ವಿಚ್ಚೇದನಕ್ಕೆ ಮುಂದಾದ್ರಾ ಸಾನಿಯಾ –ಶೋಯಿಬ್, ಶೋಯಿಬ್ ಇನ್ಸ್ಟಾ ಬಯೋ ಸುಳಿವಾ?

Follow Us :

ಖ್ಯಾತ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಸಿನೆಮಾ ಸೆಲೆಬ್ರೆಟಿಗಳಂತೆ ಭಾರಿ ಫ್ಯಾನ್ ಫಾಲೋಯಿಂಗ್ ಹೊಂದಿದ್ದಾರೆ. ಸಾನಿಯಾ ಮಿರ್ಜಾ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯಿಬ್ ಮಲ್ಲಿಕ್ ರನ್ನು ಮದುವೆಯಾಗಿದ್ದರು. ಈ ಹಿಂದೆ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಕೇಳಿಬಂದಿತ್ತು. ಇದೀಗ ಮತ್ತೊಮ್ಮೆ ಅವರು ಬೇರೆಯಾಗುವ ಬಗ್ಗೆ ಸುದ್ದಿ ಕೇಳಿಬರುತ್ತಿದೆ. ಶೀಘ್ರದಲ್ಲೇ ಈ ಜೋಡಿ ಡಿವೋರ್ಸ್ ಪಡೆದುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಸುಮಾರು ದಿನಗಳ ಹಿಂದೆ ಸಾನಿಯಾ ಮಿರ್ಜಾ ಹಾಗೂ ಶೋಯಿನ್ ಮಲ್ಲಿಕ್ ಬೇರೆಯಾಗಲಿದ್ದಾರೆ. ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂದು ಸುದ್ದಿ ಸಂಚಲನ ಸೃಷ್ಟಿಸಿತ್ತು. ಈ ಸುದ್ದಿಯ ಬೆನ್ನಲ್ಲೆ ಸಾನಿಯಾ ಮಿರ್ಜಾರವರ ನಡೆ ಸಹ ಕೆಲವೊಂದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು. ಈ ಬಾರಿ ಶೋಯಿಬ್ ಮಲ್ಲಿಕ್ ಸರದಿ ಎಂದು ಹೇಳಬಹುದಾಗಿದೆ. ಅದಕ್ಕೆ ಕಾರಣ ಶೋಯಿಬ್ ತನ್ನ ಇನ್ಸ್ಟಾ ಖಾತೆಯ ಬಯೋ ಎಂದು ಹೇಳಬಹುದಾಗಿದೆ. ತನ್ನ ಇನ್ಸ್ಟಾಗ್ರಾಂ ಬಯೋದಲ್ಲಿ ಬದಲಾವಣೆ ಮಾಡಿದ್ದು, ಈ ಕಾರಣದಿಂ ಅವರಿಬ್ಬರು ಡಿವೋರ್ಸ್ ಪಡೆದುಕೊಳ್ಳಲಿದ್ದಾರ ಎಂಬ ರೂಮರ್‍ ವೈರಲ್ ಆಗುತ್ತಿದೆ.

ಶೋಯಿಬ್ ಮಲ್ಲಿಕ್ ತಮ್ಮ ಇನ್ಸ್ಟಾ ಖಾತೆಯಲ್ಲಿ ಈ ಹಿಂದೆ ಸೂಪರ್‍ ವುಮೆನ್ ಸಾನಿಯಾ ಮಿರ್ಜಾ ಪತಿ ಎಂದು ಬರೆದುಕೊಂಡಿದ್ದರು. ಇದೀಗ ಅವರು ಅದನ್ನು ತೆಗೆದುಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಬ್ಬರ ನಡುವೆ ಬಿರುಕು ಬಂದಿದೆ. ಶೀಘ್ರದಲ್ಲೇ ಇಬ್ಬರೂ ಬೇರೆಯಾಗಲಿದ್ದಾರೆ ಎಂಬ ರೂಮರ್‍ ವೈರಲ್ ಆಗುತ್ತಿದೆ. ಇನ್ನೂ ಶೋಯಿಬ್ ಹಾಗೂ ಸಾನಿಯಾ ಮದುವೆ ಅನೇಕ ವಿವಾದಗಳಿಗೆ ಕಾರಣವಾಗಿತ್ತು. ಎಲ್ಲವನ್ನೂ ಮೆಟ್ಟಿ ನಿಂತು ಕಳೆದ 2010 ರಲ್ಲಿ ಇಬ್ಬರೂ ಮದುವೆಯಾದರು. ಇನ್ನೂ ಈ ಜೋಡಿಗೆ ಇಜಾನ್ ಮಿರ್ಜಾ ಮಲ್ಲಿಕ್ ಎಂಬ ಮಗನಿದ್ದಾನೆ. ಈಗಾಗಲೇ ಇಬ್ಬರೂ ಬೇರೆ ಬೇರೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ ಎಂದು ಸಹ ಹೇಳಲಾಗುತ್ತಿದೆ.

ಇನ್ನೂ ಕಳೆದ ವರ್ಷ ನವೆಂಬರ್‍ 11 ರಂದು ಸಾನಿಯಾ ಮಿರ್ಜಾ ತಮ್ಮ ಇನ್ಸ್ಟಾ ಖಾತೆಯಲ್ಲಿ ಕಠಿಣ ದಿನಗಳು ಮತ್ತು ಒಡೆದ ಹೃದಯಗಳು ಎಂದು ಪೋಸ್ಟ್ ಹಂಚಿಕೊಂಡಿದ್ದರು. ಅಲ್ಲಿಂದ ಅವರಿಬ್ಬರ ನಡುವೆ ಎಲ್ಲವೂ ಸರಿಯಲ್ಲಿ ಬೇರೆಯಾಗಲಿದ್ದಾರೆ ಎಂಬ ರೂಮರ್‍ ಹರಿದಾಡಲು ಶುರುವಾಯ್ತು. ಇದೀಗ ಶೋಯಿಬ್ ನಡೆಯಿಂದ ಮತ್ತೆ ಅವರ ವಿಚ್ಚೇದನ ರೂಮರ್‍ ವೈರಲ್ ಆಗುತ್ತಿದೆ.