Film News

ಮತ್ತೊಮ್ಮೆ ಆದಿಲ್ ವಿರುದ್ದ ಗಂಭೀರ ಆರೋಪ ಮಾಡಿದ ರಾಖಿ, ಜೈಲಿನಲ್ಲಿ ಕುಳಿತು ನನ್ನ ಕೊಲೆ ಸ್ಕೆಚ್ ಹಾಕಿದ್ದಾನೆ ಎಂದ ನಟಿ……!

ಬಾಲಿವುಡ್ ನಟಿ ರಾಖಿ ಸಾವಂತ್ ಸದಾ ಒಂದಲ್ಲ ಒಂದು ರೀತಿಯ ವಿವಾದಗಳಲ್ಲಿ, ಸಮಸ್ಯೆಗಳಲ್ಲಿ ಸಿಲುಕುತ್ತಿರುತ್ತಾರೆ. ಇತ್ತಿಚಿಗೆ ಆಕೆ ಮೈಸೂರು ಮೂಲದ ಉದ್ಯಮಿ ಆದಿಲ್ ಖಾನ್ ಎಂಬಾತನೊಂದಿಗೆ ಮದುವೆಯಾಗಿ ಇಸ್ಲಾಂ ಧರ್ಮಕ್ಕೆ ಬದಲಾಗಿದ್ದರು ಎನ್ನಲಾಗಿದೆ. ಆದರೆ ಇಬ್ಬರ ನಡುವೆ ವಿಬೇದಗಳು ಹುಟ್ಟಿಕೊಂಡಿದೆ. ತನ್ನ ಪತಿ ಬೇರೆ ಯುವತಿಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾರೆ ಎಂದು ಸಹ ರಾಖಿ ಆರೋಪ ಮಾಡಿದ್ದರು. ಇದೀಗ ಆದಿಲ್ ನನ್ನನ್ನು ಮುಗಿಸಲು ಜೈಲಿನಿಂದಲೇ ಸ್ಕೆಚ್ ಹಾಕಿದ್ದಾನೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಸಿನಿರಂಗದಲ್ಲಿ ಸದಾ ವಿವಾದಗಳ ಮೂಲಕವೇ ಸುದ್ದಿಯಾಗುವ ನಟಿಯರಲ್ಲಿ ರಾಖಿ ಸಾವಂತ್ ಮೊದಲ ಸ್ಥಾನದಲ್ಲಿರುತ್ತಾರೆ. ಕೆಲವು ದಿನಗಳ ಹಿಂದೆಯಷ್ಟೆ ರಾಖಿ ಸಾವಂತ್ ಮೈಸೂರು ಮೂಲದ ಉದ್ಯಮಿ ಆದಿಲ್ ಖಾನ್ ಎಂಬಾತನನ್ನು ಮದುವೆಯಾದರು. ಮದುವೆಯಾದ ಅನೇಕ ತಿಂಗಳುಗಳ ಬಳಿಕ ಮದುವೆ ವಿಚಾರವನ್ನು ಬಹಿರಂಗಪಡಿಸಿದ್ದರು. ಈ ವಿಚಾರ ಹೊರಬರುತ್ತಿದ್ದಂತೆ ರಾಖಿ ಹಾಗೂ ಆದಿಲ್ ಬೇರೆಯಾಗಿದ್ದಾರೆ. ಆದಿಲ್ ಮೇಲೆ ರಾಖಿ ಕೇಸ್ ಸಹ ದಾಖಲಿಸಿ ಜೈಲಿಗೆ ಕಳುಹಿಸಿದರು. ಬಳಿಕ ರಾಖಿ ಆದಿಲ್ ವಿರುದ್ದ ಬ್ಯಾಕ್ ಟು ಬ್ಯಾಕ್ ಆರೋಪಗಳನ್ನು ಮಾಡುತ್ತಾ ಬಂದಿದ್ದಾರೆ. ಈಗಲೂ ಸಹ ಆದಿಲ್ ಜೈಲಿನಲ್ಲೇ ಇದ್ದಾರೆ. ಇದೀಗ ಮತ್ತೊಮ್ಮೆ ರಾಖಿ ಆತನ ವಿರುದ್ದ ಗಂಭೀರ ಆರೋಪವನ್ನು ಮಾಡಿದ್ದಾರೆ.

ಜೈಲಿನಲ್ಲಿರುವ ಆದಿಲ್ ನನ್ನನ್ನು ಕೊಲೆ ಮಾಡಲು ಸ್ಕೆಚ್ ಹಾಕಿದ್ದಾನೆ ಎಂದು ವಿಡಿಯೋ ಮೂಲಕ ಗಂಭೀರ ಆರೋಪಗಳನ್ನು ಮಾಡಿದ್ದಾಳೆ ರಾಖಿ ಸಾವಂತ್. ಆದಿಲ್ ಖಾನ್ ಜೈಲಿನಲ್ಲಿದ್ದುಕೊಂಡು ನನ್ನನ್ನು ಕೊಲೆ ಮಾಡಲು ಸುಪಾರಿ ಕೊಟ್ಟಿದ್ದಾನೆ. ಈ ಬಗ್ಗೆ ನನಗೆ ವಿಚಾರ ತಿಳಿದಿದೆ. ನಾನು ಸುರಕ್ಷಿತವಾಗಿರಲು ದುವಾ ಪಠಿಸುತ್ತಿದ್ದೇನೆ. ಅಲ್ಲಾ ನನ್ನ ಪ್ರಾರ್ಥನೆಯನ್ನು ಸಹ ಸ್ವೀಕರಿಸುವ ನಂಬಿಕೆ ನನಗಿದೆ. ಆದಿಲ್ ನೀನು ನನ್ನನ್ನು ಕೊಲ್ಲಲು ಸಾಧ್ಯವಿಲ್ಲ. ಆ ದೇವರು ನನ್ನೊಂದಿಗೆ ಇದ್ದಾನೆ. ನೀನು ಏಕೆ ಇದನ್ನು ಮಾಡುತ್ತಿದ್ದೀಯಾ, ಆಸ್ತಿಗೋಸ್ಕರನಾ ಅಥವಾ ಅಥವ ಸೇಡಿಗಾಗಾ ಎಂದು ವಿಡಿಯೋ ಮೂಲಕ ಪ್ರಶ್ನೆ ಸಹ ಮಾಡಿದ್ದಾರೆ. ಈ ಬಗ್ಗೆ ಒಬ್ಬ ವ್ಯಕ್ತಿ ನನಗೆ ಕರೆ ಮಾಡಿ ನಾನು ನಿಮ್ಮ ಹಿತೈಷಿ ನನ್ನ ಹೆಸರು ಹೇಳುವುದಿಲ್ಲ. ಆದಿಲ್ ನಿಮ್ಮನ್ನು ಕೊಲೆ ಮಾಡಲು ಸ್ಕೆಚ್ ಹಾಕಿದ್ದಾನೆ. ಸುಮಾರು ದಿನಗಳಿಂದ ಪ್ಲಾನ್ ಮಾಡುತ್ತಿದ್ದಾನೆ. ಅವನು ಪೊಲೀಸರನ್ನು ಸಹ ಕೊಂಡುಕೊಳ್ಳಲು ರೆಡಿಯಾಗಿದ್ದಾನೆ ಎಂದು ಹೇಳುವ ರೆಕಾರ್ಡ್ ಒಂದನ್ನು ಸಹ ಹಂಚಿಕೊಂಡಿದ್ದಾರೆ.

ಮುಂದುವರೆದು ಆಕೆ ನಾನು ರಂಜಾನ್ ಸಮಯದಲ್ಲಿ ರೋಸಾ ಮಾಡುವ ಸಮಯದಲ್ಲಿ ಆದಿಲ್ ನನ್ನು ಕ್ಷಮಿಸಿದ್ದೆ. ಅವನು ನನ್ನ ತಾಯಿಯನ್ನು ಕೊಂದವನು. ನನಗೆ ಮೋಸ ಮಾಡಿದ್ದೇನೆ. ನನ್ನ ಹಣ ಸಹ ತೆಗೆದುಕೊಂಡು ಮೋಸ ಮಾಡಿದ್ದಾನೆ. ಆದರೂ ಅವನನ್ನು ನಾನು ಕ್ಷಮಿಸಿದ್ದೇನೆ. ಎಲ್ಲವನ್ನೂ ಆ ಅಲ್ಲಾನಿಗೆ ಬಿಟ್ಟಿದ್ದೇನೆ. ಆತ ನೋಡಿಕೊಳ್ಳುತ್ತೇನೆ ಎಂದು ವಿಡಿಯೋ ಮೂಲಕ ಆದಿಲ್ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ.

Most Popular

To Top