Film News

ರಣಬೀರ್ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ ಕಂಗನಾ, ಡೇಟಿಂಗ್ ಮಾಡೋಣ ಎಂದು ಕಾಲಿಗೆ ಬಿದ್ದಿದ್ದರಂತೆ ರಣಬೀರ್……!

ಬಾಲಿವುಡ್ ಫೈರ್‍ ಬ್ರಾಂಡ್ ಕಂಗನಾ ರಾಣಾವತ್ ಬಾಲಿವುಡ್ ಸ್ಟಾರ್‍ ನಟರೂ ಸೇರಿದಂತೆ ಅನೇಕ ರಾಜಕೀಯ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಸದಾ ಒಂದಲ್ಲ ಒಂದು ವಿವಾದಿತ ಹೇಳಿಕೆಗಳನ್ನು ನೀಡುತ್ತಾ ಸುದ್ದಿಯಲ್ಲಿರುತ್ತಾರೆ. ಇದೀಗ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ಮೂಲಕ ಸುದ್ದಿಯಾಗಿದದ್ದಾರೆ. ಬಾಲಿವುಡ್ ಸ್ಟಾರ್‍ ನಿರ್ಮಾಪಕ ಕಂ ಡೈರೆಕ್ಟರ್‍ ಕರಣ್ ಜೋಹಾರ್‍ ಜೊತೆಗೆ ಬಾಲಿವುಡ್ ಸ್ಟಾರ್‍ ಹಿರೋ ರಣಬೀರ್‍ ಕಪೂರ್‍ ಬಗ್ಗೆ ಪರೋಕ್ಷವಾಗಿ ಶಾಕಿಂಗ್ ಕಾಮೆಂಟ್ ಮಾಡಿದ್ದಾರೆ. ಆ ಮೂಲಕ ಬಾಲಿವುಡ್ ನಲ್ಲಿ ಸಂಚಲನ ಸೃಷ್ಟಿಸಿದ್ದಾರೆ.

ಸ್ಟಾರ್‍ ನಟಿ ಕಂಗನಾ ರಾನೌತ್ ಆಗಾಗ ದೊಡ್ಡ ದೊಡ್ಡ ಸೆಲೆಬ್ರೆಟಿಗಳ ಮೇಲೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಜೊತೆಗೆ ರಾಜಕೀಯ ನಾಯಕರನ್ನೂ ಸಹ ಆಕೆ ವಿಮರ್ಶೆ ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆಯನ್ನು ಕಾಂಟ್ರವರ್ಸಿ ಕ್ವೀನ್ ಎಂತಲೂ ಕರೆಯುತ್ತಾರೆ. ವಿವಾದಗಳಿಗೆ ಕೇರ್‍ ಆಫ್ ಅಡ್ರೆಸ್ ಎಂದರೇ ಕಂಗನಾ ರಾನೌತ್ ಎಂದು ಹೇಳಬಹುದು. ದೊಡ್ಡ ಸ್ಟಾರ್‍ ಗಳಾಗಲಿ, ಅಥವಾ ದೊಡ್ಡ ರಾಜಕಾರಣಿಗಳಾಗಲಿ ನೇರವಾಗಿ ಅವರ ಮೇಲೆ ಆರೋಪಗಳನ್ನು ಮಾಡಿಬಿಡುತ್ತಾರೆ. ಅವರನ್ನು ಎದುರಿಸಿ ಸಹ ನಿಲ್ಲುತ್ತಾರೆ. ಇಂತಹ ಅನೇಕ ಕಾರಣಗಳಿಂದ ಆಕೆ ತುಂಬಾನೆ ಸಮಸ್ಯೆಗಳನ್ನು ಎದುರಿಸಿದ್ದರು. ಈ ಹಿಂದೆ ನಟ ರಣಬೀರ್‍ ಕಪೂರ್‍ ವಿರುದ್ದ ಪರೋಕ್ಷವಾಗಿ ವಿವಾದಾತ್ಮಕ ಕಾಮೆಂಟ್ಸ್ ಮಾಡಿದ್ದರು. ಮಾಫಿಯಾ ಸೂಪರ್‍ ಸ್ಟಾರ್‍ ಎಂದು ರಣಬೀರ್‍ ಕಪೂರ್‍ ವಿರುದ್ದ ಗುಡುಗಿದ್ದರು. ಇದೀಗ ಮತ್ತೊಮ್ಮೆ ರಣಬೀರ್‍ ಕಪೂರ್‍ ಬಗ್ಗೆ ಪರೋಕ್ಷವಾಗಿ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ.

ಆ ನಟ ಮಾಫಿಯಾ ಪ್ಲೇಬಾಯ್, ಆತನ ಮದುವೆ ಬೂಟಾಟಿಕೆ. ಆತ ನನ್ನ ವಿಚಾರದಲ್ಲೂ ಸಹ ತಪ್ಪಾಗಿ ವರ್ತನೆ ಮಾಡಿದ್ದ. ನನ್ನ ಜೊತೆಗೆ ಡೇಟಿಂಗ್ ಮಾಡುಲು ಶತಪ್ರಯತನ್ನಗಳನ್ನು ಸಹ ಮಾಡಿದ್ದ. ನಾನು ಒಪ್ಪಿಕೊಂಡರೇ ಟ್ರಯಾಂಗಲ್ ಡೇಟಿಂಗ್ ಗೆ ಸಹ ಸಿದ್ದವಾಗಿದ್ದ. ಡೇಟಿಂಗ್ ಮಾಡುವಂತೆ ನನ್ನ ಕಾಲಿಗೆ ಬಿದಿದ್ದ. ಅದಕ್ಕೆ ನಾನು ಒಪ್ಪಲಿಲ್ಲ ಅದಕ್ಕೆ ನನ್ನ ಮೇಲೆ ಹಗೆ ಸಾಧಿಸಿ, ನನ್ನ ಸೋಷಿಯಲ್ ಮಿಡಿಯಾ ಖಾತೆಯನ್ನು ಹ್ಯಾಕ್ ಮಾಡಿ ತುಂಬಾನೆ ಕಿರುಕುಳ ನೀಡಲು ಪ್ರಯತ್ನಿಸಿದ್ದ. ಜೊತೆಗೆ ನಾನು ಎಲ್ಲಿಗೆ ಹೋದರೇ ಅಲ್ಲಿಗೆ ಬರುತ್ತಿದ್ದ. ಒಂದು ಬಾರಿ ಶೂಟಿಂಗ್ ನಿಮಿತ್ತ ಪ್ಯಾರೀಸ್ ಗೆ ಹೋದಾಗಲೂ ಸಹ ಅಲ್ಲಿಗೂ ಬಂದಿದ್ದ. ಮನೆಗೆ ಬರುತ್ತಿದ್ದು, ನೀನೆಂದರೇ ನನಗೆ ಹುಚ್ಚು, ಎಂದೂ ಸದಾ ನನ್ನ ಸುತ್ತಲೂ ತಿರುಗಾಡುತ್ತಿದ್ದ ಎಂದು ಕಂಗನಾ ತಿಳಿಸಿದ್ದಾರೆ.

ತನ್ನೊಂದಿಗೆ ಮಾತನಾಡುವುದನ್ನೂ ಬಿಟ್ಟ ಸುಮಾರು ವರ್ಷಗಳ ಬಳಿಕ ಸಿನೆಮಾ ಒಂದರ ಆಫರ್‍ ಸಹ ನೀಡಿದ್ದ ಅದನ್ನು ಸಹ ನಾನು ತಿರಸ್ಕರಿಸಿದೆ ಎಂದು ರಣಬೀರ್‍ ವಿರುದ್ದ ಪರೋಕ್ಷವಾಗಿ ಪೋಸ್ಟ್ ಮಾಡಿದ್ದಾರೆ. ಸದ್ಯ ಈ ಸಂಬಂಧ ಕಂಗನಾ ಹಂಚಿಕೊಂಡ ಇನ್ಸ್ಟಾ ಸ್ಟೋರಿ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಆ ನಟ ಬೇರೆ ಯಾರೂ ಅಲ್ಲ ರಣಬೀರ್‍ ಕಪೂರ್‍ ಎಂದು ಕಾಮೆಂಟ್ ಗಳು ಸಹ ಹರಿದು ಬರುತ್ತಿವೆ.

Trending

To Top