ತೆಲುಗು ಖ್ಯಾತ ಕೊರಿಯೋಗ್ರಾಫರ್ ರಾಕೇಶ್ ಮಾಸ್ಟರ್ ಇನ್ನಿಲ್ಲ…..!

Follow Us :

ತೆಲುಗು ಸಿನಿರಂಗದ ಪ್ರಮುಖ ಕೊರಿಯೋಗ್ರಾಫರ್‍ ರಾಕೇಶ್ ಮಾಸ್ಟರ್‍ ಅನರೋಗ್ಯದ ನಿಮಿತ್ತ ಇಹಲೋಕ ತ್ಯೆಜಿಸಿದ್ದಾರೆ. 53 ವರ್ಷ ವಯಸ್ಸಿನ ರಾಕೇಶ್ ಮಾಸ್ಟರ್‍ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ವೈಜಾಗ್ ನಿಂದ ಹೈದರಾಬಾದ್ ಗೆ ಬರುತ್ತಿದ್ದಾಗ ಆತನ ಆರೋಗ್ಯ ತುಂಬಾ ಕ್ಷೀಣಿಸಿತ್ತು ಎನ್ನಲಾಗಿದೆ.  ಭಾನುವಾರ (ಜೂ.18) ಬೆಳಿಗ್ಗೆ ಆತ ರಕ್ತದ ವಾಂತಿ ಮಾಡಿಕೊಂಡರು. ಬಳಿಕ ಆತನನ್ನು ಗಾಂಧಿ ಆಸ್ಪತ್ರೆಗೆ ರವಾನಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಅವರು ಇಹಲೋಕ ತ್ಯೆಜಿಸಿದ್ದಾರೆ. ಟಾಲಿವುಡ್ ಸಿನಿರಂಗದ ಅನೇಕ ಪ್ರಮುಖರು ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥನೆ ಮಾಡುತ್ತಿದ್ದಾರೆ.

ರಾಕೇಶ್ ಮಾಸ್ಟರ್‍ ರವರ ಮೂಲ ಹೆಸರು ಎಸ್.ರಾಮಾರಾವು. ತಿರುಪತಿಯಲ್ಲಿ ಜನಿಸಿದ ಈತ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಬಳಿಕ ರಾಕೇಶ್ ಮಾಸ್ಟರ್‍ ಆದರು. ತೆಲುಗು ಸಿನಿರಂಗದ ಸ್ಟಾರ್‍ ಕೊರಿಯೋಗ್ರಾಫರ್‍ ಗಳಾದ ಶೇಖರ್‍ ಮಾಸ್ಟರ್‍, ಜಾನಿ ಮಾಸ್ಟರ್‍ ರವರುಗಳಂತಹ ಅನೇಕರು ರಾಕೇಶ್ ಮಾಸ್ಟರ್‍ ರವರ ಶಿಷ್ಯರೇ. ಆಗಿದ್ದಾರೆ. ಪ್ರಭಾಸ್, ಪ್ರತ್ಯೂಷ, ವೇಣು, ಮನಿಚಂದನ್ ಸೇರಿದಂತೆ ಅನೇಕರು ಆತನ ಬಳಿ ನೃತ್ಯ ಕಲಿತುಕೊಂಡಿದ್ದಾರೆ. ಸುಮಾರು 1500 ಕ್ಕೂ ಹೆಚ್ಚು ಸಿನೆಮಾಗಳಿಗೆ ಈತ ಕೊರಿಯೋಗ್ರಾಫಿ ಮಾಡಿದ್ದಾರೆ. ಕಿರುತೆರೆಯಲ್ಲಿ ಆಟ ಎಂಬ ಡ್ಯಾನ್ಸ್ ಶೋ ಮೂಲಕ ಕರಿಯರ್‍ ಆರಂಭಿಸಿದರು. ಅಲ್ಲಿ ತುಂಬಾ ಫೇಂ ಪಡೆದುಕೊಂಡ ಬಳಿಕ ಡ್ಯಾನ್ಸ್ ಕೊರಿಯೋಗ್ರಾಫರ್‍ ಆದರು. ದೇವದಾಸು, ಚಿರುನವ್ವುತೋ, ಸೀತಯ್ಯ, ಲಾಹಿರಿ ಲಾಹಿರಿ ಸಿನೆಮಾಗಳಿಗೆ ಈತ ಕೊರಿಯೋಗ್ರಾಫರ್‍ ಆಗಿ ಕೆಲಸ ಮಾಡಿದ್ದರು.

ಇನ್ನೂ ಕೆಲವು ವರ್ಷಗಳಿಂದ ರಾಕೇಶ್ ಮಾಸ್ಟರ್‍ ಡ್ಯಾನ್ಸರ್‍ ಆಗಿ ಆಕ್ಟೀವ್ ಆಗಿಲ್ಲ. ಅನೇಕ ವಿವಾದಗಳಿಗೆ ಗುರಿಯಾಗಿದ್ದಾರೆ. ಯೂಟ್ಯೂಬ್ ನಲ್ಲಿ ಆತ ಅನೇಕ ಸಂದರ್ಶನಗಳಲ್ಲಿ ಅನೇಕ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಜೊತೆಗೆ ಸ್ವಂತ ಯೂಟ್ಯೂಬ್ ಚಾನಲ್ ಸಹ ಆರಂಭಿಸಿ ವಿವಾದಾತ್ಮಕ ಹೇಳಿಕೆಗಳನ್ನು ಮಾಡುತ್ತಾ ಸುದ್ದಿಯಾಗುತ್ತಿದ್ದರು. ತನ್ನ ಸಹ ಕೊರಿಯೋಗ್ರಾಫರ್‍ ಗಳ ಮೂಲಕವೇ ಆತನ ಕೆರಿಯರ್‍ ನಾಶವಾಯಿತು ಎಂದೂ ಸಹ ರಾಕೇಶ್ ಮಾಸ್ಟರ್‍ ಹೇಳುತ್ತಲೇ ಇರುತ್ತಾರೆ. ಇದರ ಜೊತೆಗೆ ಆತನ ವ್ಯಸನಗಳ ಕಾರಣದಿಂದಲೇ ಆತನ ಆರೋಗ್ಯ ಕ್ಷೀಣಿಸಿದೆ ಎಂದು ಪ್ರಚಾರ ಸಹ ನಡೆದಿತ್ತು. ಅದರಿಂದಲೇ ಆತನಿಗೆ ಮತಿಭ್ರಮಣೆ ಸಹ ಆಗಿತ್ತು ಎಂದೂ ರೂಮರ್‍ ಗಳು ಕೇಳಿಬಂದಿತ್ತು.

ಇನ್ನೂ ರಾಕೇಶ್ ಮಾಸ್ಟರ್‍ ಮೃತಪಟ್ಟ ವಿಚಾರ ತಿಳಿಯುತ್ತಿದ್ದಂತೆ ಅನೇಕರು ತೀವ್ರ ಸಂತಾಪ ಸೂಚಿಸಿದ್ದಾರೆ. ಆತನ ಶಿಷ್ಯ ವರ್ಗ ಸೇರಿದಂತೆ ಸಿನಿರಂಗದ ಪ್ರಮುಖರು ರಾಖೇಶ್ ಮಾಸ್ಟರ್‍ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ.