Film News

ನಾನು ಸದಾ ನ್ಯಾಯದ ಕಡೆ, ನನ್ನ ಬೆಂಬಲ ವಿಷ್ಣುಗೆ ಎಂದ ಮೋಹನ್ ಬಾಬು, ವೈರಲ್ ಆದ ಹಳೇಯ ವಿಡಿಯೋ….!

ಕೆಲವು ದಿನಗಳಿಂದ ಮಂಚು ಮನೋಜ್ ಹಾಗೂ ಮಂಚು ವಿಷ್ಣು ನಡುವೆ ಕೋಲ್ಡ್ ವಾರ್‍ ನಡೆಯುತ್ತಿದೆ. ಮಂಚು ಮನೋಜ್ ಹಾಗೂ ವಿಷ್ಣು ನಡುವೆ ನಡೆದ ಗಲಾಟೆಯೊಂದರ ವಿಡಿಯೋ ಸಹ ವೈರಲ್ ಆಗಿತ್ತು. ಬಳಿಕ ಅವರಿಬ್ಬರ ನಡುವೆ ಸಂಧಾನ ಮಾಡಲು ಸಹ ಮೋಹನ್ ಬಾಬು ಹಾಗೂ ಮಂಚು ಲಕ್ಷ್ಮೀ  ಪ್ರಯತ್ನಗಳನ್ನು ಮಾಡಿದ್ದರು. ಇನ್ನೂ ಮೋಹನ್ ಬಾಬು ರವರು ಯಾರಿಗೆ ಸಪೋರ್ಟ್ ಮಾಡುತ್ತಾರೆ ಎಂಬ ಚರ್ಚೆಗಳು ಶುರುವಾಗಿತ್ತು. ಇದೀಗ ಮೋಹನ್ ಬಾಬು ರವರ ಹಳೇಯ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ಅದರಲ್ಲಿ ಮೋಹನ್ ಬಾಬು ವಿಷ್ಣುಗೆ ಬೆಂಬಲ ಎಂದು ಹೇಳಿದ್ದಾರೆ.

ಮಂಚು ವಿಷ್ಣು ಹಾಗೂ ಮಂಚು ಮನೋಜ್ ನಡುವೆ ಗಲಾಟೆ ಆಗಿರುವ ವಿಡಿಯೋ ಒಂದು ವೈರಲ್ ಆಗಿತ್ತು. ಈ ವಿಡಿಯೋ ಅನ್ನು ಮಂಚು ಮನೋಜ್ ತಮ್ಮ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಶೇರ್‍ ಮಾಡಿದ್ದರು. ವಿಡಿಯೋದಲ್ಲಿ ಮಂಚು ವಿಷ್ಣು ತನ್ನ ತಮ್ಮ ಮನೋಜ್ ಮೇಲೆ ದಾಳಿ ಮಾಡಿದ್ದಾರೆ. ಧಾಳಿ ಮಾಡಿ ಸ್ಟ್ರಾಂಗ್ ವಾರ್ನ್ ಕೊಟ್ಟಿದ್ದಾರೆ. ಅವರಿಬ್ಬರ ನಡುವೆ ದೊಡ್ಡ ಮಟ್ಟದಲ್ಲೇ ಗಲಾಟೆಯಾಗಿದೆ. ವಿಷ್ಣು ತಮ್ಮ ಸಂಬಂಧಿಕರ ಮನೆಯಲ್ಲಿ ಇದ್ದಾಗ ಮನೋಜ್ ಗೆ ವಾರ್ನಿಂಗ್ ಕೊಟ್ಟಿದ್ದಾರೆ. ಇನ್ನೂ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಮೋಹನ್ ಬಾಬು ಇಬ್ಬರಿಗೂ ಬುದ್ದಿವಾದ ಹೇಳಿ ವಿಡಿಯೋ ಡಿಲೀಟ್ ಮಾಡಿಸಿದ್ದರು. ಈ ಬಗ್ಗೆ ವಿಷ್ಣು ಹಾಗೂ ಲಕ್ಷ್ಮೀ ಸಹ ರಿಯಾಕ್ಟ್ ಆಗಿದ್ದು, ಇದೊಂದು ಚಿಕ್ಕ ಗಲಾಟೆ ಮನೋಜ್ ತಿಳಿಯದೇ ವಿಡಿಯೋ ಶೇರ್‍ ಮಾಡಿದ್ದಾರೆ, ಅದನ್ನು ಅಷ್ಟು ಕ್ರಿಯೇಷನ್ ಮಾಡುವುದು ಸರಿಯಲ್ಲ ಎಂದು ಹೇಳಿದ್ದರು.

ಇದೀಗ ಸೀನಿಯರ್‍ ನಟ ಮೋಹನ್ ಬಾಬು ರವರ ಹಳೇಯ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅದರಲ್ಲಿ ನನ್ನ ಸಪೋರ್ಟ್ ವಿಷ್ಣುಗೆ, ಮನೋಜ್ ಗೆ ಅಲ್ಲ ಎಂದಿದ್ದಾರೆ. ಈ ಹಿಂದೆ ಟಾಲಿವುಡ್ ಸೆಲೆಬ್ರೆಟಿ ಲೀಗ್ ನಡೆದಿತ್ತು. ಅದರಲ್ಲಿ ವಿಷ್ಣು ಹಾಗೂ ಮನೋಜ್ ಬೇರೆ ಬೇರೆ ಟೀಂಗಳ ಲೀಡರ್‍ ಗಳಾಗಿದ್ದರು. ಈ ವೇಳೆ ನಿಮ್ಮ ಬೆಂಬಲ ಯಾರಿಗೆ ಎಂಬ ಮೋಹನ್ ಬಾಬು ರವರನ್ನು ಕೇಳಿದಾಗ ನಾನು ಸದಾ ನ್ಯಾಯದ ಕಡೆ ಇರುತ್ತೇನೆ. ಇಲ್ಲಿ ನಿಜಕ್ಕೂ ಕಷ್ಟಪಟ್ಟಿದ್ದು ವಿಷ್ಣು ಟೀಂ, ಮನೋಜ್ ಟೀಂ ಅಲ್ಲ ಎಂದಿದ್ದಾರೆ. ಪಕ್ಕದಲ್ಲಿರುವ ತಮ್ಮಾರೆಡ್ಡಿ ಭಾರಾಧ್ವಾಜ್ ನೀವು ಏಕಪಕ್ಷೀಯವಾಗಿ ಹೇಳಿದರೇ ಹೇಗೆ ಎಂದು ಹೇಳಿದ್ದರು. ಬಳಿಕ ಮೋಹನ್ ನಾನು ಎಂದೂ ಏಕಪಕ್ಷೀಯವಾಗಿರಲ್ಲ ಎಂದಿದ್ದಾರೆ. ಬಳಿಕ ಹಾಸ್ಯ ನಟ ಬ್ರಹ್ಮಾನಂದ ಕಾಮಿಡಿ ಮಾಡಿದ್ದಾರೆ. ಈ ಹಿಂದಿನ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು. ಮೋಹನಬಾಬು ರವರಿಗೆ ಮಕ್ಕಳ ಬಗ್ಗೆ ಪಕ್ಷಪಾತ ಧೋರಣೆ ಇದೆ ಎಂಬ ಸಂದೇಹಗಳು ಸಹ ಹುಟ್ಟಿಕೊಂಡಿತ್ತು.

ಇನ್ನೂ ಮಂಚು ವಿಷ್ಣು ರನ್ನು ಮೋಹನ್ ಬಾಬು ದೊಡ್ಡ ಮಟ್ಟದಲ್ಲಿ ಲಾಂಚ್ ಮಾಡಿದ್ದರು. ಆದರೆ ಮಂಚು ಮನೋಜ್ ರವರನ್ನು ಮಾತ್ರ ಒಂದು ಡಬ್ಬಿಂಗ್ ಸಿನೆಮಾ ಮೂಲಕ ಸರಳವಾಗಿ ಲಾಂಚ್ ಮಾಡಿದ್ದರು. ಇದೀಗ ಮನೋಜ್ ಹಾಗೂ ವಿಷ್ಣು ನಡುವಣ ಕೋಲ್ಡ್ ವಾರ್‍ ಯಾವಾಗ ಮುಗಿಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಜೊತೆಗೆ ಮನೋಜ್ ಸಹ ಕೆಲವೊಂದು ಇಂಟ್ರಸ್ಟಿಂಗ್ ಟ್ವೀಟ್ ಗಳ ಮೂಲಕ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

Most Popular

To Top