ಮೆಗಾ ಡಾಟರ್ ಜೊತೆಗೆ ಮದುವೆ ರೂಮರ್ ಬಗ್ಗೆ ಕ್ಲಾರಿಟಿ ಕೊಟ್ಟ ನಟ ತರುಣ್…..!

Follow Us :

ಟಾಲಿವುಡ್ ಸಿನಿರಂಗದಲ್ಲಿ ಲವರ್‍ ಬಾಯ್ ಎಂದೇ ಫೇಂ ಪಡೆದುಕೊಂಡ ತರುಣ್ ಬಾಲನಟನಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಅನೇಕ ಹಿಟ್ ಸಿನೆಮಾಗಳನ್ನು ತನ್ನ ಖಾತೆಗೆ ಹಾಕಿಕೊಂಡಿದ್ದಾರೆ. ಅದರಲ್ಲೂ ಹೆಚ್ಚು ಲವ್ ಸ್ಟೋರೀಸ್ ಮೂಲಕವೇ ಫೇಂ ಪಡೆದುಕೊಂಡರು. ಆ ಸಮಯದಲ್ಲಿ ಕ್ರೇಜಿ ಹಿರೋ ಆಗಿ, ಅನೇಕ ಹುಡುಗಿಯರ ಕ್ರಷ್ ಸಹ ಆಗಿದ್ದರು. ಆದರೆ ಇತ್ತೀಚಿಗೆ ಸಿನೆಮಾಗಳಿಂದ ದೂರವೇ ಉಳಿದಿದ್ದಾರೆ. ಕೆಲವು ದಿನಗಳಿಂದ ತರುಣ್ ಮೆಗಾ ಕುಟುಂಬದ ಅಳಿಯನಾಗಲಿದ್ದಾನೆ ಎಂಬ ಸುದ್ದಿ ಹರಿದಾಡಿತ್ತು. ಇದೀಗ ಈ ಬಗ್ಗೆ ಸ್ವತಃ ತರುಣ್ ರವರೇ ಕ್ಲಾರಿಟಿ ಕೊಟ್ಟಿದ್ದಾರೆ.

ಲವರ್‍ ಬಾಯ್ ತರುಣ್ ಸದ್ಯ ಸಿನೆಮಾಗಳಿಂದ ದೂರವೇ ಉಳಿದಿದ್ದಾರೆ. ಕೆಲವು ದಿನಗಳಿಂದ ತರುಣ್ ಮುವೆ ಬಗ್ಗೆ ಸುದ್ದಿಗಳು ಕೇಳಿಬರುತ್ತಲೇ ಇದೆ. ಇದರ ಜೊತೆಗೆ ಕೆಲವು ದಿನಗಳ ಹಿಂದೆಯಷ್ಟೆ ತರುಣ್ ರವರ ತಾಯಿ ಸಹ ಮದುವೆಯ ಬಗ್ಗೆ ಹೇಳಿದ್ದು ಮತಷ್ಟು ರೂಮರ್‍ ಗಳು ಹರಿದಾಡಲು ಶುರುವಾಯ್ತು. ಮೆಗಾ ಕುಟುಂಬದ ಅಳಿಯನಾಗಲಿದ್ದಾರೆ ತರುಣ್ ಎಂಬ ರೂಮರ್‍ ಬಲವಾಗಿಯೇ ಕೇಳಿಬಂತು. ನಿಹಾರಿಕಾ ಜೊತೆಗೆ ತರುಣ್ ಮದುವೆ ನಡೆಯಲಿದೆ ಎಂಬ ರೂಮರ್‍ ಹರಿದಾಡಿತ್ತು. ಇನ್ನೂ ನಿಹಾರಿಕಾ ಸಹ ಇತ್ತೀಚಿಗಷ್ಟೆ ಪತಿಯಿಂ ವಿಚ್ಚೇದನ ಪಡೆದುಕೊಂಡರು. ಇದೀಗ ಆಕೆ ಸಿಂಗಲ್ ಆಗಿರುವ ಹಿನ್ನೆಲೆಯಲ್ಲಿ ತರುಣ್ ಜೊತೆಗೆ ಮದುವೆ ನಡೆಯಲಿದೆ ಎಂಬ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಇನ್ನೂ ಈ ಬಗ್ಗೆ ತರುಣ್ ರಿಯಾಕ್ಟ್ ಆಗಿದ್ದಾರೆ. ಮದುವೆಯ ಬಗ್ಗೆ ಸ್ವತಃ ತರುಣ್ ರವರೇ ಸ್ಪಷ್ಟನೆ ಕೊಟ್ಟಿದ್ದಾರೆ. ತರುಣ್ ಈ ಬಗ್ಗೆ ಮಾತನಾಡುತ್ತಾ ಸದ್ಯ ಹರಿದಾಡುತ್ತಿರುವ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಅಂತಹ ಶುಭ ಸುದ್ದಿ ಇದ್ದರೇ ನಾನೇ ಯಾವುದೇ ಅಭ್ಯಂತರವಿಲ್ಲದೇ ಸೋಷಿಯಲ್ ಮಿಡಿಯಾ ಅಥವಾ ಮಾದ್ಯಮಗಳ ಮೂಲಕ ತಿಳಿಸುತ್ತೇನೆ.  ಇನ್ನೂ ನನ್ನ ಮದುವೆಯ ಬಗ್ಗೆ ಅಂತಹ ಸುಳ್ಳು ಸುದ್ದಿಗಳನ್ನು ಯಾರು ಹುಟ್ಟಿಸುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಆ ಸುದ್ದಿಗಳನ್ನು ಯಾರೂ ನಂಬಬೇಡಿ, ಅದೆಲ್ಲಾ ಸತ್ಯಕ್ಕೆ ದೂರವಾದುದು ಎಂದು ಹೇಳಿದ್ದಾರೆ. ಆ ಮೂಲಕ ಮೆಗಾ ಕುಟುಂಬದ ಅಳಿಯನಾಗುತ್ತಿದ್ದಾರೆಎಂಬ ರೂಮರ್‍ ಗೆ ಚೆಕ್ ಇಟ್ಟಿದ್ದಾರೆ.

ಈ ಹಿಂದೆ ತರುಣ್ ಹಾಗೂ ಆರತಿ ಅಗರ್ವಾಲ್ ಇಬ್ಬರೂ ಗಾಡ ಪ್ರೀತಿಯಲ್ಲಿದ್ದರು. ಇದರಿಂದ ಸಿನೆಮಾಗಳ ಮೇಲೆ ಪೋಕಸ್ ಕಡಿಮೆಯಾಯ್ತು. ಅದರಿಂದ ಆತನ ಕೆರಿಯರ್‍ ಸಹ ಹಳ್ಳ ತಪ್ಪಿತ್ತು ಎಂದು ಹೇಳಲಾಗುತ್ತಿದದೆ. ಇದೀಗ ಮತ್ತೆ ಸಿನೆಮಾಗಳತ್ತ ಮುಖ ಮಾಡಿದ್ದಾರೆ ಎಂದು ಹೇಳಲಾಗುತ್ತಿದ್ದರೂ, ಅವರ ಸಿನೆಮಾಗಳ ಬಗ್ಗೆ ಯಾವುದೇ ಅಪ್ಡೇಟ್ ಇಲ್ಲ.