ತೆಲುಗು ಬೋಲ್ಡ್ ಬ್ಯೂಟಿ ಶ್ರದ್ದಾದಾಸ್ ಲೇಟೆಸ್ಟ್ ಹಾಟ್ ಲುಕ್ಸ್ ವೈರಲ್, ಸೌಂದರ್ಯದ ಜೊತೆಗೆ ಅದೃಷ್ಟ ಸಹ ಇರಬೇಕು ಎಂದ ಫ್ಯಾನ್ಸ್….!

Follow Us :

ಟಾಲಿವುಡ್ ಬೋಲ್ಡ್ ಬ್ಯೂಟಿ ಶ್ರದ್ದಾದಾಸ್ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಬೋಲ್ಡ್ ಆಗಿ ದೇಹದ ಮೈಮಾಟ ಪ್ರದರ್ಶನ ಮಾಡುತ್ತಿದ್ದಾರೆ. ಆಕೆ ಸಿದ್ದು ಫ್ರಂ ಶ್ರೀಕಾಕುಳಂ ಎಂಬ ಸಿನೆಮಾದ ಮೂಲಕ ಟಾಲಿವುಡ್ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಈಗಾಗಲೇ ಆಕೆ ಅನೇಕ ಸಿನೆಮಾಗಳಲ್ಲಿ ನಟಿಸಿದರೂ ಕೂಡ ಆಕೆಗೆ ಅಂದುಕೊಂಡ ಸಕ್ಸಸ್ ದೊರೆಯಲಿಲ್ಲ. ಇದೀಗ ಆಕೆ ಸಿನೆಮಾಗಳಿಗಿಂತ ವೆಬ್ ಸಿರೀಸ್ ಹಾಗೂ ಕಿರುತೆರೆಯಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ಸಂಚಲನ ಸೃಷ್ಟಿಸುತ್ತಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರು ಕ್ರೇಜಿ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಸಿನಿರಂಗದಲ್ಲಿ ಗ್ಲಾಮರ್‍ ಅಭಿನಯ ಎರಡೂ ಇದ್ದೂ ಸಕ್ಸಸ್ ಕಾಣದ ನಟಿಯರ ಸಾಲಿಗೆ ಶ್ರದ್ದಾದಾಸ್ ಸಹ ಸೇರುತ್ತಾರೆ ಎನ್ನಬಹುದು. ನಟಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರೂ ಸಹ ಆಕೆ ಸ್ಟಾರ್‍ ನಟಿಯಾಗಲು ವಿಫಲರಾದರು. ಆದರೆ ಸಣ್ಣಪುಟ್ಟ ಸಿನೆಮಾಗಳಲ್ಲಿ ನಟಿಯಾಗಿ, ಸಪೋರ್ಟಿಂಗ್ ರೋಲ್ಸ್ ಮಾಡುತ್ತಾ ತನ್ನ ಅಭಿನಯದ ಮೂಲಕ ತನ್ನದೇ ಆದ ಅಭಿಮಾನಿ ಬಳಗವನ್ನು ಸಹ ಪಡೆದುಕೊಂಡಿದ್ದಾರೆ. ಸ್ಟಾರ್‍ ನಟರಾದ ಪ್ರಭಾಸ್, ಅಲ್ಲುಅರ್ಜುನ್ ರವರ ಸಿನೆಮಾಗಳಲ್ಲಿ ನಟಿಸಿ ಮತಷ್ಟು ಫೇಂ ಪಡೆದುಕೊಂಡರು. ಇನ್ನೂ ಸೋಷಿಯಲ್ ಮಿಡಿಯಾದಲ್ಲಂತೂ ಆಕೆ ಬಾಲಿವುಡ್ ನಟಿಯರನ್ನೂ ಮೀರಿಸುವಂತಹ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿರುತ್ತಾರೆ. ದಿನೇ ದಿನೇ ಗ್ಲಾಮರಸ್ ಆಗಿ ಬೋಲ್ಡ್ ಪೋಸ್ ಗಳನ್ನು ಕೊಡುತ್ತಾ ಎಲ್ಲರನ್ನೂ ಮಸ್ಮರೈಜ್ ಮಾಡುತ್ತಿರುತ್ತಾರೆ.

ಇನ್ನೂ ಇತ್ತೀಚಿಗೆ ಹೋಟೆಲ್ ಒಂದರಲ್ಲಿ ಶ್ರದ್ದಾದಾಸ್ ಕಾಣಿಸಿಕೊಂಡಿದ್ದರು. ಈ ವೇಳೆ ಆಕೆ ಮೈಂಡ್ ಬ್ಲಾಕ್ ಆಗುವಂತಹ ಪೋಟೋಶೂಟ್ಸ್ ಮಾಡಿಸಿದ್ದಾರೆ. ಟ್ರೆಡಿಷನಲ್ ಲುಕ್ಸ್ ನಲ್ಲಿ ಎಲ್ಲರನ್ನೂ ಮಂತ್ರಮುಗ್ದರನ್ನಾಗಿ ಮಾಡಿದ್ದಾರೆ. ವಯಸ್ಸು ಹೆಚ್ಚಾಗುತ್ತಿದ್ದರೂ ಯಂಗ್ ಲುಕ್ ನಲ್ಲಿ ಆಕರ್ಷಣೆ ಮಾಡುತ್ತಿದ್ದಾರೆ. ಅದೇ ರೀತಿ ಲೇಟೆಸ್ಟ್ ಫ್ಯಾಷನ್ ಸಹ ಪರಿಚಯಿಸಿದ್ದಾರೆ. ರೆಡ್  ಕಲರ್‍ ಹಾಫ್ ಸೀರೆಯಲ್ಲಿ ಆಕೆ ಬೋಲ್ಡ್ ಆಗಿ ಕಾಣಿಸಿಕೊಂಡು ಎಲ್ಲರನ್ನೂ ಫಿದಾ ಆಗುವಂತೆ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಆಕೆಯ ಮಾದಕತೆಗೆ ಫಿದಾ ಆದ ನೆಟ್ಟಿಗರು ಹಾಗೂ ಅಭಿಮಾನಿಗಳು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಅದರಲ್ಲಿ ಕೆಲವರು ನಿಮ್ಮ ಸೌಂದರ್ಯಕ್ಕೆ ಕೊಂಚ ಅದೃಷ್ಟ ಸಹ ಇದಿದ್ದರೇ, ನೀವು ಪಕ್ಕಾ ಸ್ಟಾರ್‍ ಹಿರೋಯಿನ್ ಆಗುತ್ತಿದ್ದೆ ಎಂದು ಕಾಮೆಂಟ್ ಗಳ ಮೂಲಕ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

ಇನ್ನೂ ಶ್ರದ್ದಾ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ವೈರಲ್ ಆಗುತ್ತಿದ್ದು, ವಿವಿಧ ರೀತಿಯ ಕಾಮೆಂಟ್ ಗಳು ಹರಿದುಬರುತ್ತಿವೆ. ಸದ್ಯ ಶ್ರದ್ದಾ ಢಿ ಎಂಬ ಡ್ಯಾನ್ಸ್ ಶೋಗೆ ಜಡ್ಜ್ ಆಗಿ ಮಿಂಚುತ್ತಿದ್ದಾರೆ. ಜೊತೆಗೆ ಪಾರಜಾತ ಪರ್ವಂ, ಅರ್ಧಂ, ನಿರೀಕ್ಷಣ ಎಂಬ ಸಿನೆಮಾಗಳಲ್ಲಿ ನಟಿಸಿದ್ದು, ಶೀಘ್ರದಲ್ಲೇ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.