ಗರ್ಭಿಣಿಯಾಗಿದ್ದುಕೊಂಡು ಪಬ್ ನಲ್ಲಿ ಡ್ಯಾನ್ಸ್ ಮಾಡಿದ ಅಮಲಾಪಾಲ್, ಯುವಜನತೆಗೆ ನಿಮ್ಮ ಸಂದೇಶ ಇದೇನಾ ಎಂದ ನೆಟ್ಟಿಗರು…!

Follow Us :

ಮಲಯಾಳಂ ಮೂಲದ ನಟಿ ಅಮಲಾಪಾಲ್ ಡೇರಿಂಗ್ ಅಂಡ್ ಹಾಟ್ ನಟಿಯೆಂದೇ ಖ್ಯಾತಿ ಪಡೆದುಕೊಂಡಿದ್ದಾರೆ. ಕಳೆದ ವರ್ಷವಷ್ಟೆ ಆಕೆ ಜಗತ್ ದೇಸಾಯಿ ಎಂಬಾತನೊಂದಿಗೆ ಎರಡನೇ ವಿವಾಹವಾದರು. ಜೊತೆಗೆ ಕೆಲವು ದಿನಗಳ ಹಿಂದೆಯಷ್ಟೆ ತಾನು ಗರ್ಭಿಣಿಯಾದ ವಿಚಾರವನ್ನು ತಿಳಿಸಿದರು. ಗರ್ಭಿಣಿಯಾದ ಬಳಿಕ ಆಕೆ ತುಂಬಾನೆ ಸಂತೊಷವಾಗಿ ಹಾಟ್ ವಿಡಿಯೋ ಹಾಗೂ ಪೊಟೋಗಳ ಮೂಲಕ ಸಂತಸವನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ಆಕೆ ಗರ್ಭಿಣಿಯಾಗಿದ್ದರೂ, ಪಬ್ ಒಂದರಲ್ಲಿ ಡ್ಯಾನ್ಸ್ ಮಾಡುತ್ತಾ ಕಾಣಿಸಿಕೊಂಡಿದ್ದು, ನಟಿಯ ಈ ನಡೆಗೆ ಅನೇಕರು ಟೀಕೆ ಮಾಡುತ್ತಿದ್ದಾರೆ.

ಕಳೆದ ನವೆಂಬರ್‍ ಮಾಹೆಯಲ್ಲಿ ಅಮಲಾಪಾಲ್ ಹಾಗೂ ಜಗತ್ ದೇಸಾಯಿ ಮದುವೆ ನಡೆಯಿತು. ಕೇರಳದ ಕೊಚ್ಚಿಯಲ್ಲಿ ಈ ಜೋಡಿಯ ಮದುವೆ ನೆರವೇರಿತು. ಅಮಲಾಪಾಲ್ ಈ ಹಿಂದೆ ತಮಿಳು ನಿರ್ದೇಶಕ ಎ.ಎಲ್.ವಿಜಯ್ ಜೊತೆಗೆ ಮದುವೆಯಾಗಿದ್ದರು. 2014 ರಲ್ಲಿ ಅವರಿಬ್ಬರು ವಿಚ್ಚೇದನ ಪಡೆದುಕೊಂಡರು. ಇದಾದ ಬಳಿಕ ಸುಮಾರು ದಿನಗಳ ಕಾಲ ಒಂಟಿಯಾಗಿದ್ದ ಅಮಲಾಪಾಲ್ ತನ್ನ ಬಾಯ್ ಫ್ರೆಂಡ್ ಜಗತ್ ದೇಸಾಯಿ ಎಂಬಾತನನ್ನು ವಿವಾಹವಾದರು. ಮದುವೆಯಾದ ಎರಡು ತಿಂಗಳಲ್ಲೇ ಆಕೆ ಗರ್ಭಿಣಿಯಾದ ಸುದ್ದಿಯನ್ನು ಹೊರಹಾಕಿದ್ದಾರೆ. ಹೊಸ ವರ್ಷದ ಸಮಯದಲ್ಲಿ ಆಕೆ ಗರ್ಭಿಣಿಯಾದ ಸುದ್ದಿಯನ್ನು ಹಂಚಿಕೊಂಡಿದ್ದರು. ಇದೀಗ ಆಕೆ ಹಂಚಿಕೊಂಡ ವಿಡಿಯೋ ಒಂದು ಟೀಕೆಗೆ ಕಾರಣವಾಗುತ್ತಿದೆ.

ನಟಿ ಅಮಲಾಪಾಲ್ ಗರ್ಭಿಣಿಯಾದ ಬಳಿಕ ಸೋಷಿಯಲ್ ಮಿಡಿಯಾದಲ್ಲಿ ಬೇಬಿ ಬಂಪ್ ಪೊಟೋಶೂಟ್ಸ್ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಪಬ್ ಒಂದರಲ್ಲಿ ಆಕೆ ಪತಿ ಜಗತ್ ದೇಸಾಯಿ ಜೊತೆಗೆ ನೃತ್ಯ ಮಾಡಿದ್ದಾರೆ. ಏಳು ತಿಂಗಳ ಗರ್ಭಿಣಿಯಾಗಿರುವ ಅಮಲಾಪಾಲ್ ಈ ಮಾದರಿಯಲ್ಲಿ ನೃತ್ಯ ಮಾಡಿರುವುದು ಅನೇಕರನ್ನು ಶಾಕ್ ಆಗುವಂತೆ ಮಾಡಿದ್ದಾರೆ. ಪತಿಯೊಂದಿಗೆ ಸ್ಟೆಪ್ಸ್ ಹಾಕಿದ್ದನ್ನು ನೋಡಿ ನೆಟ್ಟಿಗರು ಆಂದೋಲನ ವ್ಯಕ್ತಪಡಿಸಿದ್ದಾರೆ. ಯುವಜನತೆಗೆ ನೀವು ಕೊಡುವ ಸಂದೇಶ ಇದೆಯೇ ಎಂದು, ಆರೋಗ್ಯದ ಬಗ್ಗೆ ಶ್ರದ್ದೆ ಇರಲಿ ಎಂದು ಸೂಚನೆ ನೀಡುತ್ತಿದ್ದಾರೆ. ಮತ್ತೆ ಕೆಲವರು ಈ ವಿಡಿಯೋಗೆ ಸಮರ್ಥನೆ ನೀಡುತ್ತಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ವಿವಿಧ ರೀತಿಯ ಕಾಮೆಂಟ್ ಗಳು ಹರಿದುಬರುತ್ತಿವೆ.

ಸದ್ಯ ಅಮಲಾಪಾಲ್ ಅಭಿನಯದ ಆಡು ಜೀವಿತಂ ಎಂಬ ಸಿನೆಮಾದ ಟ್ರೈಲರ್‍ ಕೆಲವು ದಿನಗಳ ಹಿಂದೆಯಷ್ಟೆ ರಿಲೀಸ್ ಆಗಿದೆ. ಈ ಟ್ರೈಲರ್‍ ಗೆ ಒಳ್ಳೆಯ ರೆಸ್ಪಾನ್ಸ್ ಬರುತ್ತಿದೆ. ಈ ಟ್ರೈಲರ್‍ ಲಾಂಚ್ ಈವೆಂಟ್ ನಲ್ಲಿ ಅಮಲಾಪಾಲ್ ನೈಟ್ ವೇರ್‍ ಮಾದರಿಯ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದರು. ಈ ಕಾರಣದಿಂದಲೂ ಆಕೆ ಸುದ್ದಿಯಾಗಿದ್ದರು.