೇಶಕ ವೆಂಕಟಪ್ರಭು ಸಿನೆಮಾ ಶೀಘ್ರವಾಗಿ ಪೂರ್ಣಗೊಳಿಸಿ ಬಳಿಕ ಮೂರು ವರ್ಷಗಳ ಕಾಲ ಸಿನೆಮಾಗಳಿಂದ ಬ್ರೇಕ್ ಪಡೆದುಕೋಳ್ಳಲಿದ್ದಾರಂತೆ. ಇನ್ನೂ ವಿಜಯ್ ಈ ನಿರ್ಧಾರದ ಹಿಂದೆ ಒಂದು ಬಲವಾದ ಕಾರಣ ಸಹ ಇದೆ. ವಿಜಯ್ ಮೂರು ವರ್ಷಗಳ ಕಾಲ ಸಿನೆಮಾಗಳಿಂದ ದೂರವುಳಿದು ರಾಜಕೀಯದಲ್ಲಿ ಸಕ್ರಿಯರಾಗಲಿದ್ದಾರಂತೆ. ಮುಂಬರುವ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡ ವಿಜಯ್ ರಾಜಕೀಯದಲ್ಲಿ ರೀ ಎಂಟ್ರಿ ಕೊಡಲಿದ್ದಾರಂತೆ. ಮುಂಬರುವ ಚುನಾವಣೆಯ ಮೇಲೆ ಕಣ್ಣಿಟ್ಟ ವಿಜಯ್ ರಾಜಕೀಯ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಸಿನೆಮಾಗಳಿಗೆ ದೂರ ಉಳಿಯಲಿದ್ದಾರಂತೆ. ಇನ್ನೂ ವಿಜಯ್ ರಾಜಕೀಯದ ಎಂಟ್ರಿ ಕಾರಣದಿಂದ ತಮಿಳುನಾಡಿನಲ್ಲಿ ಸಂಚಲನ ಸೃಷ್ಟಿಯಾಗಬಹುದು ಎಂದು ಹೇಳಲಾಗುತ್ತಿದೆ.

ಇನ್ನೂ ವಿಜಯ್ ಕೊನೆಯದಾಗಿ ವಾರಿಸು ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನೆಮಾ ತಮಿಳಿನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದರೂ ಸಹ ತೆಲುಗಿನಲ್ಲಿ ಅಷ್ಟೊಂದು ಕಲೆಕ್ಷನ್ ಮಾಡಲಿಲ್ಲ ಎಂದೇ ಹೇಳಬಹುದು. ಇದೀಗ ಲಿಯೋ ಸಿನೆಮಾದ ಮೂಲಕ ಅಭಿಮಾನಿಗಳ ಮುಂದ ಬರಲಿದ್ದಾರೆ. ಈ ಸಿನೆಮಾದ ಮೇಲೆ ಭಾರಿ ನಿರೀಕ್ಷೆ ಸಹ ಹುಟ್ಟಿದೆ ಎಂದು ಹೇಳಲಾಗುತ್ತಿದೆ.

Most Popular

To Top