Film News

ಪ್ರಭಾಸ್ ಹಾಗೂ ಮಹೇಶ್ ಬಾಬು ನನಗಿಂತ ದೊಡ್ಡ ಹಿರೋಗಳು, ಸಿನೆಮಾ ಹಾಗೂ ಪಾಲಿಟಿಕ್ಸ್ ಒಂದಲ್ಲ, ಶಾಕಿಂಗ್ ಕಾಮೆಂಟ್ಸ್ ಮಾಡಿದ ಪವನ್ ಕಲ್ಯಾಣ್……!

ತೆಲುಗು ಸಿನಿರಂಗದ ಸ್ಟಾರ್‍ ನಟ ಪವನ್ ಕಲ್ಯಾಣ್ ಸದ್ಯ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಜೊತೆಗೆ ರಾಜಕೀಯವಾಗಿಯೂ ಸಹ ಸಕ್ರಿಯರಾಗಿದ್ದಾರೆ. ಸದ್ಯ ಪೊಲಿಟಿಕಲ್ ಟೂರ್‍ ನಲ್ಲಿರುವಂತಹ ಪವನ್ ಕಲ್ಯಾಣ್ ವಾರಾಹಿ ವಿಜಯ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಪವನ್ ಕಲ್ಯಾಣ್ ರವರು ಸಿನೆಮಾಗಳ ವಿಚಾರವನ್ನು ಸಹ ಮಾತನಾಡಿದ್ದಾರೆ. ತೆಲುಗು ಸಿನಿರಂಗದ ಸ್ಟಾರ್‍ ನಟರ ಬಗ್ಗೆ ಹಾಗೂ ಸಿನೆಮಾಗಳು ಪಾಲಿಟಿಕ್ಸ್ ಬಗ್ಗೆ ಕೆಲವೊಂದು ಇಂಟ್ರಸ್ಟಿಂಗ್ ಕಾಮೆಂಟ್ ಗಳನ್ನು ಮಾಡಿದ್ದಾರೆ.

ಸ್ಟಾರ್‍ ನಟ ಪವರ್‍ ಸ್ಟಾರ್‍ ಪವನ್ ಕಲ್ಯಾಣ್ ಇದೀಗ ಜನಸೇನಾ ಪಾರ್ಟಿಯ ಮುಖ್ಯಸ್ಥರಾಗಿ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಆಂಧ್ರಪ್ರದೇಶದ ರಾಜಕೀಯದಲ್ಲಿ ಸಂಚಲನ ಸೃಷ್ಟಿ ಮಾಡುತ್ತಿದ್ದಾರೆ. ಅವರು ಒಪ್ಪಿಕೊಂಡ ಸಿನೆಮಾಗಳ ಶೂಟಿಂಗ್ ಬಹುತೇಕ ಪೂರ್ಣಗೊಳಿಸಿ ಇದೀಗ ವರಾಹಿ ಯಾತ್ರೆಯಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೂ ಯಾತ್ರೆಯ ವೇಳೆ ಪವನ್ ಕಲ್ಯಾಣ್ ಕೆಲವೊಂದು ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಮುಮ್ಮಡಿವರಂ ಎಂಬ ಪ್ರದೇಶದಲ್ಲಿ ನಡೆದ ಸಭೆಯಲ್ಲಿ ಪವನ್ ಕಲ್ಯಾಣ್ ಮಾತನಾಡುತ್ತಾ, ನನಗೆ ಕೆಲವು ಅಭಿಮಾನಿಗಳು ಹೇಳಿದ್ದರು, ಎನ್.ಟಿ.ಆರ್‍ ಅಭಿಮಾನಿಗಳು ಹಾಗೂ ನನ್ನ ಅಭಿಮಾನಿಗಳು ಗಲಾಟೆ ಮಾಡಿಕೊಳ್ಳುತ್ತಿರುತ್ತಾರೆ. ಆದರೆ ಸಿನೆಮಾ ಎಂಬುದು ಕೇವಲ ಮನರಂಜನೆ ಅಷ್ಟೆ. ಆದರೆ ಸಿನೆಮಾವನ್ನು ರಾಜಕೀಯ ಮಾಡಬಾರದು. ನಾವೆಲ್ಲರೂ ಚೆನ್ನಾಗಿರುತ್ತೇವೆ. ಆದರೆ ನೀವು ಯಾಕೆ ಗಲಾಟೆ ಮಾಡಿಕೊಳ್ಳುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನೂ ಜೂನಿಯರ್‍ ಎನ್.ಟಿ.ಆರ್‍,  ಮಹೇಶ್ ಬಾಬು, ಅಲ್ಲು ಅರ್ಜುನ್, ರಾಮ್ ಚರಣ್, ಮೆಗಾಸ್ಟಾರ್‍ ಚಿರಂಜೀವಿ, ಬಾಲಕೃಷ್ಣ ರವರುಗಳು ನನಗೆ ತುಂಬಾನೆ ಇಷ್ಟ. ನಾವು ಭೇಟಿಯಾದಾಗ ತುಂಬಾ ಚೆನ್ನಾಗಿರುತ್ತೇವೆ. ಆದರೆ ನಿಮ್ಮ ಸಿನೆಮಾಗಳ ಮೇಲಿನ ಅಕ್ಕರೆ ರಾಜಕೀಯದ ಮೇಲೆ ತೋರಿಸಬೇಡಿ. ಸಿನೆಮಾ ಬೇರೆ, ರಾಜಕೀಯ ಬೇರೆ, ಮಹೇಶ್ ಬಾಬು, ಪ್ರಭಾಸ್ ನನಗಿಂತ ದೊಡ್ಡ ಹಿರೋಗಳು, ನನಗಿಂತ ಕಡಿಮೆ ಸಂಭಾವನೆ ಪಡೆದುಕೊಳ್ಳುವ ಜೂನಿಯರ್‍ ಎನ್.ಟಿಆರ್‍ ಹಾಗೂ ರಾಮ್ ಚರಣ್ ಗ್ಲೋಬಲ್ ಸ್ಟಾರ್‍ ಗಳಾಗಿದ್ದಾರೆ. ಆದರೆ ನನಗೆ ಪ್ರಪಂಚ ಅಷ್ಟೊಂದು ತಿಳಿಯದೇ ಇರಬಹುದು. ಆದರೆ ನನಗೆ ಈಗೋ ಇಲ್ಲ. ಎಲ್ಲರೂ ಸಂತೋಷದಿಂದ ಇರಬೇಕು ಎಂದು ಕೋರುವ ವ್ಯಕ್ತಿ ನಾನು ಎಂದಿದ್ದಾರೆ.

ಅಷ್ಟೇಅಲ್ಲದೇ ಸಿನೆಮಾ ಬೇರೆ, ರಾಜಕೀಯ ಬೇರೆ. ಸಿನೆಮಾಗಳನ್ನು ಇಷ್ಟಪಟ್ಟೆ ನೀವು ಯಾವ ಹಿರೋ ಆದರೂ ಇಷ್ಟಪಡಿ. ಆದರೆ ರಾಜಕೀಯ ವಿಚಾರಕ್ಕೆ ಬಂದರೇ ನನ್ನ ಮಾತು ಒಂದು ಬಾರಿ ಕೇಳಿ. ಬಡ, ದಲಿತ ಕುಟುಂಬಗಳು ಚೆನ್ನಾಗಿರಬೇಕೆಂಬ ಉದ್ದೇಶವಿರುವ ವ್ಯಕ್ತಿ ನಾನು. ನೀರಿಲ್ಲದವರಿಗೆ ಅವರ ದಾಹ ತೀರಿಸುವ ಬಲ ಇರುವ ವ್ಯಕ್ತಿ ನಾನು. ಅದಕ್ಕಾಗಿ ನಾನು ನಿಮ್ಮಲ್ಲಿ ಕೇಳುತ್ತಿದ್ದೇನೆ. ಹಿರೋಗಳ ಫ್ಯಾನ್ಸ್ ಎಂದು ಗಲಾಟೆ ಮಾಡಿಕೊಳ್ಳಬೇಡಿ. ನಾವೆಲ್ಲರೂ ಪವನ್ ಕಲ್ಯಾಣ್ ರವರಿಗೆ ಬೆಂಬಲವಾಗಿ ಇರಿ. ಸಮಾಜವನ್ನು ಬದಲಿಸಲು ಹೋರಾಡುವಂತಹ ವ್ಯಕ್ತ ಬೇಕು ಎಂದು ಎಲ್ಲರೂ ಒಗ್ಗಟ್ಟಿನಿಂದ ನನಗೆ ಬೆಂಬಲ ನೀಡಿ ಎಂದಿದ್ದಾರೆ.

Most Popular

To Top