ನನಗೆ ಆ ರೀತಿ ಮೋಸ ಮಾಡುತ್ತಾನೆ ಎಂದುಕೊಂಡಿರಲಿಲ್ಲ, ನನ್ನ ಜೀವನೇ ಅವನು ಎಂದುಕೊಂಡಿದ್ದೆ ಎಂದ ಚೈತನ್ಯ ಮಾಸ್ಟರ್ ತಾಯಿ…..!

ತೆಲುಗು ಕಿರುತೆರೆಯಲ್ಲಿ ಢಿ ಶೋ ಮೂಲಕ ಭಾರಿ ಕ್ರೇಜ್ ಪಡೆದುಕೊಂಡ ಯಂಗ್ ಅಂಡ್ ಟ್ಯಾಲೆಂಟೆಡ್ ಕೊರಿಯೋಗ್ರಾಫರ್‍ ಚೈತನ್ಯ ಕೆಲವೊಂದು ವೈಯುಕ್ತಿಕ ಕಾರಣಗಳಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸೆಲ್ಫಿ ವಿಡಿಯೋ ಮೂಲಕ ತಾನು ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ ಹೇಳುತ್ತಾ ಎಲ್ಲರನ್ನೂ ಕಣ್ಣೀರಾಕಿಸಿದ್ದಾರೆ. ಇನ್ನೂ ಆತನ ಮರಣಕ್ಕೆ ಢಿ ಶೋನ ಶ್ರದ್ದಾದಾಸ್, ರಶ್ಮಿ ಗೌತಮ್ ಸೇರಿದಂತೆ ಶೋನ ಅನೇಕರು ವಿಷಾದ ವ್ಯಕ್ತಪಡಿಸುತ್ತಿದ್ದಾರೆ. ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಕೊರಿಯೋಗ್ರಾಫರ್‍ ಚೈತನ್ಯ ಆತ್ಮಹತ್ಯೆ ಎಲ್ಲರನ್ನೂ ಭಾವುಕರನ್ನಾಗಿ ಮಾಡುತ್ತಿದೆ. ಚೈತನ್ಯ ತಾಯಿ ಲಕ್ಷ್ಮೀ ಸ್ಚರಾಜ್ಯಂ ಮಗನ ಮರಣವನ್ನು ಜೀರ್ಣಿಸಿಕೊಳ್ಳಲು ಆಗದೇ ಭಾರಿ ನೋವನ್ನು ಅನುಭವಿಸುತ್ತಿದ್ದಾರೆ. ಚಿಟ್ಟಿ ಮಾಸ್ಟರ್‍ ಎಂಬಾತನೊಂದಿಗೆ ಆಖೆ ತನ್ನ ನೋವನ್ನು ಹೇಳಿಕೊಂಡಿದ್ದಾರೆ. ನನ್ನ ಮಗ ಸಾಲದ ಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡ ಎಂಬುದು ಶುದ್ದ ಸುಳ್ಳು. ಸಾಲ ಇರುವ ಬಗ್ಗೆ ನನಗೆ ಎಂದೂ ಹೇಳಲಿಲ್ಲ. ಸ್ನೇಹಿತರೂ ಸಹ ಹೇಳಲಿಲ್ಲ. ಹಣಕ್ಕಿಂದ ಆರೋಗ್ಯ ತುಂಬಾ ಮುಖ್ಯ ಎಂದು ನನ್ನೊಂದಿಗೆ ಹೇಳುತ್ತಿದ್ದ. ಡ್ಯಾನ್ಸರ್‍ ಗಳಿಗೆ ಒಳ್ಳೆಯ ಊಟ ಕೊಟ್ಟರೇ ನಮ್ಮನ್ನು ಗೌರವದಿಂದ ಕಾಣುತ್ತಾರೆ. ಹಣದಲ್ಲಿ ಏನಿದೆ ಯಾವಾಗ ಬೇಕಾದರೂ ಸಂಪಾದನೆ ಮಾಡಬಹುದು ಎಂದು ಹೇಳಿದ್ದಾರೆ.

ಭಾರಿ ಸಾಲ ಮಾಡಿದ ಕಾರಣದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾನೆ. ಆದರೆ ನನ್ನನ್ನು ಕೇಳಿದರೇ ಆ ಸಾಲ ತೀರಿಸಲು ಹಣ ಕೊಡುತ್ತಿದ್ದೆ. ನನ್ನ ಜೀವನವೇ ಅವನಾಗಿದ್ದ, ಅನೇಕ ಸಂಕಷ್ಟಗಳನ್ನು ಎದುರಿಸಿದ್ದೇವೆ. ಸಾಯುವ 15 ನಿಮಿಷಗಳಿಗೂ ಮುಂಚೆ ನನ್ನೊಂದಿಗೆ ಮಾತನಾಡಿದ್ದ. ಕೊನೆಗೆ ನಮ್ಮನ್ನು ಮೋಸ ಮಾಡಿದ. ನಾನು ಸಾಯುತ್ತಿದ್ದೇನೆ. ನೀನು ಬಾ ಅಮ್ಮ ಎಂದಿದ್ದರೇ ನಾನು ಸಹ ಅವನೊಂದಿಗೆ ಹೋಗುತ್ತಿದ್ದೆ ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಇನ್ನೂ ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇನ್ನೂ ಢಿ 15 ಸೀಸನ್ ಇದೀಗ ನಡೆಯುತ್ತಿದ್ದು, ಈ ಶೋ ನಲ್ಲಿ ಕೊರಿಯೋಗ್ರಾಫರ್‍ ಆಗಿದ್ದ ಚೈತನ್ಯ ಇದ್ದಕ್ಕಿಂದ್ದಂತೆ ಆತ್ಮಹತ್ಯೆಗೆ ಶರಣಾಗಿದ್ದು. ಇಂಡಸ್ಟ್ರಿಗೆ ಸಂಬಂಧಿಸಿದ ಅನೇಕರು ಸಂತಾಪ ಸೂಚಿಸುತ್ತಿದ್ದಾರೆ. ಇನ್ನೂ ಚೈತನ್ಯ ಆತ್ಮಹತ್ಯೆಗೂ ಮುಂಚೆ ತಾನು ಅನುಭವಿಸುತ್ತಿರುಚ ಆರ್ಥಿಕ ಸಮಸ್ಯೆಯ ಬಗ್ಗೆ ವಿಡಿಯೋ ಮೂಲಕ ತಿಳಿಸಿದ್ದರು. ಆತನ ಸಾವಿಗೆ ಆರ್ಥಿಕ ಪರಿಸ್ಥಿತಿಗಳೇ ಕಾರಣ ಎಂದು ಹೇಳಲಾಗುತ್ತಿದೆ.