Film News

ದೀಪಿಕಾ ಪಡುಕೊಣೆ ಕಂಡಿಷನ್ ಗೆ ಶಾಕ್ ಆದ ಕಾಲಿವುಡ್ ಸ್ಟಾರ್ ಶಿಂಬು, ಆತನೊಂದಿಗೆ ನಟಿಸಲು ಭಾರಿ ಡಿಮ್ಯಾಂಡ್ ಮಾಡಿದ ನಟಿ….!

ಕಾಲಿವುಡ್ ಸ್ಟಾರ್‍ ನಟ ಶಿಂಬು ಅನೇಕ ಸಿನೆಮಾಗಳ ಮೂಲಕ ಭಾರಿ ಕ್ರೇಜ್ ಪಡೆದುಕೊಂಡಿದ್ದಾರೆ. ವಲ್ಲಭ, ಮನ್ಮಧ ಮೊದಲಾದ ಸಿನೆಮಾಗಳ ಮೂಲಕ ಯುವಕರಲ್ಲಿ ತುಂಬಾ ಕ್ರೇಜ್ ಪಡೆದುಕೊಂಡರು. ಇದೀಗ ವಿಭಿನ್ನವಾದ ಸಿನೆಮಾಗಳನ್ನು ಮಾಡುತ್ತಾ ತನ್ನ ಕ್ರೇಜ್ ಕಾಪಾಡಿಕೊಂಡು ಹೋಗುತ್ತಿದ್ದಾರೆ. ಕೊನೆಯದಾಗಿ ಆತ ಮಾನಾಡು ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನೆಮಾ ಭಾರಿ ಸಕ್ಸಸ್ ಕಂಡುಕೊಂಡರು. ಕಾಲಿವುಡ್ ನಲ್ಲಿ ರೊಮ್ಯಾಂಟಿಕ್ ಅಂಡ್ ಸ್ಟೈಲಿಷ್ ಹಿರೋ ಆಗಿ ಫಾಲೋಯಿಂಗ್ ಪಡೆದುಕೊಂಡ ಆತನೊಂದಿಗೆ ನಟಿಸಲು ಬಾಲಿವುಡ್ ಸ್ಟಾರ್‍ ನಟಿ ದೀಪಿಕಾ ಪಡುಕೋಣೆ ಕಂಡಿಷನ್ ಹಾಕಿದ್ದಾರೆ.

ಸದ್ಯ ಶಿಂಬು ಭಾರಿ ಬಜೆಟ್ ನಲ್ಲಿ ಪ್ಯಾನ್ ಇಂಡಿಯಾ ಸಿನೆಮಾ ಒಂದನ್ನು ತೆರೆಗೆ ತರಲು ಪ್ಲಾನ್ ಮಾಡುತ್ತಿದ್ದಾರೆ. ಈ ಸಿನೆಮಾದಲ್ಲಿ ಶಿಂಬುಗೆ ಜೋಡಿಯಾಗಿ ದೀಪಿಕಾ ಪಡುಕೊಣೆಯವರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.  ಆಕೆಯನ್ನು ಈ ಸಿನೆಮಾದಲ್ಲಿ ನಟಿಸಲು ಚಿತ್ರತಂಡ ಸಹ ಸಂಪರ್ಕ ಮಾಡಿದ್ದು, ಈ ವೇಳೆ ಆಕೆ ಊಹಿಸದ ಮಾದರಿಯಲ್ಲಿ ಶಾಕ್ ಕೊಟ್ಟಿದ್ದಾರಂತೆ. ಆಕೆಯ ಡಿಮ್ಯಾಂಡ್ ಕೇಳಿ ನಟ ಶಿಂಬು ಹಾಗೂ ಚಿತ್ರತಂಡದ ಪ್ಯೂಜ್ ಔಟ್ ಆಗಿದೆಯಂತೆ. ಶಿಂಬು ಜೊತೆಗೆ ನಟಿಸಲು ದೀಪಿಕಾ ಪಡುಕೊಣೆ ಬರೊಬ್ಬರಿ ಮೂವತ್ತು ಕೋಟಿ ಸಂಭಾವನೆ ಡಿಮ್ಯಾಂಡ್ ಮಾಡಿದ್ದಾರಂತೆ. ಅಷ್ಟು ಸಾಲದು ಎಂಬಂತೆ ಆಕೆಯ ಖರ್ಚುಗಳ ಲೀಸ್ಟ್ ಕೇಳಿ ಕಂಗಾಲಾಗಿದ್ದಾರೆ.

ಆಕೆ ತಂಗುವಂತಹ ಹೋಟೆಲ್ ಒಂದರ ಪೂರ್ಣ ಪ್ಲೋರ್‍ ತನಗಾಗಿ ಬುಕ್ ಮಾಡಬೇಕೆಂತೆ, ಟ್ರಾವೆಲ್ ಖರ್ಚುಗಳು, ಆಕೆಯ ಸಿಬ್ಬಂದಿ ಖರ್ಚುಗಳು ಸಹ ಚಿತ್ರತಂಡವೇ ಭರಿಸಬೇಕಂತೆ. ಸದ್ಯ ದೀಪಿಕಾ ಪಡುಕೋಣೆ ಸಂಭಾವನೆ ನಯನತಾರಾ ಗಿಂತ ಹೆಚ್ಚು. ಈ ರೇಂಜ್ ನಲ್ಲಿ ಖರ್ಚುಗಳನ್ನು ಕೇಳಿ ಶಾಕ್ ಆದ ಚಿತ್ರತಂಡ ದೀಪಿಕಾ ಪಡುಕೊಣೆ ಆಯ್ಕೆ ಬೇಡ ಎಂದು ನಿರ್ಧಾರ ಮಾಡಿದ್ದಾರಂತೆ. ಸದ್ಯ ಈ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಆದರೆ ಇದು ಎಷ್ಟರ ಮಟ್ಟಿಗೆ ನಿಜ ಎಂಬುದು ಇನಷ್ಟೆ ತಿಳಿದುಬರಬೇಕಿದೆ. ಇನ್ನೂ ದೀಪಿಕಾ ಪಡುಕೊಣೆ ಕೊನೆಯದಾಗಿ ಶಾರುಖ್ ಖಾನ್ ಜತೆಗೆ ಪಠಾನ್ ಎಂಬ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾದಲ್ಲಿ ದೀಪಿಕಾ ಗ್ಲಾಮರ್‍ ಶೋ ನೆಕ್ಸ್ಟ್ ಲೆವೆಲ್ ಎಂದೇ ಹೇಳಬಹುದಾಗಿದೆ. ಆಕೆ ಧರಿಸಿದ ಕಾಸ್ಟ್ಯೂಮ್ ಕಾರಣದಿಂದ ಆಕೆಯನ್ನು ಸಿಕ್ಕಾಪಟ್ಟೆ ವಿಮರ್ಶೆಗಳೂ ಸಹ ಮಾಡಲಾಗಿತ್ತು. ಆದರೂ ಸಹ ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿತ್ತು.

ಇನ್ನೂ ಕಾಲಿವುಡ್ ರೊಮ್ಯಾಂಟಿಕ್ ಹಿರೋ ಶಿಂಬು ಕೊನೆಯದಾಗಿ ಪತ್ತುತಲ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಆದರೆ ಈ ಸಿನೆಮಾ ಆತನಿಗೆ ಭಾರಿ ನಿರಾಸೆಯನ್ನು ಮೂಡಿಸಿತ್ತು. ಸದ್ಯ ಶಿಂಬು ತನ್ನ 48 ನೆ ಸಿನೆಮಾಗಾಗಿ ಸಿದ್ದವಾಗುತ್ತಿದ್ದಾರೆ. ಈ ಸಿನೆಮಾ ಆತನ ಕೆರಿಯರ್‍ ನಲ್ಲೇ ವಿಭಿನ್ನವಾದ ಸಿನೆಮಾ ಆಗಿರಲಿದೆ ಎನ್ನಲಾಗುತ್ತಿದೆ. ನಿರ್ದೇಶಕ ಪೆರಿಯಸ್ವಾಮಿ ಹಾಗೂ ಕಮಲ್ ಹಾಸನ್ ತನ್ನ ರಾಜ್ ಕಮಲ್ ಇಂಟರ್‍ ನ್ಯಾಷನಲ್ ಬ್ಯಾನರ್‍ ನಡಿ ಈ ಸಿನೆಮಾ ನಿರ್ಮಾಣ ಮಾಡುತ್ತಿದ್ದಾರೆ. ಇದೀಗ ಈ ಸಿನೆಮಾದ ನಾಯಕಿಯ ಬಗ್ಗೆ ವಿವಿಧ ರೀತಿಯ ಚರ್ಚೆಗಳು ನಡೆಯುತ್ತಿದೆ.

Most Popular

To Top