ಮಂಚು ಲಕ್ಷ್ಮೀ ಶಾಕಿಂಗ್ ಕಾಮೆಂಟ್ಸ್, ನಿಹಾರಿಕಾ ಸೇರಿದಂತೆ ಹಲವು ನಟಿಯರ ಬಗ್ಗೆ ಶಾಕಿಂಗ್ ಕಾಮೆಂಟ್ಸ್,…..!

Follow Us :

ತೆಲುಗು ಸಿನಿರಂಗದ ಮಂಚು ಕುಟುಂಬದ ಮೋಹನ್ ಬಾಬು ರವರ ಪುತ್ರಿ ಮಂಚು ಲಕ್ಷ್ಮೀ ಆಗಾಗ ಸೆನ್ಷೇಷನಲ್ ವಿಚಾರಗಳಿಗಾಗಿ ಸುದ್ದಿಯಾಗುತ್ತಲೇ ಇರುತ್ತಾರೆ. ಮಲ್ಟಿ ಟ್ಯಾಲೆಂಟ್ ಹೊಂದಿರುವ ಈಕೆ ನಟಿಯಾಗಿ ಮಾತ್ರ ಕ್ರೇಜ್ ಪಡೆದುಕೊಳ್ಳಲು ವಿಫಲರಾದರು ಎಂದು ಹೇಳಬಹುದಾಗಿದೆ. ಕೆಲವೊಂದು ಸಿನೆಮಾಗಳಲ್ಲಿ ವಿಲನ್ ರೋಲ್ ನಲ್ಲೂ ಸಹ ಕಾಣಿಸಿಕೊಂಡರು. ಆಂಕರ್‍ ಆಗಿ ಸಹ ಅನೇಕ ಶೋ ಗಳನ್ನು ಹೋಸ್ಟ್ ಮಾಡಿದ್ದಾರೆ. ಇದೀಗ ಆಕೆ ಸಂಚಲನಾತ್ಮಕ ಹೇಳಿಕೆಗಳನ್ನು ಕೊಟ್ಟಿದ್ದು, ಆಕೆ ಹೇಳಿಕೆಗಳು ಸಂಚಲನ ಸೃಷ್ಟಿಸಿದೆ.

ನಟಿ ಮಂಚು ಲಕ್ಷ್ಮೀ ಇತ್ತಿಚಿಗೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು, ಈ ವೇಳೆ ಆಕೆ ಟಾಲಿವುಡ್ ನಟಿಯರ ಬಗ್ಗೆ ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಟಾಲಿವುಡ್ ನಲ್ಲಿ ತುಂಬಾ ನಾರ್ತ್ ಅಥವಾ ಬೇರೆ ಭಾಷೆಗಳ ಹಿರೋಯಿನ್ ಗಳದ್ದೇ ಹವಾ ಜೋರಾಗಿರುತ್ತದೆ. ತೆಲುಗು ರಾಷ್ಟ್ರಗಳಲ್ಲಿ ಹುಟ್ಟಿ ಇಲ್ಲೇ ಬೆಳೆದ ಹಿರೋಯಿನ್ ಗಳು ಮಾತ್ರ ಇಲ್ಲಿ ಸಕ್ಸಸ್ ಆಗುವುದು ತುಂಬಾನೆ ಕಡಿಮೆ. ಅವರಿಗೆ ಅವಕಾಶಗಳೂ ಸಹ ಕಡಿಮೆಯಾಗಿರುತ್ತದೆ. ನಾನು ಟಾಲಿವುಡ್ ನಲ್ಲಿ ನಟಿಸುವುದಕ್ಕೂ ಮುಂಚೆ ಹಾಲಿವುಡ್ ನಲ್ಲಿ ಕೆಲ ಸಿನೆಮಾಗಳನ್ನು ಮಾಡಿದ್ದೇನೆ. ಇನ್ನೂ ಹತ್ತು ವರ್ಷಗಳ ಕಾಲ ನಾನು ಅಲ್ಲಿಯೇ ಇದ್ದಿದ್ದರೇ ತುಂಬಾ ಫೇಮಸ್ ಆಗುತ್ತಿದ್ದೆ. ಆದರೆ ಇದೀಗ ತೆಲುಗು ಸಿನಿರಂಗಕ್ಕೆ ಅನವಶ್ಯಕವಾಗಿ ಬಂದೆ ಎಂದು ವಿವಾದಾಸ್ಪದ ಹೇಳಿಕೆ ನೀಡಿದ್ದಾರೆ.

ಇನ್ನೂ ದೇವರು ಮತ್ತೊಮ್ಮೆ ಅವಕಾಶ ಕೊಟ್ಟರೇ ನಾನು ಹಾಲಿವುಡ್ ಗೆ ಹೋಗಲು ಸಿದ್ದವಾಗಿದ್ದೇನೆ. ತೆಲುಗಿನಲ್ಲಿ ಪರಿಸ್ಥಿತಿ ತುಂಬಾ ವಿಚಿತ್ರವಾಗಿದೆ. ಇಲ್ಲಿನ ಪ್ರೇಕ್ಷಕರೂ ಸಹ ಬೇರೆ ಕಡೆಯಿಂದ ಬಂದಂತಹ ಹಿರೋಯಿನ್ ಗಳನ್ನೆ ತುಂಬಾ ಇಷ್ಟಪಡುತ್ತಾರೆ. ಇಲ್ಲಿಯೇ ಹುಟ್ಟಿ ಬೆಳೆದ ನಟಿಯರನ್ನು ಅಭಿಮಾನಿಸುವುದಿಲ್ಲ. ನಿಹಾರಿಕಾ ಸಹ ಇಲ್ಲಿಯೇ ಹುಟ್ಟಿ ಬೆಳೆದರು. ಆದರೆ ಆಕೆ ಟಾಪ್ ನಟಿಯರ ಸಾಲಿಗೆ ಸೇರಲಿಲ್ಲ. ಬಿಂದು ಮಾಧವಿ, ಶಿವಾತ್ಮಿಕ, ಶಿವಾನಿ  ಮೊದಲಾದ ಅನೇಕ ನಟಿಯರು ಏಕೆ ಸಕ್ಸಸ್ ಆಗಲಿಲ್ಲ. ಇಲ್ಲಿನ ಪ್ರೇಕ್ಷಕರು ಅವರ ಮೇಲೆ ಅಭಿಮಾನ ತೋರಿಸಿದ್ದರೇ, ಅವರು ಸ್ಟಾರ್‍ ನಟಿಯಾಗುತ್ತಿದ್ದರು. ಪ್ರೇಕ್ಷಕರ ಜೊತೆಗೆ ಟಾಲಿವುಡ್ ಫಿಲಂ ಮೇಕರ್ಸ್ ಸಹ ಬೇರೆ ರಾಷ್ಟ್ರಗಳ ನಟಿಯರ ಮೇಲೆ ಹೆಚ್ಚು ಆಸಕ್ತಿ ತೋರುತ್ತಾರೆ ಎಂದು ಕಾಮೆಂಟ್ಸ್ ಮಾಡಿದ್ದಾರೆ.

ಇನ್ನೂ ಮಂಚು ಲಕ್ಷ್ಮೀ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಈ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ಚರ್ಚೆಗಳೂ ಸಹ ಶುರುವಾಗಿದೆ. ಈ ಬಗ್ಗೆ ಯಾರು ಯಾರು ಯಾವ ರೀತಿಯಲ್ಲಿ ರಿಯಾಕ್ಟ್ ಆಗಲಿದ್ದಾರೆ ಎಂಬುದು ಕಾದು ನೋಡಬೇಕಿದೆ. ಇನ್ನೂ ನಟಿ ಮಂಚು ಲಕ್ಷ್ಮೀ ಆಗಾಗ ಕೆಲವೊಂದು ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತಿರುತ್ತಾರೆ.