Film News

ಅರವತ್ತನೇ ವಯಸ್ಸಿನಲ್ಲಿ ಎರಡನೇ ಮದುವೆಯಾದ ಸೀನಿಯರ್ ನಟ ಆಶಿಷ್ ವಿದ್ಯಾರ್ಥಿ, ವೈರಲ್ ಆದ ಪೊಟೋಸ್…..!

ಸಿನಿರಂಗದಲ್ಲಿ ಲವ್, ಡೇಟಿಂಗ್, ಮ್ಯಾರೇಜ್ ಗಳು ನಡೆಯುತ್ತಲೇ ಇರುತ್ತವೆ. ಅದರಲ್ಲೂ ವಯಸ್ಸಿಗೆ ಸಂಬಂಧವಿಲ್ಲದಂತೆ ಡೇಟಿಂಗ್ ಮಾಡುತ್ತಿರುತ್ತಾರೆ. ಈಗಾಗಲೇ ಅನೇಕ ಜೋಡಿಗಳು ಸಹ ಲವ್ ಟ್ರಾಕ್ ನಡೆಸುತ್ತಿದ್ದಾರೆ. ಇದೀಗ ಸೀನಿಯರ್‍ ನಟ ಆಶಿಷ್ ವಿದ್ಯಾರ್ಥಿ ಎಲ್ಲರಿಗೂ ಶಾಕ್ ನೀಡಿದ್ದಾರೆ. ತಮ್ಮ 60ನೇ ವಯಸ್ಸಿನಲ್ಲಿ ಮದುವೆಯಾಗುವ ಮೂಲಕ ಎಲ್ಲರನ್ನೂ ಶಾಕ್ ಗೆ ಗುರಿ ಮಾಡಿದ್ದಾರೆ. 60ರ ವಯಸ್ಸಿನಲ್ಲಿ ಮದುವೆಯಾಗಿ ಎಲ್ಲರನ್ನೂ ಆಶ್ಚರ್ಯ ಪಡಿಸಿದ್ದಾರೆ. ಇದೀಗ ಸೋಷಿಯಲ್ ಮಿಡಿಯಾದಲ್ಲಿ ಈ ಪೊಟೋಗಳು ಸಹ ವೈರಲ್ ಆಗುತ್ತಿವೆ.

ಸೌತ್ ಸಿನಿರಂಗದಲ್ಲಿ ವಿಭಿನ್ನ ಪಾತ್ರಗಳನ್ನು ಪೋಷಣೆ ಮಾಡುವ ಮೂಲಕ ಒಳ್ಳೆಯ ಫೇಂ ಪಡೆದುಕೊಂಡ ನಟ ಆಶೀಶ್ ವಿದ್ಯಾರ್ಥಿ ತೆಲುಗು, ತಮಿಳು, ಹಿಂದಿ ಸಿನೆಮಾಗಳಲ್ಲಿ ನಟಿಸಿ ಒಳ್ಳೆಯ ಸಕ್ಸಸ್ ಕಂಡುಕೊಂಡಿದ್ದಾರೆ. ಗುಡುಂಬಾ ಶಂಕರ್‍, ಪೊಕಿರಿ, ಅದುರ್ಸ್, ಚಿರುತಾ, ನಾಯಕ್, ಸೇರಿದಂತೆ ಅನೇಕ ಸೂಪರ್‍ ಹಿಟ್ ಸಿನೆಮಾಗಳಲ್ಲಿ ನಟಿಸಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಹ ಪಡೆದುಕೊಂಡಿದ್ದಾರೆ. ಇನ್ನೂ ಕೊನೆಯದಾಗಿ ಆತ ರೈಟರ್‍ ಪದ್ಮಭೂಷಣ್ ಎಂಬ ಸಿನೆಮಾದಲ್ಲೂ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಹಿಂದೆ ಆಶಿಶ್ ರೋಜೋಷಿ ಭಾರಾ ಎಂಬಾಕೆಯೊಂದಿಗೆ ಮದುವೆಯಾಗಿದ್ದರು. ಅವರಿಬ್ಬರಿಗೆ ಓರ್ವ ಮಗ ಸಹ ಇದ್ದಾನೆ. ಆದರೆ ಇಬ್ಬರ ನಡುವೆ ಹೊಂದಾಣಿಕೆಯಾಗದ ಕಾರಣ ಬೇರೆಯಾದರು.

ಇದೀಗ ಆಶೀಶ್ ಫ್ಯಾಷನ್ ಎಂಟ್ರಪ್ರೈನರ್‍ ರೂಪಾಲಿ ಎಂಬ ಮಹಿಳೆಯೊಂದಿಗೆ ಸಪ್ತಪದಿ ತುಳಿದಿದ್ದಾರೆ. ಸುಮಾರು ದಿನಗಳಿಂದ ರೂಪಾಲಿಯೊಂದಿಗೆ ಡೇಟಿಂಗ್ ನಲ್ಲಿದ್ದರಂತೆ. ಆಕೆ ಗೌಹಾಟಿ ಮೂಲದ ಮಹಿಳೆಯಾಗಿದ್ದು, ಕೋಲ್ಕತ್ತಾ ದಲ್ಲಿ ಫ್ಯಾಷನ್ ಸ್ಟೋರ್ಸ್ ನಡೆಸುತ್ತಿದ್ದಾರೆ. ಆಶೀಶ್ ಹಾಗೂ ರೂಪಾಲಿ ಇದೀಗ ಮದುವೆಯಾಗಿದ್ದು, ಅವರ ಕುಟುಂಬಸ್ಥರು ಹಾಗೂ ಸ್ನೇಹಿತರ ಸಮಕ್ಷಮದಲ್ಲಿ ರಿಜಿಸ್ಟರ್‍ ಮ್ಯಾರೇಜ್ ಮಾಡಿಕೊಂಡಿದ್ದಾರೆ. ಇಬ್ಬರೂ ಸಂಪ್ರದಾಯಬದ್ದವಾದ ಉಡುಗೆಯಲ್ಲಿ ಮಿಂಚಿದ್ದಾರೆ. ಜೊತೆಗೆ ನಿನ್ನೆ ಸಂಜೆ ಸಹ ಸ್ನೇಹಿತರು ಹಾಗೂ ಕುಟುಂಬಸ್ಥರಿಗೆ ಪಾರ್ಟಿ ಸಹ ಕೊಟ್ಟಿದ್ದಾರೆ.

ಇನ್ನೂ ಆಶೀಶ್ ವಿದ್ಯಾರ್ಥಿ ಎರಡನೇ ಮದುವೆಯಾದ ಬಗ್ಗೆ ಅನೇಕ ನೆಗೆಟೀವ್ ಕಾಮೆಂಟ್ ಗಳು ಕೇಳಿಬರುತ್ತಿವೆ. ಇನ್ನೂ ಅವರಿಬ್ಬರ ನಡುವೆ ಹೇಗೆ ಪ್ರೀತಿ ಹುಟ್ಟಿತ್ತು, ಎಷ್ಟು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದಾರೆ ಎಂಬ ವಿಚಾರಗಳ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ಚರ್ಚೆಗಳೂ ಸಹ ಶುರುವಾಗುತ್ತಿವೆ.

Most Popular

To Top