Film News

ಆ ಅಶ್ಲೀಲ ಪೊಟೋಗಳು, ವಿಡಿಯೋಗಳು ನನ್ನದ್ದಲ್ಲ, ಸೀನಿಯರ್ ನಟಿ ಜಯವಾಣಿ ರಿಯಾಕ್ಷನ್….!

ಸಿನಿರಂಗದ ಕಲಾವಿದರು ಆಗಾಗ ಕೆಲವೊಂದು ಸಮಸ್ಯೆಗಳಿಗೆ ಗುರಿಯಾಗುತ್ತಿರುತ್ತಾರೆ. ಅವರ ಹೆಸರಿನಲ್ಲಿ, ಅಥವಾ ಮಾರ್ಪಿಂಗ್ ಮಾಡಿರುವ ಪೊಟೋಗಳು, ವಿಡಿಯೋಗಳು ಆಗಾಗ ಹರಿದಾಡುತ್ತಿರುತ್ತವೆ. ಇದೀಗ ತೆಲುಗು ಸೀನಿಯರ್‍ ಕಲಾವಿದೆ ಜಯವಾಣಿಗೂ ಸಹ ಅಂತಹ ಅನುಭವವೊಂದು ಆಗಿದೆ. ಆಕೆಯದ್ದೆ ಎನ್ನಲಾದ ಕೆಲವೊಂದು ನ್ಯೂಡ್ ಪೊಟೋಗಳು, ವಿಡಿಯೋಗಳು ಸೊಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಆಕೆ ಕ್ಲಾರಿಟಿ ಕೊಟ್ಟಿದ್ದಾರೆ. ಆಕೆಯ ಹೇಳಿಕೆಗಳು ವೈರಲ್ ಆಗಿದೆ.

ಸೌತ್ ಸಿನಿರಂಗ ಅನೇಕ ಸಿನೆಮಾಗಳಲ್ಲಿ ಜಯವಾಣಿ ಕ್ಯಾರೆಕ್ಟರ್‍ ಆರ್ಟಿಸ್ಟ್ ಆಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಆಕೆ ಮಾಸ್ ಮಹಾರಾಜ ರವಿತೇಜ ರವರ ವಿಕ್ರಮಾರ್ಕುಡು ಎಂಬ ಸಿನೆಮಾದಲ್ಲಿ ಆಕೆ ತುಂಬಾ ಅದ್ಬುತವಾಗಿ ನಟಿಸಿದ್ದರು. ಈ ಸಿನೆಮಾದ ಮೂಲಕ ಮತಷ್ಟು ಫೇಂ ಪಡೆದುಕೊಂಡರು. ಆಂಧ್ರದ ಗುಂಟೂರು ಮೂಲದ ನಟಿ ಜಯವಾಣಿ ಅನೇಕ ಸಿನೆಮಾಗಳಲ್ಲಿ ನಟಿಸಿ ಫೇಂ ಪಡೆದುಕೊಂಡರು. ಆದರೆ ಇತ್ತೀಚಿಗೆ ಆಕೆ ಸಿನೆಮಾಗಳಿಂದ ದೂರವೇ ಉಳಿದಿದ್ದಾರೆ. ಇದೀಗ ಆಕೆ ಶೂರ್ಪಣಖ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ ಎಂದು ಸುದ್ದಿಯೊಂದು ವೈರಲ್ ಆಗಿದ್ದು, ಈ ಸಿನೆಮಾದಲ್ಲಿನ ದೃಶ್ಯಗಳು ಎಂದು ಕೆಲವೊಂದು ನ್ಯೂಡ್ ಪೊಟೋಗಳು, ವಿಡಿಯೋಗಳು ಸಹ ವೈರಲ್ ಆಗಿತ್ತು. ಅದರಲ್ಲೂ ಅವು ಜಯವಾಣಿ ಅಧಿಕೃತ ಟ್ವಿಟರ್‍ ಅಕೌಂಟ್ ನಿಂದ ಪೋಸ್ಟ್ ಆಗಿತ್ತು.

ಇನ್ನೂ ಆಕೆಯ ಅಧಿಕೃತ ಖಾತೆಯಿಂದ ಈ ವಿಡಿಯೋ, ಪೊಟೋಗಳು ವೈರಲ್ ಆದ ಹಿನ್ನೆಲೆಯಲ್ಲಿ ಅನೇಕರು ಶಾಕ್ ಆಗಿದ್ದರು. ಈ ವಿಚಾರ ವೈರಲ್ ಆಗುತ್ತಿದ್ದಂತೆ ಜಯವಾಣಿ ಈ ಬಗ್ಗೆ ರಿಯಾಕ್ಟ್ ಆಗಿದ್ದಾರೆ. ಆ ಪೊಟೋಗಳು ಹಾಗೂ ವಿಡಿಯೋಗಳು ನನ್ನದಲ್ಲ ಎಂದು ಫೈರ್‍ ಆಗಿದ್ದಾರೆ. ಅಷ್ಟಕ್ಕೂ ನನಗೆ ಟ್ವಿಟರ್‍ ಖಾತೆ ಸಹ ಇಲ್ಲ. ನನ್ನ ಹೆಸರಿನಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಈ ರೀತಿಯ ಮಾಡಿದ್ದಾರೆ. ಇನ್ನೂ ನಾನು ಶೂರ್ಪನಖಿ ಸಿರೀಸ್ ನಲ್ಲಿ ನಟಿಸುತ್ತಿಲ್ಲ. ಎಲ್ಲವೂ ಸುಳ್ಳು. ಯಾರೂ ನಂಬಬೇಡಿ ಎಂದು ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ಭಾಗಿಯಾಗಿದ್ದ ಜಯವಾಣಿ ಸ್ಪಷ್ಟನೆ ಕೊಟ್ಟಿದ್ದಾರೆ.

ಇನ್ನು ಮುಂದೆ ಅಂತಹ ಪೋಸ್ಟ್ ಗಳನ್ನು ಹಾಕುವುದನ್ನು ನಿಲ್ಲಿಸದೇ ಇದ್ದರೇ ಪೊಲೀಸರಿಗೆ ದೂರು ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ಸಹ ನೀಡಿದ್ದಾರೆ. ಇನ್ನೂ ನನ್ನ ವಿರುದ್ದ ಅಂತಹ ಸುಳ್ಳು ಸುದ್ದಿಗಳನ್ನು ಹರಿಬಿಡುತ್ತಿರುವವರ ಮೇಲೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಹೇಳಿದ್ದಾರೆ. ಇನ್ನೂ ಜಯವಾಣಿ ಯವರದ್ದು ಎಂದು ಹೇಳಲಾಗುತ್ತಿರುವ ಅಶ್ಲೀಲ ಪೊಟೋ ಹಾಗೂ ವಿಡಿಯೋಗಳು ತನ್ನದಲ್ಲ ಎಂದು ಆಕೆ ಸ್ಪಷ್ಟನೆ ಕೊಟ್ಟಿದ್ದಾರೆ.

Most Popular

To Top