News

ಭಯಬೇಡ ಈ ಭಾರಿ ಒಳ್ಳೆಯ ಮಳೆಯಾಗಲಿದೆಯಂತೆ, ರೈತರಿಗೆ ಖುಷಿಯ ಸುದ್ದಿ ಕೊಟ್ಟ ಹವಾಮಾನ ತಜ್ಞರು…….!

ದೇಶದ ಆರ್ಥಿಕತೆಗೆ ಬೆನ್ನೆಲುಬು ಎಂದು ಕರೆಯಲಾಗುತ್ತದೆ. ಕಳೆದ ವರ್ಷ ಅಂದರೇ 2023ರಲ್ಲಿ ಮಳೆಯ ಕೊರೆಯಿಂದ ರೈತರು ಸೇರಿದಂತೆ ಜನ ಜಾನುವಾರುಗಳು ಸಂಕಷ್ಟ ಎದುರಿಸಿತ್ತು. ಈ ಕಾರಣದಿಂದ ಅನೇಕ ಕಡೆ 2024ರ ಆರಂಭದಲ್ಲಿ ನೀರಿಗಾಗಿ ಪರದಾಡುವಂತಾಗಿದೆ. ಕಾವೇರಿ, ಹೇಮಾ, ತುಂಗಭದ್ರಾ, ಕಬಿನಿ  ಜಲಾಶಯಗಳು ಸೇರಿದಂತೆ ರಾಜ್ಯದ ಅನೇಕ ಕೆರೆಗಳು ಬರಿದಾಗುತ್ತಿದ್ದು, ನೀರಿಗಾಗಿ ಪರದಾಡುವಂತಾಗಿದೆ. ಇದೀಗ ಜನತೆಗೆ ಖುಷಿಯ ಸುದ್ದಿಯೊಂದು ಹವಾಮಾನ ತಜ್ಞರು ನೀಡಿದ್ದಾರೆ ಎನ್ನಲಾಗುತ್ತಿದೆ.

ಸದ್ಯ ಬೆಂಗಳೂರು ಸೇರಿದಂತೆ ಅನೇಕ ಕಡೆ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಕೆ.ಆರ್‍.ಎಸ್ ಹಾಗೂ ಕಬಿನಿ ಜಲಾಶಯಗಳು ಬರಿದಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಜನರು ಸಹ ಮಳೆರಾಯ ಯಾವಾಗ ಕರುಣೆ ತೋರುತ್ತಾನೆ ಎಂದು ಆಕಾಶ ನೋಡುವಂತಾಗಿದೆ. ಇದೀಗ ರಾಜ್ಯದ ಜನಕ್ಕೆ ಹವಾಮಾನ ತಜ್ಞರು ನೀಡಿದ ವರದಿ ಜನರು ಸೇರಿದಂತೆ ರೈತರಿಗೂ ಸಮಾಧಾನ ತರಿಸಿದೆ. ಈ ಭಾರಿ ಕರ್ನಾಟಕದಲ್ಲಿ ವಾಡಿಕೆಯಂತೆ ಉತ್ತಮ ಮಳೆಯಾಗಲಿದೆ. ಜೂನ್ ಮಾಹೆಯ ವೇಳೆಗೆ ರಾಜ್ಯದಲ್ಲಿ ನೀರಿನ ಸಮಸ್ಯೆ ದೂರವಾಗಲಿದೆ ಎಂದು ಹೇಳಲಾಗುತ್ತಿದೆ.

ಸದ್ಯ ಎಲ್ಲರೂ ಮಳೆ ಬಂದರೇ ಸಾಕು ಎಂದು ಜನತೆ ಕಾಯುತ್ತಿದ್ದಾರೆ. ಆದರೆ ಮಳೆಗೆ ಇನ್ನೂ ಎರಡು ಮೂರು ತಿಂಗಳು ಕಾಯಬೇಕಿದೆ. ಇನ್ನೂ ಮಾನ್ಸೂನ್ ಆರಂಭವಾಗಲು ಮೂರು ತಿಂಗಳು ಸಮಯವಿದೆ. ರಾಜ್ಯದಲ್ಲಿ ಮಳೆಯ ಕೊರತೆ ಜೊತೆಗೆ ತಮಿಳುನಾಡು ರಾಜ್ಯಕ್ಕೆ ಕಾವೇರಿ ನೀರು ಬಿಡುವ ಸಮಸ್ಯೆಯೊಂದಿದೆ. ರಾಜ್ಯದ ಜನರ ವಿರೋಧದ ನಡುವೆಯೂ ತಮಿಳುನಾಡಿಗೆ ಕಾವೇರಿ ನೀರು ಹರಿಸಿತ್ತು ಕರ್ನಾಟಕ ಸರ್ಕಾರ. ಈ ಬಾರಿ ಕಾವೇರಿ ನೀರಿನ ಸಮಸ್ಯೆ ಹೆಚ್ಚಾಗಿ ಬರೊಲ್ಲ. ಉತ್ತಮ ಮಳೆಯಾಗಲಿರುವ ಹಿನ್ನೆಲೆಯಲ್ಲಿ ಕಾವೇರಿ ನೀರು ಮೈದುಂಬಿ ಹರಿಯಲಿದೆ ಎಂಬ ಸೂಚನೆ ಸಿಕ್ಕಿದೆ ಎನ್ನಲಾಗಿದೆ. ಹವಾಮಾನ ಮುನ್ಸೂಚನೆಗಳ ಯೂರೋಫಿಯನ್ ಕೇಂದ್ರ ಭಾರತಕ್ಕೆ ದೃಡವಾದ ಮಾನ್ಸೂನ್ ಬರಲಿದೆ. ಮೂರು ತಿಂಗಳಿಗೂ ಹೆಚ್ಚು ಕಾಲ ಮಳೆಯಾಗಲಿದೆ ಎಂದು ಹೇಳಲಾಗಿದೆ.

Most Popular

To Top