Film News

ನಮ್ಮ ತಂದೆಯ ಮನಸ್ಸು ಬದಲಿಸು ಎಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದೆ, ಮನೋಜ್ ಮದುವೆಯ ಬಗ್ಗೆ ಮಂಚು ಲಕ್ಷ್ಮೀ ಕಾಮೆಂಟ್ಸ್…….!

ತೆಲುಗು ಸ್ಟಾರ್‍ ನಟ ಮೋಹನ್ ಬಾಬು ರವರ ಪುತ್ರ ಮಂಚು ಮನೋಜ್ ಹಾಗೂ ಭೂಮಾ ಮೌನಿಕಾ ರೆಡ್ಡಿ ಮದುವೆ ಕೆಲವು ತಿಂಗಳ ಹಿಂದೆಯಷ್ಟೆ ನಡೆಯಿತು. ಅಂದು ಅವರ ಮದುವೆ ಸುದ್ದಿ ಭಾರಿ ಸಂಚಲನ ಸೃಷ್ಟಿ ಮಾಡಿತ್ತು. ಮನೋಜ್ ಹಾಗೂ ಮೋನಿಕಾ ರೆಡ್ಡಿ ಸುಮಾರು ದಿನಗಳಿಂದ ಪ್ರೀತಿಸಿ ಮದುವೆಯಾದರು. ಆದರೆ ಈ ಮದುವೆಗೆ ಮನೋಜ್ ಕುಟುಂಬದಲ್ಲಿ ಇಷ್ಟವಿರಲಿಲ್ಲ. ಮೋಹನ್ ಬಾಬು ಹಾಗೂ ವಿಷ್ಣು ಈ ಮದುವೆಗೆ ತೀವ್ರ ವಿರೋಧ ಒಡ್ಡಿದ್ದರು ಎಂಬ ಪ್ರಚಾರ ಸಹ ನಡೆದಿತ್ತು. ಆದರೆ ಮಂಚು ಲಕ್ಷ್ಮೀ ಮಾತ್ರ ಮುಂದೆ ನಿಂತು ಮನೋಜ್ ಮದುವೆ ಮಾಡಿಸಿದ್ದರು. ಇದೀಗ ಮಂಚು ಲಕ್ಷ್ಮೀ ಮನೋಜ್ ಮದುವೆಯ ಬಗ್ಗೆ ಕೆಲವೊಂದು ಕಾಮೆಂಟ್ಸ್ ಮಾಡಿದ್ದು ಅವು ವೈರಲ್ ಆಗುತ್ತಿವೆ.

ಕಳೆದ ವರ್ಷ ನಟ ಮನೋಜ್ ಹಾಗೂ ಭೂಮಾ ಮೌನಿಕಾ ರೆಡ್ಡಿ ಮದುವೆ ಸುದ್ದಿ ಸಖತ್ ಸಂಚಲನ ಸೃಷ್ಟಿಸಿತ್ತು. ಅವರಿಬ್ಬರ ಮದುವೆ ಮೋಹನ್ ಬಾಬು ಹಾಗೂ ವಿಷ್ಣುಗೆ ಇಷ್ಟವಿರಲಿಲ್ಲವಂತೆ. ಈ ಮದುವೆಗೆ ಮನೆಯವ ತೀವ್ರ ವಿರೋಧವಿತ್ತಂತೆ. ಜೊತೆಗೆ ಈ ಕಾರಣದಿಂದ ಮನೋಜ್ ತನ್ನ ಕುಟುಂಬದಿಂದ ದೂರವೇ ಇದ್ದರಂತೆ. ಆದರೆ ಮಂಚು ಲಕ್ಷ್ಮೀ ಮನೋಜ್ ಮದುವೆಯ ಜವಾಬ್ದಾರಿಯನ್ನು ತೆಗೆದುಕೊಂಡು ಮನೋಜ್ ಮದುವೆ ನಡೆಸಿಕೊಟ್ಟರು. ಕಳೆದ ಮಾರ್ಚ್ 3 ರಂದು ಹೈದರಾಬಾದ್ ನಲ್ಲಿ ಮೌನಿಕಾ ಹಾಗೂ ಮನೋಜ್ ಮದುವೆ ನಡೆಯಿತು. ಈ ಮದುವೆಗೆ ಮೋಹನ್ ಬಾಬು ಕೊನೆಯ ಕ್ಷಣದಲ್ಲಿ ಆಗಮಿಸಿದ್ದರು. ವಿಷ್ಣು ಸಹ ಆಗಮಿಸಿದ್ದರೂ ಸಹ ದೂರವೇ ಇದ್ದರು. ಮದುವೆಯಾದ ಬಳಿಕವೂ ಮನೋಜ್ ಹಾಗೂ ವಿಷ್ಣು ನಡುವೆ ದೊಡ್ಡ ಗಲಾಟೆ ಸಹ ಆಗಿದ್ದು, ಅದನ್ನು ಬೇರೆ ರೀತಿ ಚಿತ್ರೀಕರಿಸಲು ಸಹ ಮುಂದಾಗಿದ್ದರು.

ಇದೀಗ ಮನೋಜ್ ಮದುವೆಯ ಬಗ್ಗೆ ಮಂಚು ಲಕ್ಷ್ಮೀ  ರಿಯಾಕ್ಟ್ ಆಗಿದ್ದಾರೆ. ಮನೋಜ್ ಹಾಗೂ ಮೌನಿಕಾ ಮದುವೆ ಯಾದಾದ್ರಿಯಲ್ಲಿ ನಡೆಯಬೇಕು ಎಂದು ದೇವರಲ್ಲಿ ಬೇಡಿಕೊಂಡಿದ್ದೆ. ನಮ್ಮ ತಂದೆಯ ಮನಸ್ಸು ಬದಲಿಸು ಎಂದು ಬೇಡಿಕೊಂಡಿದ್ದೆ. ಆ ದೇವರು ಕರುಣಿಸಿದರು. ಮನೋಜ್ ಮದುವೆ ನಡೆಯಿತು. ಪ್ರೀತಿಗೆ ಯಾವುದೂ ಅತೀತವಲ್ಲ. ಅವರಿಬ್ಬರೂ ಪ್ರೀತಿಸಿದರೇ ನಾವು ಏನು ಮಾಡಲು ಸಾಧ್ಯ. ಮನೋಜ್ ನನಗೆ ಏನೆ ಕಷ್ಟ ಬಂದರೂ ನನ್ನ ಮುಂದೆ ಇದ್ದರು. ಮನೋಜ್ ಮದುವೆ ನನ್ನ ಮನೆಯಲ್ಲಿ ಮಾಡಿದೆ. ಮದುವೆಗೆ ಮುಂಚೆ ಇಬ್ಬರೂ ನನ್ನ ಹತ್ತಿರವೇ ಇದ್ದರು. ಮದುವೆಯಾದ ಬಳಿಕ ಬೇರೆ ಮನೆ ಮಾಡಿದ್ದಾರೆ. ಮೋನಿಕಾ ಕರೆ ಮಾಡಿ ಅದು ಹೇಗೆ ಮಾಡಬೇಕು, ಇದು ಹೇಗೆ ಮಾಡಬೇಕು ಎಂದು ಕೇಳುತ್ತಿರುತ್ತಾರೆ. ನಾನು ಆಕೆಗೆ ಹೇಳದೇ ಟಾರ್ಚರ್‍ ಕೊಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಇನ್ನೂ ಮಂಚು ಲಕ್ಷ್ಮೀ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮಂಚು ಲಕ್ಷ್ಮೀಗೆ  ಮಕ್ಕಳು ಎಂದರೇ ತುಂಬಾ ಇಷ್ಟವಂತೆ, ನಾಲ್ಕು ಮಕ್ಕಳನ್ನು ಪಡೆಯಬೇಕು ಎಂದುಕೊಂಡಿದ್ದರಂತೆ. ಆದರೆ ದೇವರು ಒಬ್ಬ ಮಗಳನ್ನು ಮಾತ್ರ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಸದ್ಯ ಲಕ್ಷ್ಮೀ ಮಾಡಿದ ಕಾಮೆಂಟ್ ಗಳು ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

Most Popular

To Top