Film News

ಪತಿಯನ್ನು ಜೈಲಿಗೆ ಕಳುಹಿಸಿ ತನ್ನ ಬದ್ದ ವೈರಿಯನ್ನು ಮುದ್ದಾಡಿದ ರಾಖಿ ಸಾವಂತ್..!

ಬಾಲಿವುಡ್ ನಲ್ಲಿ ಸದಾ ಸುದ್ದಿಯಾಗುವ ನಟಿಯರಲ್ಲಿ ಹಾಟ್ ಬ್ಯೂಟಿ ರಾಖಿ ಸಾವಂತ್ ಮೊದಲ ಸ್ಥಾನದಲ್ಲಿರುತ್ತಾರೆ. ಈಕೆ ಇತ್ತೀಚಿಗಷ್ಟೆ ಆದಿಲ್ ಖಾನ್ ದುರಾನಿ ಎಂಬ ವ್ಯಕ್ತಿಯೊಂದಿಗೆ ವಿವಾಹವಾದರು. ಇವರ ಕಥೆ ಯಾವುದೇ ಸಿನೆಮಾಗಿಂತಲೂ ಕಡಿಮೆಯಿಲ್ಲ ಎಂದು ಹೇಳಬಹುದಾಗಿದೆ. ಆದಿಲ್ ಜೊತೆಗೆ ಪ್ರೀತಿಯಾಗಿದ್ದು, ಬಳಿಕ ಆದಿಲ್ ರಾಖಿ ಪ್ರೀತಿ ನಿರಾಕರಿಸಿದ್ದು, ಬಳಿಕ ಮದುವೆಯಾಗಿದ್ದು, ಮದುವೆಯಾದ ಬಳಿಕ ಅನೇಕ ಸಮಸ್ಯೆಗಳು ಹೀಗೆ ಈ ಜೋಡಿಯ ಮದುವೆ ಅಕ್ಷರಸಃ ಸಿನೆಮಾ ಸ್ಟೋರಿಯಂತೆ ಇತ್ತು ಎನ್ನಬಹುದಾಗಿದೆ. ಪ್ರೇಮ ಪಯಣ, ಮದುವೆ ಪಾರ್ಟ್-1 ಆದರೆ ಮದುವೆಯಾದ ಬಳಿಕ ಪಾರ್ಟ್-2 ಶುರುವಾಗಿದೆ ಎನ್ನಬಹುದಾಗಿದೆ.

ಕೆಲವು ದಿನಗಳ ಹಿಂದೆಯಷ್ಟೆ ರಾಖಿ ಸಾವಂತ್ ತನ್ನ ಪತಿ ಆದಿಲ್ ಬೇರೊಬ್ಬ ಯುವತಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಆರೋಪ ಮಾಡಿ ಆತನನ್ನು ಜೈಲಿಗೆ ಕಳುಹಿಸಿದ್ದಾರೆ. ಇನ್ನೂ ರಾಖಿ ಪತಿ ಜೈಲಿಗೆ ಕಳುಹಿಸಿ ರಾಖಿ ತನ್ನ ಆಜನ್ಮ ಶತ್ರು ಎಂದು ಹೇಳಲಾಗುತ್ತಿದ್ದ ಶೆರ್ಲಿನ್ ಚೋಪ್ರಾ ರವರನ್ನು ತಬ್ಬಿಕೊಂಡು ಕಣ್ಣಿರಾಕಿದ್ದಾರೆ. ಇನ್ನೂ ಶೆರ್ಲಿನ್ ಚೋಪ್ರಾ ಅಶ್ಲೀಲ ಸಿನೆಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ ಎಂಬ ಆರೋಪವಿದೆ ಅದರ ಜೊತೆಗೆ ಈ ಹಿಂದೆ ನಿರ್ದೇಶಕ ಸಾಜಿದ್ ಖಾನ್ ಎಂಬುವವರ ವಿರುದ್ದ ಮೀಟೂ ಆರೋಪ ಮಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಖಿ ಸಾವಂತ್ ಶೆರ್ಲಿನ್ ವಿರುದ್ದ ಮಾತನಾಡಿದ್ದರು, ಈ ಕಾರಣದಿಂದ ರಾಖಿ ಸಾವಂತ್ ವಿರುದ್ದ ಶೆರ್ಲಿನಾ ಚೋಪ್ರಾ ಮಾನನಷ್ಟ ಮೊಕದ್ದಮೆ ಸಹ ದಾಖಲಿಸಿದ್ದರು. ರಾಖಿ ಸಾವಂತ್ ಬಂಧನ ಸಹ ಆಗಿತ್ತು. ಇದೀಗ ಅವರಿಬ್ಬರೂ ಸ್ನೇಹಿತರಾಗಿದ್ದಾರೆ ಎನ್ನಬಹುದಾಗಿದೆ.

ಇನ್ನೂ ಆದಿಲ್ ಖಾನ್ ರನ್ನು ಜೈಲಿಗೆ ಕಳುಹಿಸಿದ್ದು ಸರಿಯಿದೆ ಎಂದು ರಾಖಿ ಸಾವಂತ್ ರನ್ನು ಶೆರ್ಲಿನ್ ಬೆಂಬಲಿಸಿದ್ದಾರೆ. ಈ ಕಾರಣದಿಂದ ರಾಖಿ ಸಾವಂತ್ ಶೆರ್ಲಿನ್ ರನ್ನು ತಬ್ಬಿಕೊಂಡು ಕಣ್ಣಿರಾಕಿದ್ದಾರೆ. ರಾಖಿ ಶೆರ್ಲಿನ್ ಕೆನ್ನೆಗೆ ಮುತ್ತಿಟ್ಟು ಕೇಕ್ ಸಹ ಕತ್ತರಿಸಿ ಸಂಭ್ರಮಿಸಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಆದಿಲ್ ತನ್ನ ಒಪ್ಪಿಗೆಯಿಲ್ಲದೇ ಹಣವನ್ನು ತೆಗೆದುಕೊಂಡಿದ್ದಾನೆ, ಕೌಟುಂಬಿಕ ಹಿಂಸೆ ನೀಡಿದ್ದಾನೆ, ವರದಕ್ಷಿಣೆ ನೀಡುವಂತೆ ಕಿರುಕುಳ ನೀಡಿದ್ದಾನೆ, ನಗ್ನ ಚಿತ್ರಗಳನ್ನು ಮಾರಿಕೊಂಡಿದ್ದಾನೆ ಎಂದು ರಾಖಿ ಸಾವಂತ್ ಎಫ್.ಐ.ಆರ್‍ ದಾಖಲು ಮಾಡಿರುವುದು ಸರಿಯಾದ ಕೆಲಸ ಎಂದು ಶೆರ್ಲಿನ್ ಹೇಳಿದ್ದಾರೆ. ಇದೇ ಶೆರ್ಲಿನ್ ಕೆಲವು ದಿನಗಳ ಹಿಂದೆ ರಾಖಿ ಸಾವಂತ್ ನಡತೆಗೆ ಆದಿಲ್ ಬಲಿಯಾಗಿದ್ದಾನೆ ಎಂದೂ ಸಹ ಹೇಳಿದ್ದರು. ಇದೀಗ ಶೆರ್ಲಿನ್ ತಮ್ಮ ಮಾತಿನ ವರಸೆ ಬದಲಿಸಿದ್ದಾರೆ.

ರಾಖಿ ಮಾತನಾಡುತ್ತಾ ಶೆರ್ಲಿನ್ ನನಗೆ ಹಳೇಯ ಸ್ನೇಹಿತೆ, ನಮ್ಮ ನಡುವೆ ಕೊಂಚ ಭಿನ್ನಾಭಿಪ್ರಾಯಗಳು ಏರ್ಪಟ್ಟಿತ್ತು. ಆದರೆ ಇದಿಗ ಎಲ್ಲವೂ ಬಗೆಹರಿದಿದೆ. ನನ್ನ ಸಹೋದರಿ ಶೆರ್ಲಿನ್ ಬಳಿ ಕ್ಷಮೆ ಸಹ ಕೋರುತ್ತೇನೆ ಎಂದು ರಾಖಿ ಹೇಳಿದ್ದರು. ಇದಕ್ಕೆ ಶೆರ್ಲಿನ್ ಸಹ ಪ್ರತಿಕ್ರಿಯೆ ನೀಡಿ ನೀನು ಪ್ರೀತಿಸಿದ ವ್ಯಕ್ತಿಯನ್ನು ಮದುವೆಯಾದ ಬಳಿಕವೂ ನೀನು ಸಂತೋಷವಾಗಿಲ್ಲದಿರುವುದನ್ನು ಕಂಡು ಆಶ್ಚರ್ಯವಾಗಿತ್ತು. ಆದರೆ ಆ ನಿನ್ನ ರಾಜಕುಮಾರ್‍ ಜನರನ್ನು ಮೂರ್ಖರನ್ನಾಗಿ ಮಾಡುವಂತಹ ಮಹಾನ್ ವಂಚಕ, ಆತನನ್ನು ಜೈಲಿಗೆ ಕಳುಹಿಸಿರುವುದು ಒಳ್ಳೆಯ ಕೆಲಸ ಎಂದಿದ್ದಾರೆ. ಸದ್ಯ ರಾಖಿ ಸಾವಂತ್ ಸದಾ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಾಗುತ್ತಲೇ ಇರುತ್ತಾರೆ.

Most Popular

To Top