Film News

ಸೌತ್ ಸ್ಟಾರ್ ನಟಿ ಸಮಂತಾ ಮೊದಲ ಆಡಿಷನ್ ನಲ್ಲಿ ನಿರ್ದೇಶಕನಿಗೆ ಜಲಕ್ ಕೊಟ್ಟಿದ್ದರಂತೆ?

ಸೌತ್ ಸಿನಿರಂಗದ ಸ್ಟಾರ್‍ ನಟಿಯರಲ್ಲಿ ಸಮಂತಾ ಸಹ ಟಾಪ್ ಸ್ಥಾನದಲ್ಲಿರುತ್ತಾರೆ. ಕಳೆದ 2010 ರಲ್ಲಿ ಆಕೆ ಬೆಳ್ಳಿ ತೆರೆಗೆ ಪರಿಚಯವಾದರು. ನಾಗಚೈತನ್ಯ ಜೊತೆಗೆ ಏಮಾಯಾ ಚೆಸ್ಯಾವೇ ಎಂಬ ಸಿನೆಮಾದ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಈ ಸಿನೆಮಾವನ್ನು ಗೌತಮ್ ಮಿನನ್ ನಿರ್ದೇಶಿಸಿದ್ದರು. ಈ ಸಿನೆಮಾದ ಮೂಲಕವೇ ಆಕೆ ಸ್ಟಾರ್‍ ನಟಿಯಾದರು. ಆಕೆ ಕೆರಿಯರ್‍ ನಲ್ಲಿ ಸಕ್ಸಸ್ ಕಾಣುತ್ತಾ ಸಾಗುತ್ತಲೇ ಇದ್ದಾರೆ. ಈ ಸಿನೆಮಾಗೂ ಮುಂಚೆಯೇ ಸಮಂತಾ ತಮಿಳು ಸಿನೆಮಾ ಒಂದಕ್ಕೆ ಆಯ್ಕೆ ಆಗಿದ್ದರಂತೆ. ಈ ಸಿನೆಮಾದ ಆಡಿಷನ್ ವೇಳೆ ನಿರ್ದೇಶಕನಿಗೆ ಸಮಂತಾ ಜಲಕ್ ಕೊಟ್ಟಿದ್ದರಂತೆ.

ಹೌದು ಸಮಂತಾ ಹಿರೋಯಿನ್ ಆಗುವುದಕ್ಕೂ ಮುಂಚೆಯೇ ನಿರ್ದೇಶಕರೊಬ್ಬರಿಗೆ ಜಲಕ್ ನೀಡಿದ್ದರಂತೆ. ಆ ನಿರ್ದೇಶಕ ಬೇರೆ ಯಾರೂ ಅಲ್ಲ ಶಿವನಾಗೇಶ್ವರಾವ್ ರವರು. ಇದೀಗ ಅವರು ಸಮಂತಾ ಬಗ್ಗೆ ನೀಡಿರುವ ಹೇಳಿಕೆಗಳು ಪರೋಕ್ಷವಾಗಿ ಈ ಬಗ್ಗೆ ಅನ್ನಿಸುತ್ತಿದೆ. ಏಮಾಯಾ ಚೆಸ್ಯಾವೇ ಸಿನೆಮಾಗೂ ಮುಂಚೆ ಸಮಂತಾ ಸಿನೆಮಾ ಒಂದಕ್ಕೆ ಆಡಿಷನ್ ಗೆ ಹೋಗಿರದ್ದರಂತೆ. ಶಿವ ನಾಗೇಶ್ವರರಾವ್ ರವರ ನಿರ್ದೇಶನದ ನಿನ್ನು ಕಲಿಶಾಕ ಎಂಬ ಸಿನೆಮಾಗೆ ಹಿರೋಯಿನ್ ಗಾಗಿ ಸಮಂತಾ ಆಡಿಷನ್ ಗೆ ಬಂದಿದ್ದರಂತೆ. ಇನ್ನೂ ಆಡಿಷನ್ ಗಾಗಿ ಚೆನೈನಿಂದ ಹೈದರಾಬಾದ್ ಗೆ ಸಮಂತಾ ಬಂದು, ತುಂಬಾ ಚೆನ್ನಾಗಿಯೇ ಆಡಿಷನ್ ನೀಡಿದ್ದರಂತೆ. ಬಳಿಕ ಸಮಂತಾ ರವರನ್ನು ಆಯ್ಕೆ ಮಾಡಲು ಸಹ ಚರ್ಚೆಗಳ ನಡೆಸಿದ್ದರಂತೆ. ಆದರೆ ಸಮಂತಾ ಮಾತ್ರ ಭಾರಿ ಸಂಭಾವನೆಯನ್ನು ಕೇಳಿದ್ದರಂತೆ. ಆದ್ದರಿಂದ ಸಮಂತಾರವರನ್ನು ಆ ಸಿನೆಮಾಗೆ ಆಯ್ಕೆ ಮಾಡಿಕೊಳ್ಳಲಿಲ್ಲವಂತೆ.

ಇನ್ನೂ ಆಡಿಷನ್ ಸಹ ಪೂರ್ಣಗೊಂಡ ಕೂಡಲೇ ಚೆನೈಗೆ ಹೋಗಬೇಕು ಎಂದು ಹೇಳಿದ್ದರಂತೆ. ಇಂದು ಫ್ಲೈಟ್ ಟಿಕೆಟ್ಸ್ ದರ ಹೆಚ್ಚಾಗಿದೆ. ಒಂದು ದಿನ ಇದ್ದು ಹೋಗಿ ಎಂದರೂ ಸಹ ಆಕೆ ಕೇಳಿಲಿಲ್ಲವಂತೆ. ಆಕೆ ಕೇಳದ ಕಾರಣದಿಂದ ವಿಮಾನದಲ್ಲಿ ಚೆನೈಗೆ ಕಳುಹಿಸಲು ಏರ್ಪಾಡುಗಳನ್ನು ಮಾಡಿದ್ದರಂತೆ. ಸಮಂತಾ ಚೆನ್ನಾಗಿ ಆಡಿಷನ್ ಕೊಟ್ಟರು. ಆದರೆ ಆಕೆ ಡಿಮ್ಯಾಂಡ್ ಮಾಡಿದಂತಹ ರೆನ್ಯೂಮರೇಷನ್ ನೀಡುವ ಪರಿಸ್ಥಿತಿಯಲ್ಲಿರಲಿಲ್ಲ. ಸಮಂತಾ ತನ್ನ ಟ್ಯಾಲೆಂಟ್ ಮೂಲಕ ಇದೀಗ ದೊಡ್ಡ ಮಟ್ಟಕ್ಕೆ ಹೋಗಿದ್ದಾರೆ ಎಂದು ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಇನ್ನೂ ಅವರ ಹೇಳಿಕೆಗಳನ್ನು ಗಮನಿಸಿದರೇ ಸಮಂತಾ ಹಿರೋಯಿನ್ ಆಗುವುದಕ್ಕೂ ಮುಂಚೆಯೇ ನಿರ್ದೇಶಕನಿಗೆ ಜಲಕ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನೂ ಸಮಂತಾ ಅನೇಕ ಸ್ಟಾರ್‍ ಗಳ ಜೊತೆಗೆ ನಟಿಸುತ್ತಾ ಭಾರಿ ಕ್ರೇಜ್ ಪಡೆದುಕೊಂಡು ಸ್ಟಾರ್‍ ನಟಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಖ್ ಸಕ್ಸಸ್ ಕಾಣುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ನಾಗಚೈತನ್ಯ ಜೊತೆಗೆ ವಿಚ್ಚೇದನ ಪಡೆದುಕೊಂಡ ಬಳಿಕ ಆಕೆ ಡಿಪ್ರೆಷನ್ ಗೆ ಹೋಗಿದ್ದರು. ಅದರಿಂದ ಹೊರಬಂದ ಕಡಿಮೆ ಸಮಯದಲ್ಲೇ ಆಕೆ ಮಯೋಸೈಟೀಸ್ ಎಂಬ ‌ವ್ಯಾಧಿಗೆ ಗುರಿಯಾದರು. ಸದ್ಯ ಆಕೆ ಈ ವ್ಯಾದಿಯಿಂದ ಹೊರಬಂದು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತಿಚಿಗಷ್ಟೆ ಆಕೆ ಶಾಕುಂತಲಂ ಎಂಬ ಒಪ್ಯಾನ್ ಇಂಡಿಯಾ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆದರೆ ಈ ಸಿನೆಮಾ ಡಿಜಾಸ್ಟರ್‍ ಆಗಿದೆ ಎನ್ನಲಾಗುತ್ತಿದೆ.

Most Popular

To Top