ಜೆ.ಡಿ. ಚಕ್ರವರ್ತಿ ಸಂಚಲನಾತ್ಮಕ ಹೇಳಿಕೆಗಳು, ಕಷಾಯ ಎಂದು ಎಂಟು ತಿಂಗಳು ವಿಷ ಕುಡಿಸಿದ್ರಂತೆ….!

ಸೌತ್ ಸಿನಿರಂಗದ ನಟರಲ್ಲಿ ವಿಭಿನ್ನ ನಟರ ಸಾಲಿಗೆ ಜೆ.ಡಿ.ಚಕ್ರವರ್ತಿ ಹೆಸರು ಮೊದಲ ಸ್ಥಾನದಲ್ಲಿರುತ್ತದೆ ಎನ್ನಬಹುದಾಗಿದೆ. ಅವರ ಸಿನೆಮಾಗಳು, ವ್ಯವಾಹರಿಕ ಶೈಲಿ ಎಲ್ಲವೂ ವಿಭಿನ್ನವಾಗಿಯೇ ಇರುತ್ತವೆ. ವಿಲಕ್ಷಣ ನಟನಾಗಿ ಅನೇಕ ಸಿನೆಮಾಗಳಲ್ಲಿ ಹಿರೋ, ವಿಲನ್ ಆಗೂ…

ಸೌತ್ ಸಿನಿರಂಗದ ನಟರಲ್ಲಿ ವಿಭಿನ್ನ ನಟರ ಸಾಲಿಗೆ ಜೆ.ಡಿ.ಚಕ್ರವರ್ತಿ ಹೆಸರು ಮೊದಲ ಸ್ಥಾನದಲ್ಲಿರುತ್ತದೆ ಎನ್ನಬಹುದಾಗಿದೆ. ಅವರ ಸಿನೆಮಾಗಳು, ವ್ಯವಾಹರಿಕ ಶೈಲಿ ಎಲ್ಲವೂ ವಿಭಿನ್ನವಾಗಿಯೇ ಇರುತ್ತವೆ. ವಿಲಕ್ಷಣ ನಟನಾಗಿ ಅನೇಕ ಸಿನೆಮಾಗಳಲ್ಲಿ ಹಿರೋ, ವಿಲನ್ ಆಗೂ ಸಪೋರ್ಟಿಂಗ್ ಆಕ್ಟರ್‍ ಆಗಿಯೂ ಸಹ ನಟಿಸಿದ್ದಾರೆ. ತೆಲುಗು ಸೇರಿದಂತೆ ಅನೇಕ ಭಾಷೆಗಳ ಸಿನೆಮಾಗಳಲ್ಲೂ ಸಹ ನಟಿಸಿದ್ದಾರೆ. ಇದೀಗ ಆತ ಸಂದರ್ಶನವೊಂದರಲ್ಲಿ ಕೆಲವೊಂದು ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಆತನ ಹೇಳಿಕೆಗಳು ಇದೀಗ ಹಾಟ್ ಟಾಪಿಕ್ ಆಗಿದೆ.

ನಟ ಜೆ.ಡಿ. ಚಕ್ರವರ್ತಿ ಸುಮಾರು ದಿನಗಳ ಕಾಲ ಸಿನೆಮಾಗಳಿಂದ ದೂರವೇ ಉಳಿದಿದ್ದರು. ಇದೀಗ ಆತ ದಯ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಈ ಸಿನೆಮಾ ಶೀಘ್ರದಲ್ಲೇ  ಒಟಿಟಿ ಮೂಲಕ ತೆರೆಕಾಣಲಿದೆ. ಈ ಹಾದಿಯಲ್ಲೇ ಆತ ಸಂದರ್ಶನವೊಂದರಲ್ಲಿ ಭಾಗಿಯಾಗಿ ಕೆಲವೊಂದು ಇಂಟ್ರಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತನ್ನ ಮೇಲೆ ನಡೆದಂತಹ ವಿಷ ಪ್ರಯೋಗದ ಬಗ್ಗೆ ಆತ ಹೇಳಿದ್ದಾರೆ. ತನಗೆ ತನ್ನ ಸ್ವಂತ ಪತ್ನಿ ಸ್ಲೋ ಪಾಯಿಸನ್ ನೀಡಿದ್ದರಂತೆ. ಈ ಕುರಿತು ಮಾತನಾಡಿದ ಆತ ಈ ವಿಚಾರ ಅದು ಹೇಗೆ ಹೊರಗೆ ಬಂತು ಎಂಬುದು ತಿಳಿದಿಲ್ಲ. ಆದರೆ ಇಬ್ಬರು ಮೂವರಿಗೆ ಮಾತ್ರ ಈ ವಿಚಾರ ಗೊತ್ತು. ಅದರಲ್ಲಿ ನಾನು ಸಹ ಒಬ್ಬ. ಕೆಲವು ತಿಂಗಳುಗಳ ಹಿಂದೆ ನನಗೆ ಉಸಿರಾಟದ ಸಮಸ್ಯೆ ಬಂತು. ಆದರೆ ಅದು ನನಗೆ ಹೇಗೆ ಬಂತು ಎಂದು ತಿಳಿಯಲಿಲ್ಲ.

ನನಗೆ ಧೂಮಪಾನ, ಮದ್ಯಪಾನ, ಡ್ರಗ್ಸ್ ಸೇವನೆ ಮೊದಲಾದ ಕೆಟ್ಟ ಅಭ್ಯಾಸಗಳೂ ಸಹ ಇಲ್ಲ. ಅಂತಹುದರಲ್ಲಿ ನನಗೆ ಉಸಿರಾಟದ ಸಮಸ್ಯೆ ಹೇಗೆ ಬಂತು ಎಂಬುದು ತಿಳಿಯಲಿಲ್ಲ. ಒಂದು ಸಮಯದಲ್ಲಿ ಉಸಿರಾಡಲು ತುಂಬಾನೆ ಕಷ್ಟಪಡುತ್ತಿದೆ. ನನ್ನ ಕ್ಲೋಜ್ ಫ್ರಂಡ್ ಉತ್ತೇಜ್ ಒಳ್ಳೆಯ ವೈದ್ಯರ ಬಳಿ ಕರೆದುಕೊಂಡು ಹೋದರು. ಆತ ದೇಶದಲ್ಲೆ ಬೆಸ್ಟ್ ಡಾಕ್ಟರ್‍, ಶ್ರೀಲಂಕಾ ಮೂಲದ ವೈದ್ಯರು. ಆತ ನನ್ನ ಪರೀಕ್ಷೆ ಮಾಡಿ ಏನು ಪ್ರಯೋಜನ ವಿಲ್ಲ. ಪರಿಸ್ಥಿತಿ ತುಂಬಾ ಧಾರುಣವಾಗಿದೆ. ಹೋಪ್ಸ್ ಇಲ್ಲ ಎಂದು ಹೇಳಿದ್ದರು. ಬದುಕುವುದು ಸಹ ಕಷ್ಟ ಎಂದು ಹೇಳಿದ್ದರು. ಆ ಸಮಯದಲ್ಲಿ ನನ್ನ ಸ್ನೇಹಿತ ಶ್ರಾವಣಿ ಸುಬ್ರಮಣ್ಯಂ ನಿರ್ಮಾಪಕ ನನಗೆ ಸಹಾಯ ಮಾಡಿದ.

ಬಳಿಕ ನಾಗಾರ್ಜುನ ಎಂಬ ವೈದ್ಯ ನನ್ನ ಪ್ರಾಣ ಕಾಪಾಡಿದರು. ಆತ ಕೆಲವೊಂದು ಪರೀಕ್ಷೆಗಳನ್ನು ಮಾಡಿ ನನಗೆ ಕಳೆದ ಎಂಟು ತಿಂಗಳುಗಳಿಂದ ಸ್ಲೋ ಪಾಯಿಜನ್ ನೀಡಿದ್ದಾಗಿ ತಿಳಿಸಿದರು. ನಾನು ತೆಗೆದುಕೊಂಡ ಕಷಾಯದಲ್ಲಿ ವಿಷ ಬೆರೆಸಲಾಗಿತ್ತಂತೆ. ನನಗೆ ಯಾವುದೇ ಕೆಟ್ಟ ಅಭ್ಯಾಸಗಳಿಲ್ಲದ ಕಾರಣ ಅದು ನನ್ನ ಮೇಲೆ ತಡವಾಗಿ ಪರಿಣಾಮ ಬೀರಿತ್ತು ಎಂದು ಅವರು ಹೇಳಿದ್ದಾರೆ. ಸದ್ಯ ಆತನ ಹೇಳಿಕೆಗಳು ಸೊಷಿಯಲ್ ಮಿಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ.