ಮತ್ತೊಮ್ಮೆ ಕೀರ್ತಿ ಸುರೇಶ್ ಡೇಟಿಂಗ್ ರೂಮರ್, ಫೈರ್ ಆದ ಫ್ಯಾನ್ಸ್, ಕೀರ್ತಿ ಜೊತೆಗೆ ಕ್ಲೋಜ್ ಆಗಿದ್ದ ವ್ಯಕ್ತಿ ಯಾರು?

ಸದ್ಯ ಸೌತ್ ಸಿನಿರಂಗದ ಸ್ಟಾರ್‍ ನಟಿ ಕೀರ್ತಿ ಸುರೇಶ್ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಿಂದ ಪುಲ್ ಬ್ಯುಸಿಯಾಗಿದ್ದಾರೆ. ನಟಿ ಕೀರ್ತಿ ಸಕ್ಸಸ್ ಪುಲ್ ಆಗಿ ಕೆರಿಯರ್‍ ಸಾಗಿಸುತ್ತಿದ್ದು, ಕೆಲವು ದಿನಗಳಿಂದ ಕೀರ್ತಿ ಸುರೇಶ್ ರವರ ಮದುವೆಯ ಬಗ್ಗೆ ಜೋರಾದ ಚರ್ಚೆಗಳು ನಡೆಯುತ್ತಿವೆ. ಪ್ರೀತಿ, ಮದುವೆ ವಿಚಾರಗಳ ಕಾರಣದಿಂದ ಸದಾ ಸುದ್ದಿಯಾಗುತ್ತಲೇ ಇದ್ದಾರೆ. ಇದೀಗ ಆಕೆ ವ್ಯಕ್ತಿಯೊಬ್ಬರೊಂದಿಗೆ ತುಂಬಾ ಕ್ಲೋಜ್ ಆಗಿ ಕಾಣಿಸಿಕೊಂಡಿದ್ದು, ಆ ವ್ಯಕ್ತಿಯನ್ನು ಕೀರ್ತಿ ಸುರೇಶ್ ಲವ್ ಮಾಡುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. ಇನ್ನೂ ಈ ರೂಮರ್‍ ಕೇಳಿ ಕೀರ್ತಿ ಸುರೇಶ್ ಫ್ಯಾನ್ಸ್ ಸಹ ಫೈರ್‍ ಆಗಿದ್ದಾರೆ.

ಸ್ಟಾರ್‍ ನಟಿ ಕೀರ್ತಿ ಸುರೇಶ್ ಸೌತ್ ಸಿನಿರಂಗದಲ್ಲಿ ದೊಡ್ಡ ಅಭಿಮಾನಿ ಬಳಗವನ್ನು ಪಡೆದುಕೊಂಡಿದ್ದಾರೆ. ಮಹಾನಟಿ ಸಿನೆಮಾದ ಮೂಲಕ ಆಕೆ ರಾಷ್ಟ್ರೀಯ ಅವಾರ್ಡ್ ಸಹ ದೊರೆತಿದೆ. ಬಳಿಕ ಆಕೆ ಕೊಂಚ ಫೇಡ್ ಔಟ್ ಆದರೂ ಸರ್ಕಾರಿವಾರಿ ಪಾಠ ಸಿನೆಮಾದ ಮೂಲಕ ಮತ್ತೆ ಸಕ್ಸಸ್ ಕಂಡುಕೊಂಡರು. ಈ ಸಿನೆಮಾದ ಬಳಿಕ ಆಕೆಗೆ ಒಳ್ಳೆಯ ಬ್ರೇಕ್ ಸಿಕ್ಕಿದೆ ಎಂದು ಹೇಳಬಹುದು ಈ ಸಿನೆಮಾದ ಬಳಿಕ ತೆರೆಕಂಡ ಆಕೆಯ ಎಲ್ಲಾ ಸಿನೆಮಾಗಳು ಒಳ್ಳೆಯ ಸಕ್ಸಸ್ ಕಂಡುಕೊಂಡಿದೆ. ಇನ್ನೂ ಸಿನೆಮಾಗಳ ಜೊತೆಗೆ ಆಕೆ ಇತ್ತೀಚಿಗೆ ವೈಯುಕ್ತಿಕ ವಿಚಾರಗಳಿಂದಲೂ ಸಹ ಸುದ್ದಿಯಾಗುತ್ತಿದ್ದಾರೆ. ಆಕೆಯ ಮದುವೆ ಹಾಗೂ ಬಾಯ್ ಫ್ರೆಂಡ್ ವಿಚಾರಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಚರ್ಚೆ ಆಗುತ್ತಿದೆ. ಇದೀಗ ಕೀರ್ತಿ ಸುರೇಶ್ ಒಬ್ಬ ವ್ಯಕ್ತಿಯ ಜೊತೆಗಿರುವ ಪೊಟೋ ಒಂದನ್ನು ಹಂಚಿಕೊಂಡಿದ್ದು, ಪೊಟೋ ಸಖತ್ ವೈರಲ್ ಆಗಿದೆ.

ಕೀರ್ತಿ ಸುರೇಶ್ ಓರ್ವ ವ್ಯಕ್ತಿಯೊಂದಿಗೆ ತುಂಬಾ ಕ್ಲೋಜ್ ಆಗಿರುವ ಪೊಟೋ ಒಂದನ್ನು ಹಂಚಿಕೊಂಡಿದ್ದರು. ಈ ಪೊಟೋ ಕಾರಣದಿಂದ ಆ ವ್ಯಕ್ತಿ ಯಾರು. ಕೀರ್ತಿ ಲವ್ ಮಾಡುತ್ತಿರುವ ಹುಡುಗ ಅವರೇನಾ ಎಂಬೆಲ್ಲಾ ಅನುಮಾನಗಳು ಶುರುವಾಗಿದೆ. ಅನೇಕರು ಆತ ಕೀರ್ತಿ ಸುರೇಶ್ ರವರ ಡ್ರೈವರ್‍, ಆತನೊಂದಿಗೆ ಕೀರ್ತಿ ಸುರೇಶ್ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ರೂಮರ್‍ ಗಳು ಸಹ ಹರಿಬಿಟ್ಟಿದ್ದಾರೆ. ಇನ್ನೂ ಈ ರೂಮರ್‍ ಗಳು ಜೋರಾಗುತ್ತಿದ್ದಂತೆ. ಕೀರ್ತಿ ಸುರೇಶ್ ಅಭಿಮಾನಿಗಳು ಫೈರ್‍ ಆಗಿದ್ದಾರೆ. ಅಷ್ಟಕ್ಕೂ ಸತ್ಯಾಂಶ ತಿಳಿದುಕೊಳ್ಳದೇ, ಅಂತಹ ರೂಮರ್‍ ಗಳನ್ನು ಏತಕ್ಕಾಗಿ ಹರಿಬಿಡುತ್ತಾರೆ. ಬುದ್ದಿಯಿಲ್ಲದ ವ್ಯಕ್ತಿಗಳೇ ಅಂತಹ ರೂಮರ್‍ ಗಳನ್ನು ಹರಿಬಿಡುತ್ತಾರೆ ಎಂದು ಫೈರ್‍ ಆಗಿದ್ದಾರೆ. ಇನ್ನೂ ಆ ಪೊಟೋದಲ್ಲಿರುವ ವ್ಯಕ್ತಿ ಸಿನೆಮಾ ಟೆಕ್ನಿಷಿಯನ್. ಭೋಳಾಶಂಕರ್‍ ಸಿನೆಮಾ ಸೆಟ್ ನಲ್ಲಿ ಕೀರ್ತಿ ಸುರೇಶ್ ಆತನೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನೂ ಈ ಹಿಂದೆ ಸಹ ಕೀರ್ತಿ ಸುರೇಶ್ ತನ್ನ ಸ್ನೇಹಿತನನ್ನು ಮದುವೆಯಾಗಲಿದ್ದಾರೆ ಎಂಬ ರೂಮರ್‍ ಸಹ ಕೇಳಿಬಂದಿತ್ತು. ಆದರೆ ಕೀರ್ತಿ ಸುರೇಶ್ ತಾಯಿ ಮೇನಕಾ ಅವೆಲ್ಲವನ್ನೂ ಖಂಡಿಸಿದರು. ಸದ್ಯ ಕೀರ್ತಿ ಸುರೇಶ್ ಸಿಂಗಲ್ ಆಗಿಯೇ ಇದ್ದಾರೆ. ಯಾರೊಂದಿಗೆ ರಿಲೇಷನ್ ಶಿಪ್ ನಲ್ಲಿ ಇಲ್ಲ. ಕೀರ್ತಿ ಸುರೇಶ್ ಗೆ ಮದುವೆ ಫಿಕ್ಸ್ ಆದರೇ ನಾವೇ ಹೇಳುತ್ತೇವೆ ಎಂದು ಆಕೆ ಕ್ಲಾರಿಟಿ ಕೊಟ್ಟಿದ್ದರು. ಇನ್ನೂ ಕೀರ್ತಿ ಸುರೇಶ್ ಕೊನೆಯದಾಗಿ ದಸರಾ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು.