ಮೇಕಪ್ ಲೆಸ್ ಆಗಿ ಕಾಣಿಸಿಕೊಂಡ ಮಿಲ್ಕಿ ಬ್ಯೂಟಿ, ವರ್ಕೌಟ್ ಡ್ರೆಸ್ ನಲ್ಲಿ ಟೆಂಪ್ಟಿಂಗ್ ಪೋಸ್ ಕೊಟ್ಟ ತಮನ್ನಾ……!

ಸಿನಿರಂಗದಲ್ಲಿ ಮಿಲ್ಕಿ ಬ್ಯೂಟಿ ಎಂದೇ ಖ್ಯಾತಿ ಪಡೆದುಕೊಂಡಿರುವ ತಮನ್ನಾ ಭಾಟಿಯಾ ಈಗಲೂ ಸಹ ಬಹುಬೇಡಿಕೆಯುಳ್ಳ ನಟಿಯಾಗಿದ್ದಾರೆ. ತನ್ನ ಸೌಂದರ್ಯದ ಮೂಲಕವೇ ಇಂಡ್ರಸ್ಟಿಯನ್ನು ಆಳಿದಂತಹ ನಟಿಯಾಗಿದ್ದು, ತೆಲುಗು ಹಾಗೂ ತಮಿಳಿನಲ್ಲಿ ಹೆಚ್ಚು ಸಿನೆಮಾಗಳ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಅದರಲ್ಲೂ ತೆಲುಗು ಸಿನಿರಂಗದಲ್ಲಂತೂ ತುಂಬಾನೆ ಖ್ಯಾತಿ ಪಡೆದುಕೊಂಡಿದ್ದಾರೆ. ಇದೀಗ ಆಕೆ ವರ್ಕೌಟ್ ಡ್ರೆಸ್ ನಲ್ಲಿ ಮೇಕಪ್ ಲೆಸ್ ಆಗಿ ಕಾಣಿಸಿಕೊಂಡಿದ್ದು, ಈ ಪೊಟೋಗಳು ವೈರಲ್ ಆಗುತ್ತಿವೆ.

ಸುಮಾರು ವರ್ಷಗಳಿಂದ ಮಿಲ್ಕಿ ಬ್ಯೂಟಿ ತಮನ್ನಾ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಒಳ್ಳೆಯ ಕ್ರೇಜ್ ಪಡೆದುಕೊಂಡಿದ್ದಾರೆ. ಅನೇಕ ಸ್ಟಾರ್‍ ಗಳ  ಜೊತೆಗೆ ತೆರೆಹಂಚಿಕೊಂಡು ಅನೇಕ ಹಿಟ್ ಸಿನೆಮಾಗಳನ್ನು ತೆಕ್ಕೆಗೆ ಹಾಕಿಕೊಂಡಿದ್ದಾರೆ. ಸೋಲು ಗೆಲುವನ್ನು ಲೆಕ್ಕಿಸದೇ ಆಕೆಯನ್ನು ಮೇಕರ್ಸ್ ತಮ್ಮ ಸಿನೆಮಾಗಳಲ್ಲಿ ಆಯ್ಕೆ ಮಾಡಿಕೊಂಡು ಅನೇಕ ಸಕ್ಸಸ್ ಗಳನ್ನು ಸಹ ಪಡೆದುಕೊಂಡಿದ್ದಾರೆ. ತಮನ್ನಾ ಗ್ಲಾಮರ್‍ ಮೂಲಕವೇ ಸಿನಿರಂಗವನ್ನು ಆಳಿದ್ದಾರೆ ಎಂದು ಹೇಳಬಹುದಾಗಿದೆ. ಸಿನೆಮಾ ಯಾವುದೇ ಇರಲಿ ಆ ಸಿನೆಮಾದಲ್ಲಿ ಆಕೆ ಸೊಂಟ ಸೇರಿದಂತೆ ದೇಹದ ಮೈಮಾಟದ ಮೂಲಕ ಸಿನೆಮಾದಲ್ಲಿ ಸದ್ದು ಮಾಡುತ್ತಿರುತ್ತಾರೆ. ಮೊದಲಿಗೆ ಹಿರೋಯಿನ್ ಆಗಿ, ಐಟಂ ಗರ್ಲ್ ಆಗಿ ಅನೇಕ ಸಿನೆಮಾಗಳಲ್ಲಿ ನಟಿಸಿದ ಈಕೆ ಇದೀಗೆ ಗ್ಲಾಮರ್‍ ಜೊತೆಗೆ ಕಥೆಗೂ ಸಹ ಆದ್ಯತೆ ನೀಡುತ್ತಿರುತ್ತಾರೆ. ಇನ್ನೂ ಆಕೆ ಸಿನೆಮಾಗಳ ಜೊತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟಿವ್ ಆಗಿರುತ್ತಾರೆ.

ಇದೀಗ ತಮನ್ನಾ ತನ್ನ ಸೋಷಿಯಲ್ ಮಿಡಿಯಾದಲ್ಲಿ ಕೆಲವೊಂದು ಪೊಟೋಗಳು ವೈರಲ್ ಆಗಿದೆ. ಜಿಮ್ ನಲ್ಲಿ ಆಕೆ ಟೈಟ್ ಫಿಟ್ ಡ್ರೆಸ್ ನಲ್ಲಿ ಮಾದಕ ನೋಟ ಬೀರಿದ್ದಾರೆ. ಇದೇ ವೇಳೆ ಆಕೆ ಅಭಿಮಾನಿಯೊಬ್ಬರೊಂದಿಗೆ ಹಾಟ್ ಪೊಟೋ ಒಂದನ್ನು ಸಹ ಶೇರ್‍ ಮಾಡಿದ್ದಾರೆ. ಇದರಲ್ಲಿ ತಮನ್ನಾ ಸೂಪರ್‍ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಕೊಂಚ ದಪ್ಪವಾಗಿದ್ದ ಆಕೆ ಎಲ್ಲರನ್ನೂ ಕಟ್ಟಿಹಾಕುತ್ತಿದ್ದಾರೆ. ಟೈಟ್ ಫಿಟ್ ಡ್ರೆಸ್ ನಲ್ಲಿ ಆಕೆ ತನ್ನ ಸೌಂದರ್ಯದ ಮೂಲಕ ಎಲ್ಲರನ್ನೂ ಮಂತ್ರಮುಗ್ದರನ್ನಾಗಿ ಮಾಡುತ್ತಾರೆ. ತನ್ನ ದೇಹದ ಅಂಗಾಗಗಳ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ಇನ್ನೂ ಈ ಪೊಟೋಗಳನ್ನು ಗಮನಿಸಿದರೇ ತಮನ್ನಾ ಕೊಂಚ ದಪ್ಪ ಆಗಿದ್ದಾರೆ. ಈ ಕಾರಣದಿಂದಲೇ ಆಕೆ ಜಿಮ್ ಕಡೆ ಮುಖ  ಮಾಡಿದ್ದಾರೆ ಎಂದು ಕಾಮೆಂಟ್ ಗಳೂ ಸಹ ಕೇಳಿಬರುತ್ತಿವೆ.

ಇನ್ನೂ ತಮನ್ನಾ ಇತ್ತೀಚಿಗೆ ಸಿನೆಮಾಗಳ ಜೊತೆಗೆ ವೈಯುಕ್ತಿಕ ವಿಚಾರಗಳ ಕಾರಣದಿಂದಲೂ ಸುದ್ದಿಯಾಗುತ್ತಿರುತ್ತಾರೆ. ತಮನ್ನಾ ಬಾಲಿವುಡ್ ನಟ ವಿಜಯ್ ವರ್ಮಾ ಜೊತೆಗೆ ಪ್ರೀತಿಯಲ್ಲಿದ್ದಾರೆ ಎಂಬ ರೂಮರ್‍ ಸದಾ ಕೇಳಿಬರುತ್ತಲೇ ಇದೆ. ಇನ್ನೂ ತಮನ್ನಾ ಸದ್ಯ ಮೆಗಾಸ್ಟಾರ್‍ ಚಿರಂಜೀವಿ ಜೊತೆಗೆ ಭೋಳಾಶಂಕರ್‍ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಮತಷ್ಟು ಸಿನೆಮಾಗಳು ಆಕೆಯ ಕೈಯಲ್ಲಿವೆ.