Film News

ಬಾಲಿವುಡ್ ಸಿನಿರಂಗದಲ್ಲಿ ಟ್ಯಾಲೆಂಟ್ ಗುರ್ತಿಸೊಲ್ಲ ಎಂದು ಕಿಡಿಕಾರಿದ ತಾಪ್ಸಿ, ಶಾಕಿಂಗ್ ಕಾಮೆಂಟ್ಸ್ ಮಾಡಿದ ಬ್ಯೂಟಿ…..!

ಸೌತ್ ಸಿನಿರಂಗದಲ್ಲಿ ಬಹುಬೇಡಿಕೆಯ ನಟಿಯರಲ್ಲಿ ತಾಪ್ಸಿ ಪನ್ನು ಸಹ ಒಬ್ಬರಾಗಿದ್ದಾರೆ. ಜುಮ್ಮಂದಿ ನಾದಂ ಎಂಬ ಸಿನೆಮಾದ ಮೂಲಕ ಟಾಲಿವುಡ್ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಈಕೆ ಕಡಿಮೆ ಸಮಯದಲ್ಲೇ ಕ್ರೇಜ್ ದಕ್ಕಿಸಿಕೊಂಡರು. ಬಳಿಕ ದೊಡ್ಡ ಸ್ಟಾರ್‍ ನಟರ ಸಿನೆಮಾಗಳಲ್ಲೂ ಸಹ ಕಾಣಿಸಿಕೊಂಡರು. ಸದ್ಯ ಬಾಲಿವುಡ್‌ ನಲ್ಲಿ ದೊಡ್ಡ ಫೇಮ್ ದಕ್ಕಿಸಿಕೊಂಡು ಮುನ್ನುಗ್ಗುತ್ತಿದ್ದಾರೆ. ಇದೀಗ ಬಾಲಿವುಡ್ ಸಿನಿರಂಗದ ಬಗ್ಗೆ ಆಕೆ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಬಾಲಿವುಡ್ ನಲ್ಲಿ ಟ್ಯಾಲೆಂಟ್ ಗುರ್ತಿಸೊಲ್ಲ ಎಂದು ಶಾಕಿಂಗ್ ಕಾಮೆಂಟ್ ಮಾಡಿದ್ದು, ಹಾಟ್ ಟಾಪಿಕ್ ಆಗಿದೆ.

ನಟಿ ತಾಪ್ಸಿ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿದ್ದಾರೆ. ಸಿನೆಮಾಗಳ ಜೊತೆಗೆ ಆಕೆ ನಿರ್ಮಾಪಕಿಯಾಗಿಯೂ ಸಹ ಸಿನೆಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ಟಾಲಿವುಡ್ ಅನ್ನು ವಿರೋಧಿಸುತ್ತಲೇ ಬಾಲಿವುಡ್ ಸಿನಿರಂಗವನ್ನು ಸೇರಿದರು. ಅಲ್ಲೂ ಸಹ ವಿವಿಧ ಕಾಂಟ್ರವರ್ಸಿಗಳ ಮೂಲಕ ಫೈರ್‍ ಬ್ರಾಂಡ್ ಎನ್ನಿಸಿಕೊಂಡರು. ಇನ್ನೂ ಬಾಲಿವುಡ್ ನಲ್ಲಿ ನೆಪೊಟಿಸಂ ಬಗ್ಗೆ ಸಹ ವಿಭಿನ್ನವಾಗಿಯೇ ರಿಯಾಕ್ಟ್ ಆಗುತ್ತಿದ್ದರು. ಬಾಲಿವುಡ್ ನ ಮತ್ತೋರ್ವ ಫೈರ್‍ ಬ್ರಾಂಡ್ ಕಂಗನಾ ಜೊತೆಗೆ ಸಹ ತಾಪ್ಸಿ ಫೈಟಿಂಗ್ ಮಾಡುತ್ತಲೇ ಇರುತ್ತಾರೆ. ಬಾಲಿವುಡ್ ನಲ್ಲಿ ಮಹಿಳಾ ಪ್ರಧಾನ ಸಿನೆಮಾಗಳಿಗೆ ಹಾಗೂ ಕಾಂಟ್ರವರ್ಸಿ ಕಾಮೆಂಟ್ ಗಳಿಗೆ ಕೇರಾಫ್ ಅಡ್ರೆಸ್ ಆಗಿದ್ದಾರೆ ಎನ್ನಲಾಗುತ್ತದೆ.

ನಟಿ ತಾಪ್ಸಿ ಕಾಮೆಂಟ್ಸ್ ಮಾಡಿದರೇ ಅನೇಕರು ಭಯಪಡುತ್ತಾರೆ. ಸಿನಿರಂಗದಲ್ಲಿ ಆಕೆ ಪುರುಷಾಧಿಪತ್ಯದ ಬಗ್ಗೆ ಖಾರವಾಗಿಯೇ ರಿಯಾಕ್ಟ್ ಆಗುತ್ತಿರುತ್ತಾರೆ. ಇದೀಗ ಮತ್ತೊಮ್ಮೆ ಕೆಲವೊಂದು ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಬಾಲಿವುಡ್ ಬಗ್ಗೆ ಆಕೆ ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದು, ಆಕೆಯ ಹೇಳಿಕೆಗಳು ಹಾಟ್ ಟಾಪಿಕ್ ಆಗಿದೆ. ಸಿನೆಮಾದಲ್ಲಿ ಯಾವುದಾದರೂ ಒಂದು ಪಾತ್ರದಲ್ಲಿ ನಟರನ್ನು ಆಯ್ಕೆ ಮಾಡಿಕೊಳ್ಳಲು ಅವರಲ್ಲಿ ಲೀಡ್ ನಲ್ಲಿ ಇರುವಂತಹ ಕಲಾವಿದರನ್ನು ತೆಗೆದಕೊಳ್ಳುತ್ತಾರೆ. ಆದರೆ ಟ್ಯಾಲೆಂಟ್ ಇದ್ದವರನ್ನು ಯಾರೂ ಪರಿಗಣನೆ ಮಾಡುವುದಿಲ್ಲ. ಜೊತೆಗೆ ಪಾತ್ರಕ್ಕೆ ಸ್ಯೂಟ್ ಆಗುವಂತಹವರನ್ನು ತೆಗೆದುಕೊಳ್ಳದೇ, ತಮ್ಮ ಸ್ನೇಹಿತರನ್ನು ಹಾಗೂ ಏಜೆನ್ಸಿಗೆ ಸೇರಿದ ಕೆಲವರನ್ನು ಸಿನೆಮಾಗಳಲ್ಲಿ ತೆಗೆದುಕೊಳ್ಳುತ್ತಿದ್ದಾರೆ. ಕ್ಯಾಂಪ್ ಹಾಗೂ ಫೆವರಿಜಂ ನಿಂದ ಸಿನೆಮಾದ ಶೂಟಿಂಗ್ ನಡೆಯುತ್ತಿದೆ. ಸಿನಿರಂಗವನ್ನು ಸರಿಮಾಡುವುದು ಯಾರ ಕೈಯಲ್ಲೂ ಸಾಧ್ಯವಿಲ್ಲ ಎಂದು, ಬಾಲಿವುಡ್ ನಲ್ಲಿ ಪಕ್ಷಪಾತ ಧೋರಣೆ ಹೆಚ್ಚಾಗಿದೆ ಎಂದು ಖಾರವಾಗಿ ನುಡಿದಿದ್ದಾರೆ.

ಇನ್ನೂ ತಾಪ್ಸಿ ಸೌತ್ ಸಿನೆಮಾಗಳಿಂದ ದೂರವಾಗಿ ಬಾಲಿವುಡ್ ನಲ್ಲೇ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ನೆಪೊಟೀಸಂ ಬಗ್ಗೆ ಆಗಾಗ ಶಾಕಿಂಗ್ ಕಾಮೆಂಟ್ಸ್ ಮಾಡುತ್ತಲೇ ಇರುತ್ತಾರೆ. ಇದೀಗ ತಾಪ್ಸಿ ನೀಡಿದ ಹೇಳಿಕೆಗಳು ಬಾಲಿವುಡ್ ನಲ್ಲಿ ಹಾಟ್ ಟಾಪಿಕ್ ಆಗಿದೆ. ಬಾಲಿವುಡ್ ನಲ್ಲಿ ಲೇಡಿ ಓರಿಯೆಂಟೆಡ್ ಸಿನೆಮಾಗಳಿಗೆ ತಾಪ್ಸಿ ಪನ್ನು ಕೇರಾಫ್ ಆಗಿದ್ದಾರೆ ಎಂದು ಸಹ ಹೇಳಬಹುದಾಗಿದೆ.

Most Popular

To Top