ಕ್ಲಾರಿಟಿ ಕೊಡದೇ ಇರುವುದೇ ಕ್ಲಾರಿಟಿ ಎಂದು ವಿಚ್ಚೇದನದ ರೂಮರ್ ಬಗ್ಗೆ ರಿಯಾಕ್ಟ್ ಆದ ಕಲರ್ಸ್ ಸ್ವಾತಿ, ವೈರಲ್ ಆದ ಕಾಮೆಂಟ್ಸ್….!

Follow Us :

ಸಿನಿಮಾ ಸೆಲೆಬ್ರೆಟಿಗಳಿಗೆ ಲವ್-ಬ್ರೇಕಪ್, ಮದುವೆ-ವಿಚ್ಚೇದನ ಎಲ್ಲವೂ ಸಾಮಾನ್ಯ ಎಂದು ಹೇಳಬಹುದಾಗಿದೆ. ಅವರು ಎಷ್ಟು ಬೇಗ ಪ್ರೀತಿಗೆ ಬೀಳುತ್ತಾರೋ ಅದೇ ಸ್ಪೀಡ್ ನಲ್ಲಿ ಬ್ರೇಕಪ್ ಸಹ ಮಾಡಿಕೊಳ್ಳುತ್ತಾರೆ. ಕೆಲವು ದಿನಗಳಿಂದ ತೆಲುಗು ನಟಿ ಕಲರ್ಸ್ ತನ್ನ ಪತಿಯಿಂದ ಸ್ವಾತಿ ವಿಚ್ಚೇದನ ಪಡೆದುಕೊಳ್ಳಲಿದ್ದಾರೆ ಎಂಬ ರೂಮರ್ ಜೋರಾಗಿಯೇ ಹರಿದಾಡುತ್ತಿದ್ದು, ಇದೀಗ ಆ ರೂಮರ್‍ ಗಳಿಗೆ ಸ್ವಾತಿ ಆ ರೂಮರ್‍ ಗಳ ಬಗ್ಗೆ ರಿಯಾಕ್ಟ್ ಆಗಿದ್ದು, ಆಕೆ ನೀಡಿದ ಕಾಮೆಂಟ್ ಗಳು ವೈರಲ್ ಆಗುತ್ತಿವೆ.

ತೆಲುಗಿನ ಅನೇಕ ಸಿನೆಮಾಗಳ ಮೂಲಕ ಫೇಂ ಪಡೆದುಕೊಂಡಂತಹ ಕಲರ್ಸ್ ಸ್ವಾತಿ ತನ್ನದೇ ಆದ ಅಭಿಮಾನಿ ಬಳಗವನ್ನು ಪಡೆದುಕೊಂಡಿದ್ದಾರೆ. ಇದೀಗ ಆಕೆ ತನ್ನ ಪತಿಯೊಂದಿಗೆ ವಿಚ್ಚೇದನ ಪಡೆದುಕೊಳ್ಳಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಇದೀಗ ತೆಲುಗು ನಟಿ ಕಲರ್ಸ್ ಸ್ವಾತಿ ಸಹ ಇದೇ ಮಾದರಿಯಲ್ಲಿ ಹಿಂಟ್ ಕೊಡುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ. ಸ್ವಾತಿ ತನ್ನ ಇನ್ಸ್ಟಾ ಖಾತೆಯಿಂದ ಮದುವೆ ಪೊಟೋಗಳನ್ನು ಡಿಲೀಟ್ ಮಾಡಿದ್ದಾರೆ. ಈ ಕಾರಣದಿಂದ ಸ್ವಾತಿ ತನ್ನ ಪತಿಯೊಂದಿಗೆ ಬೇರೆಯಾಗಲಿದ್ದಾರೆ ಎಂಬ ಸುದ್ದಿಗಳು ವೈರಲ್ ಆಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲದೇ ಇದ್ದರೂ ಸಹ ಸೋಷಿಯಲ್ ಮಿಡಿಯಾ ಸೇರಿದಂತೆ ಸಿನಿವಲಯದಲ್ಲಿ ಸಖತ್ ವೈರಲ್ ಆಗಿದೆ. ಇದೀಗ ನಟಿ ಸ್ವಾತಿ ಈ ರೂಮರ್ ಗಳ ಬಗ್ಗೆ ರಿಯಾಕ್ಟ್ ಆಗಿದ್ದಾರೆ.

ನಟಿ ಸ್ವಾತಿ ಇದೀಗ ಮಂತ್ ಆಫ್ ಮಧು ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಈ ಸಿನೆಮಾದಲ್ಲಿ ನವೀನ್ ಚಂದ್ರ ಹಿರೋ ಆಗಿ ನಟಿಸಲಿದ್ದಾರೆ. ಸ್ವಾತಿ ಹಾಗೂ ನವೀನ್ ಚಂದ್ರ ಕಾಂಬಿನೇಷನ್ ನಲ್ಲಿ ತ್ರಿಪುರ ಎಂಬ ಸಿನೆಮಾಲ್ಲಿ ನಟಿಸಿದ್ದರು, ಇದೀಗ ಮಂತ್ ಆಫ್ ಮಧು ಸಿನೆಮಾದ ಮೂಲಕ ಮತ್ತೊಮ್ಮೆ ರಂಜಿಸಲಿದ್ದಾರೆ. ಇದೀಗ ಈ ಸಿನೆಮಾ ಪ್ರಮೋಷನ್ ಕಾರ್ಯಕ್ರಮಗಳೂ ಸಹ ಜೊರಾಗಿ ನಡೆಯುತ್ತಿದೆ. ಪ್ರಮೋಷನ್ ನಿಮಿತ್ತ ನಡೆದ ಪ್ರೆಸ್ ಮೀಟ್ ನಲ್ಲಿ ಮಿಡಿಯಾದವರು ಕೇಳಿದ ಪ್ರಶ್ನೆಗಳಿಗೆ ಆಕೆ ತನ್ನದೇ ಆದ ಶೈಲಿಯಲ್ಲಿ ಉತ್ತರ ಕೊಟ್ಟಿದ್ದಾರೆ. ಇದೇ ವೇಳೆ ವಿಚ್ಚೇದನದ ಬಗ್ಗೆ ಸಹ ಪ್ರಶ್ನೆ ಎದುರಾಗಿದ್ದು, ಆ ಪ್ರಶ್ನೆಗೆ ಆಕೆ ಮೈಂಡ್ ಬ್ಲಾಕ್ ಆಗುವಂತಹ ಉತ್ತರ ನೀಡಿದ್ದಾರೆ.

ವಿಚ್ಚೇದನದ ಬಗ್ಗೆ ಎದುರಾದ ಪ್ರಶ್ನೆಗೆ ಸ್ವಾತಿ ರಿಯಾಕ್ಟ್ ಆಗಿದ್ದಾರೆ. ವಿಚ್ಚೇದನದ ಬಗ್ಗೆ ಸುದ್ದಿಗಳು ಕೇಳಿಬರುತ್ತಿವೆ ಅಲ್ವೆ ಅದಕ್ಕೆ ನಿಮ್ಮ ರಿಯಾಕ್ಷನ್ ಏನು ಎಂದು ಪ್ರಶ್ನೆ ಎದುರಾಗಿದೆ. ಅದಕ್ಕೆ ಸ್ವಾತಿ ಮಾತನಾಡುತಾ ಆ ಪ್ರಶ್ನೆಗೆ ಉತ್ತರ ನೀಡಬೇಕಾದ ಅವಶ್ಯಕತೆ ನನಗಿಲ್ಲ. ಕ್ಲಾರಿಟಿ ಕೊಡದೇ ಇರುವುದೇ ಕ್ಲಾರಿಟಿ ಎಂದು ಉತ್ತರಿಸಿದ್ದಾರೆ. ಕಲರ್ಸ್ ಪ್ರೋಗ್ರಾಂ ಮಾಡುತ್ತಿದ್ದಾಗ ನನ್ನನ್ನು ನಾನು ಹೇಗೆ ಪ್ರಸೆಂಟ್ ಮಾಡಬೇಕು ಎಂಬುದು ತಿಳಿದಿಲ್ಲ. ಒಂದು ವೇಳೆ ಆಗ ಸೋಷಿಯಲ್ ಮಿಡಿಯಾ ಇದಿದ್ದರೇ ನನ್ನು ಪುಟ್ ಬಾಲ್ ಆಡಿಕೊಳ್ಳುತ್ತಿದ್ದರೇನೋ ಎಂದು ಹೇಳಿದ್ದಾರೆ.  ಇದೀಗ ಸ್ವಾತಿ ಮಾಡಿದ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.