Film News

ನನ್ನ ತಾಯಿಯಂತವರು ಬೇರೆ ಯಾರಿಗೂ ಇರಬಾರದು ಎಂದ ಸೀನಿಯರ್ ನಟಿ ಸಂಗೀತಾ, ವೈರಲ್ ಆದ ಕಾಮೆಂಟ್ಸ್……!

ಬೆಳ್ಳಿಪರದೆಯ ಮೇಲೆ ಸಿನಿಪ್ರೇಕ್ಷಕರನ್ನು ರಂಜಿಸುವಂತಹ ಅನೇಕ ಕಲಾವಿದರ ಜೀವನದಲ್ಲಿ ಅನೇಕ ನೋವುಗಳಿರುತ್ತವೆ. ಕೆಲವೊಂದು ಸಂದರ್ಭಗಳಲ್ಲಿ ಅಂತಹವು ಹೊರಬರುತ್ತವೆ. ಇದೀಗ ತೆಲುಗು ಸಿನಿರಂಗದ ಸೀನಿಯರ್‍ ನಟಿ ಸಂಗೀತಾ ಸಹ ತಮ್ಮ ಜೀವನದಲ್ಲಿನ ನೋವನ್ನು ಹೇಳಿಕೊಂಡಿದ್ದಾರೆ. ಸದ್ಯ ಆಕೆ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದು, ಸ್ಟಾರ್‍ ನಟರ ಸಿನೆಮಾಗಳಲ್ಲಿ ಕ್ಯಾರೆಕ್ಟರ್‍ ಆರ್ಟಿಸ್ಟ್ ಆಗಿ ಕೆರಿಯರ್‍ ಸಾಗಿಸುತ್ತಿದ್ದಾರೆ. ತಾನು ತನ್ನ ತಾಯಿಯಿಂದ ಎಷ್ಟರ ಮಟ್ಟಿಗೆ ನೋವನ್ನು ಅನುಭವಿಸಿದ್ದಾರೆ ಎಂಬ ವಿಚಾರವನ್ನು ಇದೀಗ ಆಕೆ ರಿವೀಲ್ ಮಾಡಿದ್ದಾರೆ.

ಒಂದು ಕಾಲದಲ್ಲಿ ತೆಲುಗು ಸಿನಿರಂಗದಲ್ಲಿ ಬೇಡಿಕೆಯುಳ್ಳ ನಟಿಯರ ಸಾಲಿನಲ್ಲಿ ಸಂಗೀತಾ ಸಹ ಸೇರುತ್ತಾರೆ.  ಇದೀಗ ಆಕೆ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದು, ಒಳ್ಳೆಯ ಸಕ್ಸಸ್ ಸಹ ಕಂಡುಕೊಳ್ಳುತ್ತಿದ್ದಾರೆ. ಇತ್ತೀಚಿಗಷ್ಟೆ ಆಕೆ ವಾರಸುಡು ಸಿನೆಮಾದ ಮೂಲಕ ಒಳ್ಳೆಯ ಸಕ್ಸಸ್ ಕಂಡುಕೊಂಡರು. ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಸಂಗೀತಾ ನಟಿಸಿದ ಬಹುತೇಕ ಸಿನೆಮಾಗಳು ಒಳ್ಳೆಯ ಸಕ್ಸಸ್ ಕಂಡುಕೊಂಡಿದೆ. ಇನ್ನೂ ಆಕೆ ಸಂದರ್ಶನವೊಂದರಲ್ಲಿ ಶಾಕಿಂಗ್ ವಿಚಾರಗಳನ್ನು ಹೊರಹಾಕಿದ್ದಾರೆ. ಅದರಲ್ಲೂ ತನ್ನ ತಾಯಿಯ ಬಗ್ಗೆ ಆಕೆ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದು, ಆಕೆಯ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ.

ಸಂದರ್ಶನದಲ್ಲಿ ಸಂಗೀತಾ ತಮ್ಮ ಮನದಾಳದ ನೋವನ್ನು ಹೊರಹಾಕಿದ್ದಾರೆ. ಈ ಹಿಂದೆ ತನ್ನ ತಾಯಿಯಿಂದ ಅನುಭವಿಸಿದ ನೋವನ್ನು ಹೇಳಿಕೊಂಡಿದ್ದರು. ತನ್ನ ತಾಯಿ ಕಾರಣದಿಂದ ಆಕೆ ತುಂಬಾ ನೋವನ್ನು ಅನುಭವಿಸಿದ್ದಾಗಿ ಆಕೆ  ಹೇಳಿಕೊಂಡಿದ್ದರು. ಇದೀಗ ಅದೇ ವಿಚಾರದ ಬಗ್ಗೆ ಮತ್ತೊಮ್ಮೆ ಕಾಮೆಂಟ್ ಮಾಡಿದ್ದಾರೆ. ತಾನು ತಮ್ಮ ತಾಯಿಯ ಬಗ್ಗೆ ಮಾಡಿದಂತಹ ಕಾಮೆಂಟ್ ಗಳು ಇದೀಗ ಹಾಟ್ ಟಾಪಿಕ್ ಆಗಿದೆ. ತನ್ನ ತಾಯಿಯ ಕಾರಣದಿಂದ ಆಕೆ ಎಷ್ಟರ ಮಟ್ಟಿಗೆ ಟಾರ್ಚರ್‍ ಅನುಭವಿಸಿದ್ದರು ಎಂಬುದನ್ನು ಪರೋಕ್ಷವಾಗಿ ಹೇಳಿಕೊಂಡಿದ್ದಾರೆ.  ತಾನು ಅಂತಹ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ್ದಕ್ಕೆ ನಾಚಿಕೆಯಾಗುತ್ತಿದೆ. 13 ವರ್ಷದಲ್ಲಿ ನನ್ನನ್ನು ಇಂಡಸ್ಟ್ರಿಗೆ ಪರಿಚಯ ಮಾಡಿಸಿದರು. ಹಿರೋಯಿನ್ ಆಗಲು ನನಗೆ ಸ್ವಲ್ಪವೂ ಇಷ್ಟವಾಗಿರಲಿಲ್ಲ. ನಮ್ಮ ಸಹೋದರರ ಮದ್ಯಪಾನಕ್ಕೆ ದಾಸರಾಗಿ ಜೀವನ ನಾಶ ಮಾಡಿಕೊಂಡಿದ್ದರು. ಅವರಿಗೆ ಹಣದ ಅವಶ್ಯಕತೆಯಿದ್ದ ಕಾರಣ ನನ್ನನ್ನು ಹಿರೋಯಿನ್ ಆಗಿ ಮಾಡಿ ಹಣ ಯಂತ್ರದಂತೆ ಬಳಸಿಕೊಂಡರು. ನಾನು ಸಂಪಾದನೆ ಮಾಡಿದಂತಹ ಹಣದಲ್ಲಿ ಅವರು ಎಂಜಾಯ್ ಮಾಡಿದ್ದಾರೆ.

ನಾನು ಸಂಪಾದಿಸಿದ ಹಣದಲ್ಲಿ ಖರೀದಿ ಮಾಡಿದ ಮನೆಯಲ್ಲಿ ಅಮ್ಮ, ಇಬ್ಬರು ಸಹೋದರರು ಇದ್ದಾರೆ. ನಮ್ಮ ಮನೆಯಲ್ಲೇ ಇದ್ದು ಸಮಾಜದಲ್ಲಿ ನನ್ನ ಬಗ್ಗೆ ಕೀಳಾಗಿ ಪ್ರಚಾರ ಮಾಡುತ್ತಿದ್ದಾರೆ ಎಂದು ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಈ ಬಗ್ಗೆ ಆಕೆಯ ತಾಯಿ ಏನು ಪ್ರತಿಕ್ರಿಯೆ ಕೊಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ. ಒಟ್ಟಿನಲ್ಲಿ ನಟಿ ಸಂಗೀತಾ ತಮ್ಮ ತಾಯಿಯ ಬಗ್ಗೆ ನೀಡಿದ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ.

Most Popular

To Top